ನ್ಯೂಸ್

ಐವರು ಕೊರಿಯನ್​ ಮಹಿಳೆಯರ ರೇಪ್​​: ಭಾರತ ಮೂಲದ ಧನಕರ್​ ಫೋನ್​ ನೋಡಿ ದಂಗಾದ ಸಿಡ್ನಿ ಪೊಲೀಸರು

ಮೆಲ್ಬೋರ್ನ್​: ಡ್ರಗ್ಸ್​ ನೀಡಿ ಐವರು ಕೊರಿಯನ್​ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆಸ್ಟ್ರೇಲಿಯಾದ ಭಾರತೀಯ ಸಮುದಾಯದ ಪ್ರಮುಖ ಸದಸ್ಯ ಬಾಲೇಶ್​ ಧನಕರ್​ ತಪ್ಪಿತಸ್ಥರೆಂದು ಸಾಬೀತಾಗಿದೆ.

ಅತ್ಯಂತ ಕೆಟ್ಟ ಅತ್ಯಾಚಾರಿ

ಈ ಘಟನೆ ಆಸ್ಟ್ರೇಲಿಯಾದ ಪ್ರಮುಖ ನಗರಗಳಲ್ಲಿ ಒಂದಾದ ಸಿಡ್ನಿಯಲ್ಲಿ ನಡೆದಿತ್ತು. ನಗರದ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಅತ್ಯಾಚಾರಿಗಳಲ್ಲಿ ಧನಕರ್​ ಕೂಡ ಒಬ್ಬನೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಿಡ್ನಿಯ ಡೌನಿಂಗ್​ ಸೆಂಟರ್​ನಲ್ಲಿರುವ ಜಿಲ್ಲಾ ನ್ಯಾಯಾಲಯ ತಪ್ಪಿತಸ್ಥನೆಂದು ತೀರ್ಪು ನೀಡಿದೆ. ಇದನ್ನೂ ಓದಿ: ಬಿಜೆಪಿಯ 175 ಪ್ರಮುಖರ ಜತೆ ಅಮಿತ್ ಷಾ ಮಹತ್ವದ ಸಭೆ; ಶೆಟ್ಟರ್ ಪ್ರಕರಣದ ಕುರಿತು ಹೇಳಿದ್ದೇನು?

ಸುಳ್ಳಿನ ಜಾಲ

ಸ್ಥಳೀಯವಾಗಿ ರಾಜಕೀಯ ಪ್ರಭಾವ ಹೊಂದಿದ್ದ ಪರಭಕ್ಷಕ ಧನಕರ್​, ಸುಳ್ಳಿನ ಜಾಲದ ಮೂಲಕ ಐವರು ಕೊರಿಯನ್​ ಮಹಿಳೆಯರಿಗೆ ಆಮಿಷವೊಡ್ಡಿದ್ದ. ಬಳಿಕ ಅವರಿಗೆ ಡ್ರಗ್ಸ್​ ನೀಡಿ, ಪ್ರಜ್ಞೆ ತಪ್ಪಿಸಿ ಮೃಗೀಯವಾಗಿ ಅತ್ಯಾಚಾರ ಎಸಗಿದ್ದ ಎಂದು ಸಿಡ್ನಿಯ ಮಾರ್ನಿಂಗ್​ ಹೆರಾಲ್ಡ್​ ನ್ಯೂಸ್​ ಪೇಪರ್​ ವರದಿ ಮಾಡಿದೆ.

ರಹಸ್ಯ ಕ್ಯಾಮೆರಾ

ಧನಕರ್​ ಅವರು ಆಸ್ಟ್ರೇಲಿಯಾದ 'ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ'ಯ ಮಾಜಿ ಮುಖ್ಯಸ್ಥರಾಗಿದ್ದರು ಎಂದು ವರದಿ ಮಾಡಿದೆ. ತನ್ನ ಫೋನ್​ ಕ್ಯಾಮೆರಾ ಮತ್ತು ಅಲರಾಂ ಗಡಿಯಾರದ ಒಳಗೆ ರಹಸ್ಯ ಕ್ಯಾಮೆರಾವನ್ನು ಇಟ್ಟು, ತಾನು ಎಸಗಿದ ನೀಚ ಕೃತ್ಯವನ್ನು ಧನಕರ್​ ರೆಕಾರ್ಡ್​ ಸಹ ಮಾಡಿಕೊಂಡಿದ್ದ. ಸಿಡ್ನಿಯ ಇತ್ತೀಚಿನ ಇತಿಹಾಸದಲ್ಲೇ ಧನಕರ್​ ಅತ್ಯಂತ ಕೆಟ್ಟ ಅತ್ಯಾಚಾರಿ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ ಎಂದು ಮಾರ್ನಿಂಗ್​ ಹೆರಾಲ್ಡ್​ ಹೇಳಿದೆ.

ಜಾಮೀನು ನೀಡುವಂತೆ ಮನವಿ

ಧನಕರ್​ ಓರ್ವ ದತ್ತಾಂಶ ತಜ್ಞ. ತನ್ನ ವಿರುದ್ಧದ 39 ಆರೋಪಗಳಲ್ಲಿ ಪ್ರತಿಯೊಂದಕ್ಕೂ "ತಪ್ಪಿತಸ್ಥ" ಎಂದು ಸೋಮವಾರ ನ್ಯಾಯಾಲಯ ತೀರ್ಪು ನೀಡುತ್ತಿದ್ದಂತೆ ಕಣ್ಣೀರು ಸುರಿಸಿದ್ದ. ಜಾಮೀನು ನೀಡುವಂತೆ ಧನಕರ್​ ಕೇಳಿಕೊಂಡರು ನ್ಯಾಯಾಲಯ ಮಾತ್ರ ತಿರಸ್ಕರಿಸಿದೆ. ಬಳಿಕ ಧನಕರ್​ ಕೈಗೆ ಕೋಳ ತೊಡಿಸಿ ಅಧಿಕಾರಿಗಳು ಕರೆದೊಯ್ದರು.

ಪತ್ನಿ ಕೂಡ ಕಣ್ಣೀರು

43 ವರ್ಷದ ಧನಕರ್​ ಮೇ ತಿಂಗಳಲ್ಲಿ ಮತ್ತೊಮ್ಮೆ ನ್ಯಾಯಾಲಯವನ್ನು ಎದುರಿಸಬೇಕಿದೆ. ಈ ವರ್ಷದ ಅಂತಿಮದಲ್ಲಿ ಆತನಿಗೆ ಕಠಿಣ ಶಿಕ್ಷೆ ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಧನಕರ್​ ಪತ್ನಿ ಕೂಡ ಕಣ್ಣೀರು ಹಾಕುತ್ತಾ ತನ್ನ ಗಂಡ ಪರವಾಗಿ ನಿಂತಳು. ಇದನ್ನೂ ಓದಿ: ಭಾರತ-ಚೀನಾ ಜನಸಂಖ್ಯೆ ಕುರಿತು ವ್ಯಂಗ್ಯಚಿತ್ರ; ವ್ಯಾಪಕ ಖಂಡನೆ

ಲೈಂಗಿಕತೆಯಲ್ಲಿ ತೃಪ್ತಿ ಸಿಗದ ಕಾರಣ

ವಿವಾಹೇತರ ಸಂಬಂಧ ಮುರಿದುಬಿದ್ದ ನಂತರ ಒಂಟಿಯಾಗಿದ್ದ ಕಾರಣ ತಾನು ಕೊರಿಯನ್​ ಮಹಿಳೆಯರಿಗೆ ಸುಳ್ಳು ಹೇಳಿದ್ದೇನೆ ಎಂದು ನ್ಯಾಯಾಲಯದ ಮುಂದೆ ವಿವರಿಸುವಾಗ ಧನಕರ್​ ಕಣ್ಣೀರಾಕಿದ. ಮದುವೆಯ ಬಳಿಕ ಪತ್ನಿಯಿಂದ ಲೈಂಗಿಕತೆಯಲ್ಲಿ ತೃಪ್ತಿ ಸಿಗದ ಕಾರಣ ನನ್ನ ಒಂಟಿತನದಿಂದ ಈ ಅಚಾತುರ್ಯ ನಡೆದಿದೆ ಎಂದು ತನ್ನನ್ನು ತಾನು ದೂಷಿಸಿದನು ಎಂದು ಮಾರ್ನಿಂಗ್​ ಹೆರಾಲ್ಡ್​ ವರದಿ ಮಾಡಿದೆ.

ಧನಕರ್​ ತನ್ನ ಕಾನೂನು ರಕ್ಷಣೆಗಾಗಿ ತನ್ನ ಕುಟುಂಬದ ಆಸ್ತಿಗಳು ಮಾರಾಟ ಮಾಡಿದ್ದು, ಅವನ ಪರವಾಗಿ ವಾದಿಸಲು ರೈಸಿಂಗ್ ಸ್ಟಾರ್ ಬ್ಯಾರಿಸ್ಟರ್ ಅನ್ನು ನಿಯೋಜಿಸಲಾಗಿದೆ.

ಡಜನ್​ಗಟ್ಟಲೆ ವಿಡಿಯೋ

ಧನಕರ್​, ಮಹಿಳೆಯರ ಜತೆ ಇರುವ ಡಜನ್​ಗಟ್ಟಲೆ ವಿಡಿಯೋವನ್ನು 2018ರಲ್ಲಿ ಪೊಲೀಸರು ಕಂಡುಕೊಂಡರು. ವಿಡಿಯೋಗಳಲ್ಲಿ ಕೆಲವೊಮ್ಮೆ ಹೆಂಗಸರು ಪ್ರಜ್ಞಾಹೀನರಾಗಿದ್ದರೆ, ಮತ್ತೆ ಕೆಲವು ದುಃಸ್ವಪ್ನದಂತೆ ನರಳುತ್ತಾರೆ. ಪೋಲ್ಡರ್​ಗಳಲ್ಲಿ ವಿಡಿಯೋಗಳನ್ನಿಟ್ಟು ಪ್ರತಿಯೊಂದು ಫೋಲ್ಡರ್​ಗೂ ಕೊರಿಯನ್​ ಮಹಿಳೆಯರ ಹೆಸರನ್ನು ಇಡಲಾಗಿತ್ತು. ಇಷ್ಟೇ ಅಲ್ಲದೆ, ಧನಕರ್​ ಬ್ರೌಸರ್‌ನಲ್ಲಿ ಬುಕ್‌ಮಾರ್ಕ್‌ಗಳ ಸರಣಿಯನ್ನು ಪೊಲೀಸರು ಕಂಡುಕೊಂಡರು. ಇದನ್ನೂ ಓದಿ: ಅಹಿಂದ ನಾಯಕನನ್ನು ಹಣಿಯಲು ಅಹಿಂದ ಅಸ್ತ್ರ ಹೂಡಿದ ಕುಮಾರಸ್ವಾಮಿ

95 ನಿಮಿಷದ ವಿಡಿಯೋ

ಒಂದು ವಿಡಿಯೋ ಸುಮಾರು 95 ನಿಮಿಷ ಇದ್ದು, ಅದರಲ್ಲಿ ಪ್ರಜ್ಞಾಹೀನ ಮಹಿಳೆಯರ ಜೊತೆ ಧನಕರ್​ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಧನಕರ್​ ಪ್ರಕರಣದ ಉಸ್ತುವಾರಿ ವಹಿಸಿರುವ ನ್ಯೂ ಸೌತ್ ವೇಲ್ಸ್ ಪೋಲೀಸ್ ಅಧಿಕಾರಿ ಸಾರ್ಜೆಂಟ್ ಕತ್ರಿನಾ ಗೈಡೆ, ಧನಕ್​ರ್ ಗೊಂದಲದ ಕಲ್ಪನೆಯಿಂದ ಬದುಕುತ್ತಿದ್ದಾರೆ ಎಂದು ಶಂಕಿಸಿದ್ದಾರೆ. (ಏಜೆನ್ಸೀಸ್​)