ನ್ಯೂಸ್

ಸುಡಾನ್ ಬಿಕ್ಕಟ್ಟು; ಭಾರತೀಯರ ರಕ್ಷಣೆಗೆ 'ಆಪರೇಷನ್​ ಕಾವೇರಿ' ಪ್ರಾರಂಭ

ನವದೆಹಲಿ: ಹಿಂಸಾಚಾರ ಪೀಡಿತ ಸುಡಾನ್​ನಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆಗೆ ಸರ್ಕಾರ ಧಾವಿಸಿದ್ದು ಅವರ ಆಪರೇಷನ್​ ಕಾವೇರಿ ಎಂಬ ಹೆಸರಿನಲ್ಲಿ ಅವರ ಸ್ಥಳಾಂತರಕ್ಕೆ ಮುಂದಾಗಿದೆ.

ಸುಮಾರು 500ಕ್ಕೂ ಹೆಚ್ಚು ಭಾರತೀಯರು ಸುಡಾನ್​ ಪೋರ್ಟ್​ ತಲುಪಿದ್ದು ಅವರನ್ನು ಹಡಗು ಹಾಗೂ ಏರೋಪ್ಲೇನ್​ ಮೂಲಕ ಭಅರತಕ್ಕೆ ಕರೆತರಕಲಾಗುತ್ತದೆ ಎಂದು ತಿಳಿದು ಬಂದಿದೆ.

ಸಹಾಯ ಮಾಡಲು ಬದ್ಧ

ಈ ಕುರಿತು ಟ್ವೀಟ್​ ಮಾಡಿರುವ ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಸುಡಾನ್​ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ವಾಪಸ್​ ತಾಯ್ನಾಡಿಗೆ ಕರೆತರಲು ಆಪರೇಷನ್​ ಕಾವೇರಿ ಆರಂಭಿಸಲಾಗಿದೆ. ಸುಂಆರು 500ಕ್ಕೂ ಹೆಚ್ಚು ಭಅರತೀಯರು ಪೋರ್ಟ್​ ಸುಡಾನ್​ ತಲುಪಿದ್ಧಾರೆ.

ನಮ್ಮ ದೇಶದ ಹಡಗುಗಳು ಹಾಗೂ ವೊಇಮಾನಗಳು ಅವರನ್ನು ವಾಪಸ್​ ಕರೆತರಲು ಸಿದ್ದವಾಗಿವೆ. ನಾವು ನಮ್ಮವರಿಗೆ ಸಹಾಯ ಮಾಡಲು ಸದಾ ಸಿದ್ದರಾಗಿರುತ್ತೇವೆ ಎಂದು ಟ್ವೀಟ್​ ಮಾಡಿ ತಿಳಿಸಿದ್ದಾರೆ.