ಜಮ್ಮು ಕಾಶ್ಮೀರ: ಪಾಕ್ ಆಕ್ರಮಿತ ಕಾಶ್ಮೀರ(POK) ಇಲ್ಲದ ಭಾರತದ ಜಮ್ಮು ಮತ್ತು ಕಾಶ್ಮೀರ ಅಪೂರ್ಣ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇಲ್ಲಿನ ಅಖ್ನನೂರ್ನಲ್ಲಿ ಮಂಗಳವಾರ(ಜ.14) ನಡೆದ 9ನೇ ಸಶಸ್ತ್ರಪಡೆಗಳ ವೆಟರನ್ಸ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದರು.
''ಪಿಒಕೆ ಇಲ್ಲದೆ ಜಮ್ಮು ಕಾಶ್ಮೀರ ಅಪೂರ್ಣವಾಗಿದೆ. ಪಾಕಿಸ್ತಾನಕ್ಕೆ ಪಿಒಕೆಯಂತ ವಿದೇಶಿ ಪ್ರದೇಶ ಇಲ್ಲ. ಹೀಗಾಗಿ, ಪಾಕಿಸ್ತಾನ ಇಲ್ಲಿನ ನೆಲ ಬಳಸಿಕೊಂಡು ಭಯೋತ್ಪದಾನೆ ಚಟುವಟಕೆಗಳು ನಡೆಸುತ್ತಿದೆ. ಅಲ್ಲದೆ, ಪಾಕಿಸ್ತಾನ ಈ ಭಯೋತ್ಪದಾನೆಯನ್ನು ನಾಶ ಮಾಡಬೇಕು ಎಂದು ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಕೇಂದ್ರ ಸಚಿವ ಎಚ್ಚರಿಕೆ ನೀಡಿದ್ದಾರೆ''.
1965ರಲ್ಲಿ ಅಖ್ನನೂರ್ನಲ್ಲಿ ಭಾರತ ಮತ್ತು ಪಾಕಿಸ್ತಾನಕ್ಕೆ ಯುದ್ದ ನಡೆಯಿತು. ಯುದ್ದದಲ್ಲಿ ಭಾರತ ಜಯ ಸಾಧಿಸಿತು. ಆದರೆ, ಅಂದಿನ ಲಾಲ್ ಬಹದ್ದೂರು ಶಾಸ್ತ್ರಿ ನೇತೃತ್ವದ ಸರ್ಕಾರ ಗಡಿಯಾಚಿಗಿನ ಭಯೋತ್ಪಾದನೆಯನ್ನು ಕೊನೆಗಾಣಿಸಬಹುದಿತ್ತು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ‘ಗೇಮ್ ಚೇಂಚರ್’ ಸಿನಿಮಾ HD ಪೈರಸಿ.. 35 ಜನರ ವಿರುದ್ಧ ಪ್ರಕರಣ ದಾಖಲು: ಸಿನಿಮಾ ಮಂದಿ ಕೈವಾಡ ಶಂಕೆ | Game Changer
ಗಡಿಯಾಚೆಗಿನ ಭಯೋತ್ಪಾದನೆಯು 1965 ರಲ್ಲಿಯೇ ಕೊನೆಗೊಳ್ಳುತ್ತಿತ್ತು, ಆದರೆ ಅಂದಿನ ಕೇಂದ್ರ ಸರ್ಕಾರವು ಯುದ್ಧದಲ್ಲಿ ಗಳಿಸಿದ ಯುದ್ಧತಂತ್ರದ ಪ್ರಯೋಜನವನ್ನು ಕಾರ್ಯತಂತ್ರದ ಪ್ರಯೋಜನವಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ ಎಂದು ಸಚಿವರು ಹೇಳಿದ್ದಾರೆ. (ಏಜೆನ್ಸೀಸ್)