ನ್ಯೂಸ್

ಈ ರೆಸ್ಟೋರೆಂಟ್​ನಲ್ಲಿ ಪ್ಲೇಟ್​ಗೂ ಶುಲ್ಕ​! ಭಾರತೀಯ ಮಹಿಳೆಯ ಹಾಸ್ಯಾಸ್ಪದ ಮಾತು ಎಲ್ಲೆಡೆ ವೈರಲ್​ Restaurant

Restaurant: "ದೇಶ ಸುತ್ತಿ ನೋಡು ಕೋಶ ಓದಿ ನೋಡು" ಅಂದಹಾಗೇ ಇಲ್ಲೊಬ್ಬ ಭಾರತೀಯ ಕಂಟೆಂಟ್​ ಕ್ರಿಯೆಟರ್​ ವಾಗ್ಮಿತಾ ಸಿಂಗ್ ತನ್ನ ಸ್ನೇಹಿತರೊಂದಿಗೆ ಇಟಲಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿನ ರೆಸ್ಟೋರೆಂಟ್​ನಲ್ಲಿ ವಿಧಿಸಲಾದ ಬಿಲ್​ಗಳ ಬಗ್ಗೆ ಆದ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದು, ಇದೀಗ ಎಲ್ಲೆಡೆ ವೈರಲ್​ ಆಗಿದೆ.

ವೈರಲ್​ ವಿಡಿಯೋದಲ್ಲೇನಿದೆ?

ಸಿಂಗ್​ ಹಾಗೂ ಆಕೆಯ ಸ್ನೇಹಿತರು ಇಟಲಿಯ ರೆಸ್ಟೋರೆಂಟ್​ನಲ್ಲಿ ಊಟ ಮಾಡಿದ ನಂತರ ಅದರ ಬಿಲ್​ನ್ನು ನೋಡಿ ಆಶ್ಚರ್ಯಚಕಿತರಾಗಿದ್ದು, ಇಟಲಿಯ ರೆಸ್ಟೋರೆಂಟ್​ನಲ್ಲಿ ತಿನ್ನುವುದು ರಾಷ್ಟ್ರೀಯ ಪರೀಕ್ಷೆಗಿಂತ ಕಡಿಮೆ ಏನಿಲ್ಲ ಎಂದು ನಾನು ಅಥೈಸಿಕೊಂಡಿದ್ದೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.

ನನಗೆ ನೀಡಿದ ಬಿಲ್​ನಲ್ಲಿ ಕೋಪರ್ಟೊ ಶುಲ್ಕವನ್ನು ಹೇರಲಾಗಿತ್ತು. ಇದರ ಬಗ್ಗೆ ಗೊಂದಲ ವ್ಯಕ್ತಪಡಿಸಿದ ಸಿಂಗ್​ ಅಲ್ಲಿನ ಸಿಬ್ಬಂದಿಯನ್ನು ಕರೆದು ಕೇಳಿದಾಗ ಆಕೆ ಸಿಟ್ಟಾಗಿ ನೀವು ತಟ್ಟೆಯಲ್ಲಿ ಊಟ ಮಾಡಿದ್ದೀರಿ ಅದಕ್ಕೆ ಬಿಲ್​ನ್ನು ವಿಧಿಸಲಾಗಿದೆ ಎಂದು ಹೇಳಿದಳು.

ನನಗೆ ಗಂಟಲು ನೋವಾಗುತ್ತಿತ್ತು. ಐಸ್​ ಇಲ್ಲದೆ ಪಾನಿಯ ಕುಡಿಯಲು ಒಂದು ವಿನಂತಿ ಮಾಡಿಕೊಂಡೆ ಆದರೆ ಸಿಬ್ಬಂದಿ ಅದನ್ನು ನಾನು ಗಾಜಿನ ಲೋಟದಲ್ಲಿ ಕೈಯಿಟ್ಟು ಪರಿಶೀಲಿಸಬೇಕು ಎಂದು ಹೇಳಿರುವುದು ಸಿಂಗ್​ ಅವರಿಗೆ ನಿರಾಶೆ ಮಾಡಿತು.

ನೆಟ್ಟಿಗರ ಪ್ರತಿಕ್ರಿಯೆ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಂತೆಯೇ, ಒಬ್ಬ ಇನ್ಸ್​ಸ್ಟಾಗ್ರಾಮ್​ ಬಳಕೆದಾರ ನಾನು ಕೂಡಾ ಇಟಲಿಗೆ ಹೋಗಿದ್ದೇನೆ. ಇದನ್ನು ಅನುಭವಿಸಿದ್ದೇನೆ ಭಾರತಕ್ಕಿಂತ ಉತ್ತಮವಾದ ದೇಶ ಇನ್ನೊಂದಿಲ್ಲ. ಯುರೋಪ್​ ಖಂಡದಲ್ಲಿ ರೆಸ್ಟೋರೆಂಟ್​ ಉದ್ಯಮವು ತುಂಬಾ ಅಸಭ್ಯವಾಗಿ ವರ್ತಿಸುತ್ತದೆ ಎಂದು ಕಮೆಂಟ್​​ ಮಾಡಿದ್ದಾರೆ.

ಕೊಪರ್ಟೊ ಶುಲ್ಕ ಎಂದರೇನು?

ಕೊಪರ್ಟೊ ಶುಲ್ಕ ಎಂದರೆ ಕವರ್ ಚಾರ್ಜ್ ಎಂದು ಕರೆಯಲಾಗುತ್ತದೆ. ಇದು ಶತಮಾನಗಳ ಹಿಂದಿನ ಸಾಂಪ್ರದಾಯಿಕ ಇಟಾಲಿಯನ್ ಊಟದ ಅಭ್ಯಾಸವಾಗಿದೆ. ಇದು ಗುಪ್ತ ವಂಚನೆಯಲ್ಲ, ಬದಲಿಗೆ, ಇದು ಟೇಬಲ್ ಸೆಟ್ಟಿಂಗ್‌ಗಳು, ಬ್ರೆಡ್, ನೀರು ಮತ್ತು ಕಟ್ಲರಿಗಳ ಬಳಕೆಯನ್ನು ಒಳಗೊಂಡಿರುವ ಒಂದು ಸಾಂಪ್ರದಾಯಿಕ ಶುಲ್ಕವಾಗಿದೆ.

ಈ ಶುಲ್ಕವು ಪ್ರವಾಸಿಗರನ್ನು ಅಚ್ಚರಿಗೊಳಿಸಬಹುದು, ಆದರೆ ಸ್ಥಳೀಯರು ಇದಕ್ಕೆ ಸಾಕಷ್ಟು ಒಗ್ಗಿಕೊಂಡಿದ್ದಾರೆ. ಇಟಾಲಿಯನ್ ರೆಸ್ಟೋರೆಂಟ್‌ಗಳು ಸಾಮಾನ್ಯವಾಗಿ ತಮ್ಮ ಮೆನು ಅಥವಾ ಬಿಲ್‌ನಲ್ಲಿ ಕೋಪರ್ಟೊ ಎಂದು ಉಲ್ಲೇಖಿಸುತ್ತವೆ. ಹಾಗಾಗಿ ಗ್ರಾಹಕರು ಅದರ ಬಗ್ಗೆ ಮೊದಲೇ ತಿಳಿದಿರುತ್ತಾರೆ. (ಏಜೆನ್ಸೀಸ್​)