ನ್ಯೂಸ್

ಭಾರತ ಯಾವುದೇ ಕ್ಷಣದಲ್ಲಾದರೂ ದಾಳಿ ನಡೆಸಬಹುದು: ಮಹತ್ವದ ಹೇಳಿಕೆ ಕೊಟ್ಟ ಪಾಕ್​​ ರಕ್ಷಣಾ ಸಚಿವ ಆಸಿಫ್ | ​India Can Attack

India Can Attack : ಕಾಶ್ಮೀರದ ನಿಯಂತ್ರಣ ರೇಖೆಯುದ್ದಕ್ಕೂ ಭಾರತ ಯಾವುದೇ ಕ್ಷಣದಲ್ಲದರೂ ಮಿಲಟರಿ ದಾಳಿ ನಡೆಸಬಹುದು ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್​​ ಎಚ್ಚರಿಸಿದ್ದಾರೆ. ಅಲ್ಲದೆ, ಇಂತದ್ದೆ ಹೇಳಿಕೆ ಹಿಂದೆ ಪಾಕ್​ ಮತ್ತೊಬ್ಬ ಸಚಿಚ ಹೇಳಿಕೆ ನೀಡಿದ್ದರು.

ಇದೇ ಏಪ್ರೀಲ್​ 22ರಂದು ಪೆಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ವಿದೇಶಿ ನಾಗರಿಕರು ಸೇರಿದಂತೆ 26 ಭಾರತೀಯರು ಮೃತಪಟ್ಟಿದ್ದರು. ದಾಳಿ ಬಳಿಕ ಎರಡು ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರು ಸಂದರ್ಭದಲ್ಲಿ ಸೋಮವಾರ ಈ ಹೇಳಿಕೆ ಬಂದಿದೆ.

"ಎಲ್‌ಒಸಿ ಉದ್ದಕ್ಕೂ ಭಾರತ ಯಾವುದೇ ಹಂತದಲ್ಲಿ ದಾಳಿ ಮಾಡಬಹುದು ಎಂಬ ವರದಿಗಳಿವೆ. ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಲಾಗುವುದು" ಎಂದು ಸಚಿವ ಆಸಿಫ್​ ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಪಹಲ್ಗಾಮ್ ದಾಳಿಯ ಬಗ್ಗೆ ಅಂತರರಾಷ್ಟ್ರೀಯ ತನಿಖೆ ನಡೆಸಬೇಕೆಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೇಳಿದ್ದಾರೆ ಎಂದು ಆಸಿಫ್ ಹೇಳಿದರು.

"ಇಂತಹ ತನಿಖೆಯು ಭಾರತವೇ ಅಥವಾ ಯಾವುದೇ ಆಂತರಿಕ ಗುಂಪು ಭಾಗಿಯಾಗಿದೆಯೇ ಎಂಬುದನ್ನು ಬಹಿರಂಗಪಡಿಸುತ್ತದೆ ಮತ್ತು ನವದೆಹಲಿಯ ಆಧಾರರಹಿತ ಆರೋಪಗಳ ಹಿಂದಿನ ಸತ್ಯವನ್ನು ಸ್ಪಷ್ಟಪಡಿಸುತ್ತದೆ" ಎಂದು ಆಸಿಫ್ ಹೇಳಿದರು.(ಏಜೆನ್ಸೀಸ್​)