ನ್ಯೂಸ್

ಗುಂಜನ್ ಸಕ್ಸೆನಾ ಚಿತ್ರದಲ್ಲಿ ಸುಳ್ಳುಗಳೇ ರಾರಾಜಿಸಿವೆ; ನಿವೃತ್ತ ವಿಂಗ್​ ಕಮಾಂಡರ್ ಖನ್ನಾ

ಇತ್ತೀಚೆಗಷ್ಟೇ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆಗಿರುವ ಗುಂಜನ್​ ಸಕ್ಸೆನಾ; ದಿ ಕಾರ್ಗಿಲ್​ ಗರ್ಲ್​ ಸಿನಿಮಾ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ತೋರಿಸಿರುವುದಕ್ಕೂ, ಇಂಡಿಯನ್​ ಏರ್​ಫೊರ್ಸ್​ನಲ್ಲಿರುವ ವ್ಯವಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂಬ ವಾದ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಇದೀಗ ಇದೇ ಚರ್ಚೆಗೆ ನಿವೃತ್ತ ವಿಂಗ್​ ಕಮಾಂಡರ್​ ಐ.ಕೆ. ಖನ್ನಾ ಪ್ರತಿಕ್ರಿಯಿಸಿದ್ದಾರೆ.

ಇಂಡಿಯನ್​ ಏರ್​ಪೋರ್ಸ್​​ನ ಮೊದಲ ಬ್ಯಾಚ್​ನ ಮಹಿಳಾ ಪೈಲಟ್​ಗಳಿಗೆ ಸ್ವತಃ ವಿಂಗ್​ ಕಮಾಂಡರ್ ಖನ್ನಾ ತರಬೇತಿ ನೀಡಿದ್ದು, ಸಿನಿಮಾದಲ್ಲಿ ಮಾತ್ರ ತದ್ವಿರುದ್ಧವಾಗಿ ಬಿಂಬಿಸಲಾಗಿದೆ ಎಂದಿದ್ದಾರೆ.

‘ಚಿತ್ರದಲ್ಲಿ ತೋರಿಸಿರುವ ಅಂಶ ಸತ್ಯಕ್ಕೆ ದೂರವಾಗಿದೆ. ಎಲ್ಲವೂ ಸುಳ್ಳು. 1994ರಲ್ಲಿ ಮಹಿಳಾ ಪೈಲಟ್​ಗಳ ಆಯ್ಕೆ ಆಗುತ್ತಿದ್ದಂತೆ, ಅವರಿಗಾಗಿಯೇ ಪ್ರತ್ಯೇಕ ಕೋಣೆಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಸಿನಿಮಾದಲ್ಲಿ ಮಾತ್ರ ಅದನ್ನು ಬೇರೆಯ ರೀತಿಯಲ್ಲಿಯೇ ಬಿಂಬಿಸಲಾಗಿದೆ. ಗುಂಜನ್​ ಪಾತ್ರಕ್ಕೂ ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಹರಿಹಾಯ್ದಿದ್ದಾರೆ.

ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾದಲ್ಲಿ ಜಾಹ್ನವಿ ಕಪೂರ್​ ನಟಿಸಿದ್ದು, ಶರಣ್ ಶರ್ಮಾ ನಿರ್ದೇಶನದಲ್ಲಿ ಸಿದ್ಧವಾಗಿರುವ ಈ ಚಿತ್ರಕ್ಕೆ ಕರಣ್​ ಜೋಹರ್​ ಬಂಡವಾಳ ಹೂಡಿದ್ದಾರೆ. (ಏಜೆನ್ಸೀಸ್​)