Trade Deal: ಇಂದು (ಜು.24) ಯುಕೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಇಂಗ್ಲೆಂಡ್ ಜೊತೆಗಿನ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರು. ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದವನ್ನು ಬಹಿರಂಗಗೊಳಿಸಲಾಯಿತು. ಈ ವೇಳೆ ಭಾರತ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಬ್ರಿಟಿಷ್ ಸಹವರ್ತಿ ಜೊನಾಥನ್ ರೆನಾಲ್ಡ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಗಾಯದಿಂದ ಬಳಲುತ್ತಿದ್ದರೂ ಅಖಾಡಕ್ಕೆ ಪಂತ್! ಅರ್ಧಶತಕ ಸಿಡಿಸಿದ ಟೀಮ್ ಇಂಡಿಯಾ ‘ಬೆನ್ನೆಲುಬು’ | Rishabh Pant
ಕಳೆದ ಮೂರು ವರ್ಷಗಳಿಂದ ಮಾತುಕತೆ ಹಂತದಲ್ಲಿದ್ದ ವ್ಯಾಪಾರ ಒಪ್ಪಂದವು ಇದೀಗ ಸಹಿ ಮೂಲಕ ಅಧಿಕೃತವಾಗಿದೆ. ಮುಕ್ತ ವ್ಯಾಪಾರ ಒಪ್ಪಂದ ಬಹು ವಲಯಗಳಲ್ಲಿ ಭಾರತೀಯರಿಗೆ ಬೆಳವಣಿಗೆ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಹೊಸ ಮಾರ್ಗಗಳನ್ನು ತೆರೆಯುವ ಮೂಲಕ ಭಾರತಕ್ಕೆ ಹಲವು ವಿಶೇಷ ಪ್ರಯೋಜನಗಳನ್ನು ಹೊತ್ತು ತರಲಿದೆ. ಮಾಹಿತಿ ತಂತ್ರಜ್ಞಾನ, ಹಣಕಾಸು ಸೇವೆ, ವೃತ್ತಿಪರ ಸೇವೆಗಳು, ಆರ್ಕಿಟೆಕ್ಚರಲ್, ಇಂಜಿನಿಯರಿಂಗ್ ಮತ್ತು ಇನ್ನಿತರ ಕೋರ್ಸ್ಗಳನ್ನು ಮಾಡುವ ಮತ್ತು ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವ ಭಾರತೀಯ ವಿದ್ಯಾರ್ಥಿಗಳು ಮತ್ತು ಯುವ ಉದ್ಯಮಿಗಳಿಗೆ ಯುಕೆ ಉತ್ತೇಜನ ನೀಡಲಿದೆ.
"ಮಹತ್ವದ ವ್ಯಾಪಾರ ಒಪ್ಪಂದವನ್ನು ನಾವು ಭಾರತದೊಂದಿಗೆ ಮಾಡಿಕೊಂಡಿರುವುದು ನಮ್ಮ ವಿಜಯದ ಸಂಕೇತ. ಈ ಒಪ್ಪಂದಿಂದ ಸಾಕಷ್ಟು ಬ್ರಿಟನ್ ಉದ್ಯೋಗಗಳು ಸೃಷ್ಟಿಯಾಗಲಿವೆ. ವ್ಯವಹಾರ, ವಾಣಿಜ್ಯ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳು ಮೂಡಲಿವೆ. ಇದು ದೇಶದ ಪ್ರತಿ ಮೂಲೆಯಲ್ಲಿಯೂ ಬೆಳವಣಿಗೆಯನ್ನು ಹೆಚ್ಚಿಸುತ್ತದೆ" ಎಂದು ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ್ದಾರೆ. ಭಾರತ-ಯುಕೆ ಡೀಲ್ನಿಂದ ಯಾವ ವಸ್ತುಗಳ ಬೆಲೆಗಳು ಕಡಿಮೆ ಆಗಲಿವೆ? ಎಂಬುದರ ವಿವರ ಹೀಗಿದೆ ಗಮನಿಸಿ.
ಯುಕೆಯಲ್ಲಿ ತಯಾರಿಸಲ್ಪಟ್ಟ ಮತ್ತು ಅಲ್ಲಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ವೈದ್ಯಕೀಯ ಸಾಧನಗಳು, ಏರೋಸ್ಪೇಸ್ ಬಿಡಿ ಭಾಗಗಳು, ಬ್ರಿಟನ್ ಸ್ಕಾಚ್ ಸೇರಿದಂತೆ ಹಲವು ವಸ್ತುಗಳು ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ. ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಬಂದ ಮರುದಿನವೇ ಸರಾಸರಿ ಸುಂಕಗಳು ಶೇ.15ರಿಂದ 3ಕ್ಕೆ ಇಳಿಯಲಿದೆ ಎಂದು ವರದಿಗಳು ಉಲ್ಲೇಖಿಸಿವೆ. ಬ್ರಿಟನ್ ಉತ್ಪನ್ನಗಳಾದ ತಂಪು ಪಾನೀಯಗಳು, ಸೌಂದರ್ಯವರ್ಧಕಗಳು, ಚಾಕೊಲೇಟ್, ಬಿಸ್ಕತ್, ಸಾಲ್ಮನ್ ಫಿಶ್ ಮತ್ತು ಕಾರುಗಳ ಮೇಲಿನ ಸುಂಕಗಳು ಕುಸಿಯಲಿವೆ. ಇದು ಭಾರತೀಯರ ಖರೀದಿಗೆ ಇನ್ನಷ್ಟು ಸುಲಭವಾಗಲಿದೆ. ಇನ್ನು ಕೋಟಾದಡಿ ಇವಿ ವಾಹನಗಳ ಮೇಲಿನ ಸುಂಕವು ಶೇ. 110ರಿಂದ ಶೇ.10ಕ್ಕೆ ಇಳಿಕೆಯಾಗಲಿದೆ ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).