ಬೆಂಗಳೂರು: ಗ್ರಾಹಕರೇ, ಅಲ್ಲಿ-ಇಲ್ಲಿ ಸಿಗುವ ಕಸ್ಟಮರ್ ಕೇರ್ ನಂಬರ್ಗೆ ಕರೆ ಮಾಡುವ ಮುನ್ನ ಜಾಗ್ರತೆ. ಆ ಕರೆಯಿಂದಲೇ ನಿಮ್ಮ ಜೇಬಿಗೆ ಬ್ಲೇಡ್ ಬೀಳುವ ಸಾಧ್ಯತೆ ಹೆಚ್ಚು.
ಗೂಗಲ್ ಪೇ ಕಸ್ಟಮರ್ ಸೋಗಿನಲ್ಲಿ ಸಕ್ರಿಯವಾಗಿರುವ ಸೈಬರ್ ವಂಚಕರು ವ್ಯಕ್ತಿಯೊಬ್ಬನ ಖಾತೆಯಿಂದ 19 ಸಾವಿರ ರೂಪಾಯಿ ದೋಚಿದ್ದಾರೆ. ಖಾಸಗಿ ಕಂಪನಿಯೊಂದರ ಉದ್ಯೋಗಿ ನಂದಕಿಶೋರ್ ಹಣ ಕಳೆದುಕೊಂಡವರು. ಏರ್ಟೆಲ್ ಬಿಲ್ ಪೇ ಮಾಡುವ ಸಲುವಾಗಿ ಗೂಗಲ್ ಪೇ ಮೂಲಕ 1,176 ರೂ. ಕಟ್ಟಿದ್ದರೂ ಬಿಲ್ ಪೇ ಆಗಿರಲಿಲ್ಲ. ಈ ಬಗ್ಗೆ ವೆರಿಫೈ ಮಾಡಲೆಂದು ನಂದಕಿಶೋರ್, ಕಸ್ಟಮರ್ ಕೇರ್ ನಂಬರ್ ಅನ್ನು ಗೂಗಲ್ನಲ್ಲಿ ಸರ್ಚ್ ಮಾಡಿದ್ದಾರೆ. ಆ ವೇಳೆ ಗೂಗಲ್ ಪೇ ಕಸ್ಟಮರ್ ಸೋಗಿನಲ್ಲಿದ್ದ ಸೈಬರ್ ವಂಚಕರ ನಂಬರ್ ಸಿಕ್ಕಿದೆ.
ಇದನ್ನೂ ಓದಿರಿ ಪ್ರಥಮ ಪಿಯುಸಿ ಪರೀಕ್ಷೆ ರದ್ದು, ಎಲ್ಲ ವಿದ್ಯಾರ್ಥಿಗಳು ಪಾಸ್!
ಗೂಗಲ್ನಲ್ಲಿ ಸಿಕ್ಕ ನಂಬರ್ಗೆ ಕರೆ ಮಾಡಿದ ನಂದಕಿಶೋರ್, ಬಿಲ್ ಪಾವತಿ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಅಕೌಂಟ್ಗೆ ಲಿಂಕ್ ಒಂದನ್ನ ಸೇರಿಸುವಂತೆ ಕಸ್ಟಮರ್ ಸೋಗಿನಲ್ಲಿ ಮಾತನಾಡುತ್ತಿದ್ದವರು ಹೇಳಿದ್ದಾರೆ. ಆ ಸೂಚನೆಯಂತೆ ಲಿಂಕ್ ಹಾಕಿದ ಕೂಡಲೇ ನಂದಕಿಶೋರ್ ಖಾತೆಯಿಂದ 19 ಸಾವಿರ ಹಣ ಡ್ರಾ ಆಗಿದೆ. ಕೂಡಲೇ ಆ ನಂಬರ್ಗೆ ವಾಪಸ್ ಕರೆ ಮಾಡಿದ್ದು, ಸ್ವಿಚ್ಡ್ ಆಫ್ ಎಂದು ಬಂದಿದೆ.
ಈ ಬಗ್ಗೆ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಂದಕಿಶೋರ್ ದೂರು ನೀಡಿದ್ದಾರೆ.