ನ್ಯೂಸ್

VIDEO| ಜಂಟಿ ಸಮರಾಭ್ಯಾಸದ ವೇಳೆ "ಬಜರಂಗ್​ ಬಲಿ ಕಿ ಜೈ" ಎಂದ ಸೈನಿಕರು!

ಲಂಡನ್​: ಇತ್ತೀಚಿನ ದಿನಗಳಲ್ಲಿ ಬಜರಂಗ ಬಲಿ ಕಿ ಜೈ ಎಂಬ ಘೋಷಣೆಯೂ ಎಲ್ಲೆಡೆ ವ್ಯಾಪಕವಾಗಿ ಕೇಳಿ ಬರುತ್ತಿದ್ದು ಇದೀಗ ಭಾರತೀಯ ಸೇನೆಯ ಯೋಧರು ಸಹ ಇದನ್ನೇ ಹೇಳಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಯುಕೆ ಜೊತೆಗಿನ ಸಮರಾಭ್ಯಾಸದ ವೇಳೆ ಭಾರತೀಯ ಸೇನೆಯ ಸೈನಿಕರು ಘೋಷಣೆಗಳನ್ಯು ಕೂಗಿದ್ದಾರೆ.

ಬಜರಂಗ್​ ಬಲಿ ಕಿ ಜೈ

ಯುನೈಟೆಡ್​ ಕಿಂಗ್​ಡಮ್​ನ ಸಾಲಿಸ್​ಬರ್​​ ಪ್ಲೇನ್ಸ್​ನಲ್ಲಿ ಅಜಯ್​ ವಾರಿಯರ್​-23ರ 7ನೇ ಆವೃತ್ತಿಯಲ್ಲಿ ಭಾರತ ಹಾಗೂ ಯುಕೆ ಸೇನೆಯೂ ನಡೆಸುತ್ತಿರುವ ಜಂಟಿ ಸಮರಾಭ್ಯಾಸದಲ್ಲಿ ಘೋಷಣೆಗಳು ಮೊಳಗಿವೆ.

ಭಾರತೀಯ ಸೇನೆಯ ಯೋಧರು ಭಾರತ್​ ಮಾತಾ ಕಿ ಹಾಗೂ ಬಜರಂಗ್​​ ಬಲಿ ಕಿ ಜೈ ಎಂದು ಘೋಷಣೆಗಳನ್ನು ಕೂಗಿರುದವ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.