ನವದೆಹಲಿ: ಎಲೆಕ್ಟ್ರಾನಿಕ್ ಉದ್ಯಮವನ್ನು ಮುನ್ನಡೆಸುವಲ್ಲಿ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಸಾಮರ್ಥ್ಯಗಳನ್ನು ಸುಧಾರಿಸುವಲ್ಲಿ ತೋರಿಸಿರುವ ಸಾಧನೆಗಾಗಿ ಭಾರತೀಯ ಮೂಲದ ಅಮೆರಿಕನ್ ಸಂಶೋಧಕ ರಾಜೀವ್ ಜೋಶಿ ಅವರು ಅವರು ವರ್ಷದ ಪ್ರತಿಷ್ಠಿತ ವರ್ಷದ ಇನ್ವೆಂಟರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ನ್ಯೂಯಾರ್ಕ್ ಬೌದ್ಧಿಕ ಆಸ್ತಿ ಕಾನೂನು ಸಂಘವು ಈ ತಿಂಗಳ ಆರಂಭದಲ್ಲಿ ನಡೆಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಈ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಯಿತು.
ಅಮೆರಿಕದಲ್ಲಿ 250ಕ್ಕೂ ಹೆಚ್ಚು ಆವಿಷ್ಕಾರಗಳನ್ನು ಮಾಡುವ ಮೂಲಕ ಅವುಗಳ ಪೇಟೆಂಟ್ ಹೊಂದಿರುವ ಖ್ಯಾತಿ ಪಡೆದಿದ್ದಾರೆ. ಸದ್ಯ ಇವರು ನ್ಯೂಯಾರ್ಕ್‌ನ ಐಬಿಎಂ ಥಾಮಸ್ ವಾಟ್ಸ್ಸನ್ ರೀಸರ್ಚ್ ಸೆಂಟರ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಜೋಶಿಯವರು ಐಐಟಿ ಮುಂಬೈ ಹಳೆಯ ವಿದ್ಯಾರ್ಥಿ, ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ (ಎಂಐಟಿ) ಎಂಎಸ್ ಪದವಿ ಮತ್ತು ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿಯನ್ನು ಇವರು ಪಡೆದಿದ್ದಾರೆ.
ಸೂಪರ್ ಕಂಪ್ಯೂಟರ್, ಲ್ಯಾಪ್ಟಾಪ್, ಸ್ಮಾರ್ಟ್ಫೋನ್ ಸೇರಿದಂತೆ ಹಲವಾರು ಗ್ಯಾಜೆಟ್ಗಳಲ್ಲಿ ಇವರು ನಡೆಸಿರುವ ಸಂಶೋಧನೆಗಳು ಅತ್ಯದ್ಭುತವಾಗಿದ್ದು, ತಂತ್ರಜ್ಞಾನದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ.
ಮೇಡಂ ಕ್ಯೂರಿ, ರೈಟ್ ಬ್ರದರ್ಸ್, ಜೇಮ್ಸ್ ವ್ಯಾಟ್, ಥಾಮಸ್ ಎಡಿಸನ್, ಅಲೆಕ್ಸಾಂಡರ್ ಬೆಲ್ ಸೇರಿದಂತೆ ಮಹಾನ್ ತಂತ್ರಜ್ಞರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುವ ಜೋಶಿ ಅವರು, ಇಂಥವರ ಯಶಸ್ವಿ ಜೀವನಗಾಥೆ ತಮಗೆ ಪ್ರೇರಣೆ ನೀಡಿದೆ ಎಂದಿದ್ದಾರೆ. (ಏಜೆನ್ಸೀಸ್)