ನ್ಯೂಸ್

ಅಗ್ನಿ ಅವಘಡ; ಭಾರತ ಮೂಲದ ಯುವ ಪತ್ರಕರ್ತ ಸಾವು

ನವದೆಹಲಿ: ಅಪಾರ್ಟ್​ಮೆಂಟ್​ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಭಾರತ ಮೂಲದ ಪತ್ರಕರ್ತ ಮೃತಪಟ್ಟಿರುವ ಘಟನೆ ನ್ಯೂಯಾರ್ಕ್‌ನ ಹಾರ್ಲೆಮ್‌ನ ಮ್ಯಾನ್‌ಹ್ಯಾಟನ್‌ನಲ್ಲಿ ನಡೆದಿದೆ.

ಮೃತರನ್ನು ಫಾಜಿಲ್​ ಖಾನ್​ (27) ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ 17ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಫಾಜಿಲ್ ಖಾನ್  ನ್ಯೂಯಾರ್ಕ್ ಮೂಲದ ದಿ ಹೆಚಿಂಗರ್​ನಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಲಿಥಿಯಂ– ಐಯಾನ್ ಬ್ಯಾಟರಿಯಿಂದಾಗಿ ಉಂಟಾದ ಸ್ಫೋಟದಿಂದ ಅಗ್ನಿ ಅವಘಡ ಸಂಭವಿಸಿದೆ. ಈ ಬಗ್ಗೆ ದೂರು ನೀಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ, ಫಾಜಿಲ್​ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.