ನವದೆಹಲಿ: ದೇಶದಲ್ಲಿ ಅನ್ಲಾಕ್-4ರ ಮಾರ್ಗಸೂಚಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಹಾಗೇ ಕರೊನಾ ಸೋಂಕಿನ ಪ್ರಸರಣ ಕೂಡ ಹೆಚ್ಚುತ್ತಲೇ ಇದೆ.
ಕಳೆದ 24 ಗಂಟೆಯಲ್ಲಿ ಬರೋಬ್ಬರಿ 83,883 ಹೊಸ ಕರೊನಾ ಸೋಂಕಿತರು ಪತ್ತೆಯಾಗಿದ್ದು ಇದು ಇಲ್ಲಿಯವರೆಗಿನ ದಾಖಲೆ. ಒಟ್ಟು ಸೋಂಕಿತರ ಸಂಖ್ಯೆ 38,53,407ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ 1043 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 67,376ಕ್ಕೆ ತಲುಪಿದೆ. ದೇಶದಲ್ಲಿ 8,15,538 ಸಕ್ರಿಯ ಕರೊನಾ ಪ್ರಕರಣಗಳಿದ್ದು, 29,70,492 ಮಂದಿ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: Photos: ಸುದೀಪ್ ಕನಸಿನ ಶಾಂತಿನಿವಾಸ ವೃದ್ಧಾಶ್ರಮ ಇಲ್ಲಿ ತಲೆಎತ್ತಲಿದೆ…
ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರವೇ ಮುಂದಿದೆ. ಅಲ್ಲಿ ಸೋಂಕಿತರ ಸಂಖ್ಯೆ 8,25,739ಕ್ಕೆ ಏರಿಕೆಯಾಗಿದ್ದು, 25, 195 ಮಂದಿ ಸಾವನ್ನಪ್ಪಿದ್ದಾರೆ.
ಇಷ್ಟೆಲ್ಲದರ ಮಧ್ಯೆ ಒಳ್ಳೆಯ ವಿಚಾರವೆಂದರೆ ದೇಶದಲ್ಲಿ ಕರೊನಾದಿಂದ ಚೇತರಿಕೆಯಾಗುತ್ತಿರುವವರ ಪ್ರಮಾಣವೂ ಹೆಚ್ಚಿದೆ. ದೇಶದಲ್ಲಿ ರಿಕವರಿ ರೇಟ್ 76.98ಕ್ಕೆ ಏರಿಕೆಯಾಗಿದೆ. ಸಾವಿನ ದರ ಶೇ.1.76ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. (ಏಜೆನ್ಸೀಸ್)