ನ್ಯೂಸ್

ಆ ವಿಷಯವಾಗಿ ಭಾರತದಲ್ಲಿ ಯಾವತ್ತೂ ಯುದ್ಧವಾಗಿಲ್ಲ: ಆರ್​ಎಸ್​​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​

ನಾಗ್ಪುರ: ಇಸ್ರೇಲ್​ನಲ್ಲಿ ಹಮಾಸ್ ಉಗ್ರರ ದಾಳಿಯಿಂದಾಗಿ ರಣಾಂಗಣ ಸೃಷ್ಟಿಯಾಗಿದ್ದು, ರಣಭೀಕರ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ನಿವಾರಣೆ ಆಗಿಲ್ಲ. ಈ ಮಧ್ಯೆ ಇಸ್ರೇಲ್​-ಹಮಾಸ್​ ಯುದ್ಧದ ಕುರಿತಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಪ್ರತಿಕ್ರಿಯೆ ನೀಡಿದ್ದಾರೆ.

ಇಸ್ರೇಲ್​ನಲ್ಲಿ ಹಮಾಸ್​ ಉಗ್ರರು ಮತ್ತು ಇಸ್ರೇಲಿಗರ ನಡುವೆ ನಡೆಯುವಂಥ ಯುದ್ಧ ಭಾರತದಲ್ಲಿ ಯಾವತ್ತೂ ನಡೆದಿಲ್ಲ. ಏಕೆಂದರೆ ನಾವು ಎಲ್ಲರನ್ನೂ ಗೌರವಿಸುವಂಥ ಹಿಂದೂ ಸಂಸ್ಕೃತಿಯನ್ನು ಹೊಂದಿದ್ದೇವೆ ಎಂದು ಮೋಹನ್ ಭಾಗವತ್ ಮಹಾರಾಷ್ಟ್ರದ ನಾಗ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಬೇರೆ ಎಲ್ಲ ಕಡೆ ಯುದ್ಧವಾಗುತ್ತಿದೆ. ಇಸ್ರೇಲ್​-ಹಮಾಸ್ ಯುದ್ಧಕ್ಕೂ ಮೊದಲು ನೀವು ಯೂಕ್ರೇನ್​ನಲ್ಲಿನ ಯುದ್ಧದ ಬಗ್ಗೆಯೂ ಕೇಳಿದ್ದೀರಿ. ಆದರೆ ಭಾರತದಲ್ಲಿ ಅಂಥ ಯುದ್ಧಗಳು ಆಗಿಲ್ಲ, ನಾವು ಯಾವತ್ತೂ ಅಂಥ ವಿಷಯಗಳಿಗಾಗಿ ಯಾರೊಂದಿಗೂ ಯುದ್ಧ ಮಾಡುವುದೂ ಇಲ್ಲ ಎಂದು ಅವರು ಹೇಳಿದ್ದಾರೆ.