ನವದೆಹಲಿ: ಭಾರತೀಯ ವೈದ್ಯಕಿಯ ಪದವೀಧರರು ಈಗ ಯುನೈಟೆಡ್ ಸ್ಟೇಟ್ಸ್, ಕೆನಡಾ, ಆಸ್ಟ್ರೆಲಿಯಾ, ನ್ಯೂಜಿಲೆಂಡ್ ಇತರ ದೇಶಗಳಲ್ಲಿ ಸ್ನಾತಕೋತ್ತರ ತರಬೇತಿ ಮತ್ತು ಅಭ್ಯಾಸ ಮಾಡಬಹುದು. ಈ ವಿಚಾರದಲ್ಲಿ ವಿಶ್ವ ವೈದ್ಯಕಿಯ ಶಿಕ್ಷಣ ಒಕ್ಕೂಟವು ಭಾರತದ ರಾಷ್ಟ್ರೀಯ ವೈದ್ಯಕಿಯ ಆಯೋಗಕ್ಕೆ (ಎನ್ಎಮ್ಸಿ) ಹಸಿರು ನಿಶಾನೆ ತೋರಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ವೈದ್ಯಕಿಯ ಶಿಕ್ಷಣಕ್ಕಾಗಿ ವಿಶ್ವ ಫೆಡರೇಷನ್ 10 ವರ್ಷಗಳ ಅವಧಿಗೆ ಭಾರತದ ರಾಷ್ಟ್ರೀಯ ವೈದ್ಯಕಿಯ ಆಯೋಗಕ್ಕೆ (ಎನ್ಎಮ್ಸಿ) ಆಸ್ಕರ್ ಮಾನ್ಯತೆ ಸ್ಥಾನಮಾನ ನೀಡಿದೆ. ಇದು ನಮ್ಮ ದೇಶದ ವೈದ್ಯಕಿಯ ಶಿಣದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ ಮತ್ತು ಭಾರತೀಯ ವೈದ್ಯರೂ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುವ ಅವಕಾಶ ಪಡೆಯಲಿದ್ದಾರೆ.
ಈ ಮಾನ್ಯತೆಯ ಅಡಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲ 706 ವೈದ್ಯಕಿಯ ಕಾಲೇಜುಗಳು ಡಬ್ಲ್ಯುಎಎಮ್ಇ ಮಾನ್ಯತೆ ಪಡೆಯುತ್ತವೆ ಮತ್ತು ದೇಶದಲ್ಲಿ ಪ್ರಾರಂಭವಾಗುವ ಯಾವುದೇ ಹೊಸ ವೈದ್ಯಕಿಯ ಕಾಲೇಜುಗಳು ಸ್ವಯಂಚಾಲಿತವಾಗಿ ಮಾನ್ಯತೆ ಪಡೆಯುತ್ತವೆ. ಇದನ್ನು 10 ವರ್ಷಗಳವರೆಗೆ ಪಡೆಯಬಹುದು.
ಇದು ವಿಶ್ವಾದ್ಯಂತ ವೈದ್ಯಕಿಯ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಮೀಸಲಾಗಿರುವ ಜಾಗತಿಕ ಸಂಸ್ಥೆಯಾಗಿದೆ. ಎಲ್ಲರ ಆರೋಗ್ಯ ರಣೆಗಾಗಿ ಶ್ರಮಿಸುವುದು ಮತ್ತು ವೈದ್ಯಕಿಯ ಶಿಣದಲ್ಲಿ ಅತ್ಯುನ್ನತ ವೈಾನಿಕ ಮತ್ತು ನೈತಿಕ ಮಾನದಂಡಗಳ ಪ್ರಚಾರದೊಂದಿಗೆ ವಿಶ್ವಾದ್ಯಂತ ವೈದ್ಯಕಿಯ ಶಿಣದ ಗುಣಮಟ್ಟವನ್ನು ಹೆಚ್ಚಿಸುವುದು ಈ ಸಂಸ್ಥೆಯ ಪ್ರಾಥಮಿಕ ಉದ್ದೇಶವಾಗಿದೆ.
ವೈದ್ಯಕಿಯ ಶಿಕ್ಷಣಕ್ಕಾಗಿ ವಿಶ್ವ ಒಕ್ಕೂಟದಿಂದ ಈ ಮನ್ನಣೆ ಸುಲಭವಾಗಿ ಪಡೆಯಲಾಗದು. ವೈದ್ಯಕಿಯ ಸಂಸ್ಥೆಗಳು ಶಿಣ ಮತ್ತು ತರಬೇತಿಯ ಅತ್ಯುನ್ನತ ಅಂತಾರಾಷ್ಟ್ರೀಯ ಗುಣಮಟ್ಟವನ್ನು ನಿರ್ವಹಿಸದ ಹೊರತು ಈ ಮಾನ್ಯತೆ ಸಿಗುವುದಿಲ್ಲ. ಮಾನ್ಯತೆ ಪಡೆಯುವುದರದಿಂದ ಭಾರತದಲ್ಲಿ ಶಿಣದ ಮಟ್ಟವೂ ಹೆಚ್ಚಲಿದ್ದು, ಜಾಗತಿಕ ಮಟ್ಟದಲ್ಲಿ ಭಾರತ ಹೊಸ ಗುರುತನ್ನು ಪಡೆಯಲಿದೆ.
ಅತ್ಯುತ್ತಮ ಮೂಲಸೌಕರ್ಯಗಳ ಲಭ್ಯತೆ, ಆಧುನಿಕ ತಂತ್ರಜ್ಞಾನಗಳ ಅಧ್ಯಯನಕ್ಕೆ ಅವಕಾಶ, ಕಡಿಮೆ ಶುಲ್ಕ ಅಥವಾ ಡೊನೇಷನ್ ರಹಿತ ದಾಖಲಾತಿ, ಜಗತ್ತಿನಾದ್ಯಂತ ಹೆಚ್ಚು ಇರುವ ಅವಕಾಶಗಳು, ವಸ್ತುನಿಷ್ಠ ಪರೀಕ್ಷಾ ಮಾದರಿ, ಅತ್ಯುನ್ನತ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿವೇತನ ಸವಲತ್ತು, ಪ್ರವೇಶಾತಿ ಪರೀಕ್ಷೆ ರಹಿತ ವ್ಯವಸ್ಥೆಯು ವಿದೇಶಿ ವೈದ್ಯಕಿಯ ಶಿಣದತ್ತ ಭಾರತೀಯ ವಿದ್ಯಾರ್ಥಿಗಳನನ್ನು ಆಕರ್ಷಿತರಾಗುವಂತೆ ಮಾಡಿದೆ.