More

    ಸಿರಿವಂತ ವಿದೇಶಿ ಹುಡುಗನೆಂದು ನಂಬಿ ಐದೂವರೆ ಲಕ್ಷ ಕಳಕೊಂಡ ಬೆಂಗಳೂರು ಮಹಿಳೆ!

    ಬೆಂಗಳೂರು: ಅಪರಿಚಿತರಿಗೆ ಅದರಲ್ಲಿಯೂ ಸಾಮಾಜಿಕ ಜಾಲತಾಣವೋ ಅಥವಾ ಇಂಟರ್​ನೆಟ್​ ಮೂಲಕವೋ ಪರಿಚಯವಾದವರನ್ನು ನಂಬಬೇಡಿ, ಅಪರಿಚಿತರು ಹಣ ಕೇಳಿದರೆ ಕೊಡಬೇಡಿ, ಸೈಬರ್​ ವಂಚನೆಗೆ ಸಿಲುಕಬೇಡಿ ಎಂದು ಸರ್ಕಾರ, ಪೊಲೀಸರು, ಮಾಧ್ಯಮಗಳು ದಿನನಿತ್ಯವೂ ಬುದ್ಧಿ ಹೇಳುತ್ತ ಬಂದರೂ ಅದು ಎಷ್ಟೋ ಮಂದಿಯ ತಲೆಯೊಳಗೆ ಹೋಗುತ್ತಲೇ ಇಲ್ಲವೇನೋ!

    ಅದರಲ್ಲಿಯೂ ಮದುವೆಯಾಗುವುದಾಗಿ ನಂಬಿಸಿಯೋ ಅಥವಾ ಉದ್ಯೋಗದ ಆಮಿಷ ಒಡ್ಡಿಯೋ ಹಣ ದೋಚುವವರ ಸಂಖ್ಯೆ ಇತ್ತೀಚೆಗೆ ವಿಪರೀತವಾಗಿ ಹೆಚ್ಚುತ್ತಿರುವ ಬಗೆಗಿನ ವರದಿಗಳು ಆಗುತ್ತಲಿದ್ದರೂ, ಅದರ ಬಗ್ಗೆ ಗಮನವೇ ಕೊಡದೇ ಲಕ್ಷ ಲಕ್ಷ ಹಣ ಕಳೆದುಕೊಳ್ಳುವವರು ಹೆಚ್ಚುತ್ತಲೇ ಇರುವುದು ದುರದೃಷ್ಟಕರ.

    ಅಂಥದ್ದೇ ಒಂದು ಮೋಸದ ಜಾಲಕ್ಕೆ ಸಿಲುಕಿರುವ ಬೆಂಗಳೂರಿನ 46 ವರ್ಷದ ಮಹಿಳೆ ಇದೀಗ 5.6 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ! ಬೆಂಗಳೂರಿನ ಜಯನಗರದ ನಿವಾಸಿಯಾಗಿರುವ ಈ ಮಹಿಳೆ ಮ್ಯಾಟ್ರಿಮೋನಿ ವೆಬ್​ಸೈಟ್ ಒಂದರಲ್ಲಿ ಪರಿಚಯವಾದ ವ್ಯಕ್ತಿಗೆ ದುಡ್ಡು ಕೊಟ್ಟು ಈಗ ಪೊಲೀಸರಿಗೆ ದೂರು ನೀಡಿದ್ದಾರೆ!

    ಇದನ್ನೂ ಓದಿ: ಆರೋಗ್ಯವಾಗಿದ್ದ ಮದುಮಗಳಿಗೆ ವೈದ್ಯರು ಕೊಟ್ಟರು ಕರೊನಾ ಪಾಸಿಟಿವ್ ರಿಪೋರ್ಟ್​​: ಮುಂದೇನಾಯ್ತು?

    ಈ ಮಹಿಳೆ 2019ರ ಆಗಸ್ಟ್‌ನಲ್ಲಿ ಮದುವೆಯಾಗುವ ಸಂಬಂಧ ವೆಬ್​ಸೈಟ್ ಒಂದರಲ್ಲಿ ತಮ್ಮ ಖಾತೆ ತೆರೆದಿದ್ದರು. ಅದರಲ್ಲಿ ತನ್ನನ್ನು ತಾನು ರಿಯಾನ್ಶ್​ ದಿನೇಶ್ ಆಚಾರ್ಯ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಈ ಮಹಿಳೆಯನ್ನು ಮದುವೆಯಾಗುವ ಆಸೆ ವ್ಯಕ್ತಪಡಿಸಿದ. ಮಲೇಷಿಯಾದಲ್ಲಿ ತಮ್ಮದು ಬಹುದೊಡ್ಡ ಬಿಜಿನೆಸ್​ ಇದೆ ಎಂದೂ ಹೇಳಿದ ಆ ವ್ಯಕ್ತಿ ತಾನು ಬಹುದೊಡ್ಡ ಶ್ರೀಮಂತ ಎಂದು ಪರಿಚಯಿಸಿಕೊಂಡ. ಹೀಗೆ ಪರಿಚಯವಾಗಿ ಮೊಬೈಲ್​ ನಂಬರ್​ ಕೂಡ ಎಕ್ಸ್​ಚೇಂಜ್​ ಆಯಿತು.

    ಮೊಬೈಲ್​ ನಂಬರ್​ ನೋಡಿದ ಮಹಿಳೆ ತುಂಬಾ ಖುಷಿಪಟ್ಟರು. ಏಕೆಂದರೆ ಅದರ ಐಎಸ್​ಡಿ ಸಂಖ್ಯೆ ಇಂಗ್ಲೆಂಡ್​ನದ್ದು ಇತ್ತು. ವಿದೇಶಿ ಹುಡುಗ, ಶ್ರೀಮಂತ ಬೇರೆ, ಮಲೇಷಿಯಾದಲ್ಲಿ ವ್ಯವಹಾರ… ಇನ್ನೇನು ಬೇಕು ಎಂದುಕೊಂಡು ಈ ಮಹಿಳೆ ಫೋನಿನಲ್ಲಿ ಮಾತುಕತೆ ಆರಂಭಿಸಿದರು.

    ಪ್ರತಿ ದಿನ ಕರೆ ಮತ್ತು ಮೆಸೇಜ್ ಮಾಡುತ್ತಿದ್ದ ಆತ, ಮಹಿಳೆಯ ಬಳಿ ಸಾಕಷ್ಟು ಹಣ ಇರುವುದನ್ನು ತಿಳಿದುಕೊಂಡಿದ್ದಾನೆ. ತಾನು ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾನೆ. ನಂತರ ಒಮ್ಮೆ ಕರೆ ಮಾಡಿ, ‘ನನ್ನ ತಂದೆ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದು, ಅವರ ವ್ಯಾಪಾರವನ್ನು ನಾನು ನೋಡಿಕೊಳ್ಳುತ್ತಿದ್ದೇನೆ. ಆ ಕಾರಣದಿಂದ ನಾನು ಮಲೇಷಿಯಾಗೆ ಬಂದಿದ್ದೇನೆ. ತಂದೆ ಇಲ್ಲಿನ ಕೆಲ ಉದ್ಯೋಗಿಗಳಿಗೆ ಸಾಯುವ ಮುನ್ನ ದೊಡ್ಡ ಮಟ್ಟದ ಹಣ ಕೊಟ್ಟಿದ್ದಾರೆ. ಅದನ್ನು ನಾನು ವಾಪಸ್ ಪಡೆಯಬೇಕಾಗಿದೆ. ಆದ್ದರಿಂದ ಆ ಹಣವನ್ನು ಪಡೆಯಲು ಶುಲ್ಕ ಕಟ್ಟಬೇಕು. ಆದರೆ ನನ್ನ ಬಳಿ ಸದ್ಯ ಹಣವಿಲ್ಲ. 6 ಲಕ್ಷ ರೂಪಾಯಿ ಬೇಕಾಗಿದೆ’ ಎಂದಿದ್ದಾನೆ.

    ಇದನ್ನೂ ಓದಿ: ತಿರುಪತಿ ಭಕ್ತರ ಆಕ್ರೋಶಕ್ಕೆ ಮಣಿದ ಆಂಧ್ರ ಸರ್ಕಾರ: ಆಸ್ತಿ ಹರಾಜಿಗೆ ತಡೆ

    ಮದುವೆಯ ಆಸೆ ಹೊತ್ತ ಮಹಿಳೆ ಆತನಿಗೆ ನೆರವಾಗಲು ಇಚ್ಛಿಸಿ ಆನ್‍ಲೈನ್ ಮೂಲಕ ಸುಮಾರು 5.6 ಲಕ್ಷ ನೀಡಿದ್ದಾರೆ. ನಂತರ, ಮೇ 6ರಂದು ಮಹಿಳೆಯೊಬ್ಬಳು ಇವರಿಗೆ ಕರೆ ಮಾಡಿ, ನಾನು ಕಸ್ಟಮ್ಸ್​ ಆಫೀಸರ್​. ನೀವು ಕಳುಹಿಸಿರುವ ಹಣವನ್ನು ಮಲೇಷಿಯಾದಲ್ಲಿ ರಿಲೀಸ್ ಮಾಡಲು 74 ಸಾವಿರ ಶುಲ್ಕ ಕಟ್ಟಬೇಕು’ ಎಂದು ಹೇಳಿದ್ದಾಳೆ.

    ಆಗ ಈ ಮಹಿಳೆಗೆ ಅನುಮಾನ ಬಂದಿದೆ. ನಂತರ ಈ ಬಗ್ಗೆ ಪರಿಚಯದವರು, ಕುಟುಂಬದವರ ಬಳಿ ಹೇಳಿದಾಗ, ಅವರು ಬುದ್ಧಿ ಹೇಳಿದ್ದಾರೆ. ಇದೇ ರೀತಿ ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ಈಗಾಗಲೇ ನಡೆದಿರುವ ನೂರಾರು ಪ್ರಕರಣಗಳು ಮಹಿಳೆಗೆ ಆಗ ತಿಳಿದಿದೆ. ನಂತರವಷ್ಟೇ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ!
    ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420ರ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ! (ಏಜೆನ್ಸೀಸ್​)

    ಆಹಾ ತಿರುಪತಿ ಲಡ್ಡು- ಮೂರೇ ಗಂಟೆಯಲ್ಲಿ ಹೊಡೆಯಿತು ಲಕ್ಷ ಲಕ್ಷ ಬಂಪರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts