ನವದೆಹಲಿ: ಕೇಂದ್ರ ಸರ್ಕಾರ ಲ್ಯಾಪ್ಟಾಪ್ ಮತ್ತು ಸರ್ವರ್ಗಾಗಿ ಸ್ಥಳಿಯ ಘಟಕಗಳ ಉತ್ಪಾದನಾ ಮೂಲವನ್ನು ಉತ್ತೇಜಿಸುವ ಮತ್ತು ಮುಂದಿನ 4 ವರ್ಷಗಳಲ್ಲಿ ಸ್ಥಳಿಯವಾಗಿ ಸುಮಾರು 20 ಶತಕೋಟಿ ಡಾಲರ್ ಸಂಪಾದಿಸುವ ಗುರಿ ಹೊಂದಿದೆ. ಪ್ರಸ್ತುತ ಸಂಪಾದಿಸುತ್ತಿರುವ ಒಂದು ಶತಕೋಟಿ ಡಾಲರ್ಗೆ ಹೋಲಿಸಿದರೆ ಮುಂದಿನ ಗುರಿಯು ಗಣನೀಯ ಹೆಚ್ಚಳವಾಗಿದೆ. ಈ ಕ್ರಮವು ಚೀನಾದ ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ತಂತ್ರಾನ ವಲಯದಲ್ಲಿ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವುದಾಗಿದೆ.
ಚೀನಾ ಮತ್ತು ಇತರ ವಿಶ್ವಾಸಾರ್ಹವಲ್ಲದ ಮೂಲಗಳಿಂದ ಹಾರ್ಡ್ವೇರ್ ಟಕಗಳ ಆಮದು ಮೇಲೆ ಸರ್ಕಾರ ರ್ನಿಬಂಧ ವಿಧಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಮೇಕ್ ಇನ್ ಇಂಡಿಯಾ ಉಪಕ್ರಮದೊಂದಿಗೆ ಹೊಂದಿಕೊಂಡು ಭಾರತದಲ್ಲಿ ಸ್ಥಳಿಯ ಉತ್ಪಾದನೆ ಪೋತ್ಸಾಹಿಸುವುದು ಇದರ ಉದ್ದೇಶವಾಗಿದೆ.
ಸ್ಥಳಿಯ ಉತ್ಪಾದನಾ ಟಕಗಳನ್ನು ಪೋತ್ಸಾಹಿಸುವ ಮೂಲಕ ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ, ಉದ್ಯೋಗ ಸೃಷ್ಟಿಸುವ ಮತ್ತು ತಂತ್ರಾನದ ಹಾರ್ಡ್ವೇರ್ ಉತ್ಪಾದನೆ ಸೇರಿದಂತೆ ನಿರ್ಣಾಯಕ ಕೈಗಾರಿಕೆಗಳಲ್ಲಿ ಭಾರತದ ಸ್ವಾವಲಂಬನೆ ಬಲಪಡಿಸುವ ಗುರಿ ಹೊಂದಿದೆ.
ಐಟಿ ಹಾರ್ಡ್ವೇರ್ಗಾಗಿ 17 ಸಾವಿರ ಕೋಟಿ ರೂಪಾಯಿ ಆರ್ಥಿಕ ಪೋತ್ಸಾಹ ಒದಗಿಸುವ ಪಿಎಲ್ಐ ಯೋಜನೆ ಅನುಷ್ಠಾನ ಮತ್ತು ನ.1 ರಿಂದ ಪ್ರಾರಂಭಿಸುವ ಆಮದು ನಿರ್ವಹಣಾ ವ್ಯವಸ್ಥೆಯು ಭಾರತದಲ್ಲಿ ಸ್ಪರ್ಧಾತ್ಮಕ ಉತ್ಪಾದನಾ ವಾತಾವರಣ ಸೃಷ್ಟಿಸುವ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಸ್ಮಾರ್ಟ್ಫೋನ್ ತಯಾರಿಕೆಯು ಯಶಸ್ವಿ ಮಾದರಿಯಾಗಿದೆ. ಮೂಲಗಳ ಪ್ರಕಾರ ಈ ನಿರ್ಧಾರವು ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಿ, ಸ್ಥಳಿಯ ಉತ್ಪಾದನೆಗೆ ಪೋತ್ಸಾಹಿಸುವುದರೊಂದಿಗೆ ಮೇಕ್ ಇನ್ ಇಂಡಿಯಾ ಉಪಕ್ರಮದೊಂದಿಗೆ ಹೊಂದಿಕೆಯಾಗುವುದಾಗಿದೆ.