ನ್ಯೂಸ್

ಜುಲೈ 25ರ ಹೊತ್ತಿಗೆ ಭಾರತ ಶೇಕಡ 100 ಕರೊನಾ ವೈರಸ್ ಮುಕ್ತ- ಅಮೆರಿಕದ ಸಿಂಗಾಪುರ ವಿವಿ ಅಧ್ಯಯನ ವರದಿ

ವಾಷಿಂಗ್ಟನ್​: ಕೃತಕ ಬುದ್ಧಿಮತ್ತೆ ಬಳಸಿ ಸದ್ಯದ ಡೇಟಾವನ್ನು ವಿಶ್ಲೇಷಿಸಿದ ಅಮೆರಿಕದ ಸಿಂಗಾಪುರದ ವಿಶ್ವವಿದ್ಯಾಲಯ ಪ್ರಕಟಿಸಿರುವ ವರದಿ ಪ್ರಕಾರ, ಭಾರತದಲ್ಲಿ ಜುಲೈ 25ರ ಹೊತ್ತಿಗೆ ಕರೊನಾ ವೈರಸ್ ಸಂಪೂರ್ಣ ನಿರ್ನಾಮವಾಗಲಿದೆ. ಭಾರತ ಕರೊನಾ ಮುಕ್ತವಾಗಲಿದೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿದ ಡೇಟಾ ಅನಾಲಿಸಿಸ್ ಮೆಥಡ್​ ಮೂಲಕ ಈಗ ಸಂಗ್ರಹಿಸಿರುವ ದತ್ತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಸಿಕ್ಕ ಫಲಿತಾಂಶ ಇದು. ಮೇ ತಿಂಗಳ 22ನೇ ತಾರೀಕಿನೊಳಗೆ ಭಾರತದಲ್ಲಿ ಶೇಕ 97 ಪ್ರಮಾಣದಲ್ಲಿ ವೈರಸ್​ ಸೋಂಕು ಕಡಿಮೆಯಾಗಲಿದೆ. ಇನ್ನುಳಿದ ಪ್ರಮಾಣ ಜೂನ್ 1ರಿಂದ ಜುಲೈ 25ರ ಒಳಗೆ ಸಂಪೂರ್ಣವಾಗಿ ನಿರ್ನಾಮವಾಗಲಿದೆ. ಅಂದರೆ ಭಾರತ ಶೇಕಡ 100ರಷ್ಟು ಕರೊನಾ ವೈರಸ್ ಮುಕ್ತರಾಷ್ಟ್ರವಾಗಲಿದೆ.

ಈ ವರದಿಯಲ್ಲಿ ಜಗತ್ತಿನ ಇತರೆ ರಾಷ್ಟ್ರಗಳ ಕುರಿತ ವಿವರವೂ ಇದೆ. ಇದರಂತೆ, ಈಗ ಅತಿಹೆಚ್ಚು ತಲ್ಲಣಗೊಂಡಿರುವ ಅಮೆರಿಕ, ಇಟಲಿ, ಫ್ರಾನ್ಸ್​, ಸ್ಪೇನ್​, ಬ್ರಿಟನ್​ಗಳ ಡೇಟಾವನ್ನೂ ಈ ರೀತಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇದರಂತೆ, ಆಗಸ್ಟ್​ 27ರ ಹೊತ್ತಿಗೆ ಅಮೆರಿಕ ಕರೊನಾ ಮುಕ್ತವಾಗಲಿದೆ. ಜಗತ್ತಿನಿಂದ ಈ ಕರೊನಾ ವೈರಸ್ ಸೋಂಕು 2020ರ ಡಿಸೆಂಬರ್ 9ರ ಹೊತ್ತಿಗೆ ಸಂಪೂರ್ಣವಾಗಿ ದೂರವಾಗಲಿದೆ.

ಅಮೆರಿಕದ ಸಿಂಗಾಪುರ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಆ್ಯಂಡ್ ಡಿಸೈನ್ ರಿಸರ್ಚರ್ಸ್​ ಈ ವರದಿಯನ್ನು ಸಿದ್ಧಪಡಿಸಿದ್ದು, ಒಟ್ಟಾರೆಯಾಗಿ ಮೇ 30ರ ಒಳಗೆ ಕರೊನಾ ವೈರಸ್ ಸೋಂಕು ಶೇಕಡ 97 ಕಡಿಮೆಯಾಗಲಿದೆ. ಅದೇ ರೀತಿ ಜೂನ್ 17ರ ಹೊತ್ತಿಗೆ ಶೇಕಡ 99, 2020ರ ಡಿಸೆಂಬರ್​9ರ ವೇಳೆಗೆ ಶೇಕಡ 100 ಸೋಂಕು ನಿವಾರಣೆ ಆಗಲಿದೆ. (ಏಜೆನ್ಸೀಸ್​)