ನ್ಯೂಸ್

ಪ್ರೀತಿ ಹೆಸರಲ್ಲಿ ನಂಬಿಕೆ ದ್ರೋಹ! ವಿವಾದದ ಅಲೆಯಲ್ಲಿ ಸಿಲುಕಿರುವ ರಾಜ್​ ತರುಣ್​​ 2 ಬಹುನಿರೀಕ್ಷಿತ ಚಿತ್ರಗಳ ಗತಿಯೇನು?

ತೆಲಂಗಾಣ: 11 ವರ್ಷಗಳ ಲಿವ್​ಇನ್​ ರಿಲೇಷನ್​ಶಿಪ್​ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ತರುಣ್ ವಿರುದ್ಧ ಗಂಭೀರ ಆರೋಪ ಹೊರಿಸಿರುವ ಪ್ರೇಯಸಿ ಲಾವಣ್ಯ, ತನಗೆ ರಾಜ್​ನಿಂದ ಅನ್ಯಾಯವಾಗಿದೆ. ಆತ ತನ್ನ ಸಹ ನಟಿಯಾದ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ, ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ ಎಂದು ಪಣತೊಟ್ಟಿರುವ ಲಾವಣ್ಯ ಒಂದೆಡೆಯಾದರೆ, ಪೊಲೀಸರು ಕಳಿಸಿರುವ ವಿಚಾರಣಾ ನೋಟಿಸ್​ಗೆ ಲಾಯರ್​ ಮೂಲಕ ಪ್ರತಿಕ್ರಿಯಿಸಿರುವ ರಾಜ್ ತರುಣ್​, ಮೊದಲ ವಿಚಾರಣೆಗೆ ಗೈರಾಗಿದ್ದಾರೆ. ಸದ್ಯ ಇವರಿಬ್ಬರ ವಿಚಾರದಲ್ಲಿ ದಿನಕ್ಕೊಂದು ಟ್ವಿಸ್ಟ್​ ಎದುರಾಗುತ್ತಿದ್ದು, ಇತ್ತೀಚೆಗಷ್ಟೇ ಮಾಳ್ವಿ-ರಾಜ್​ ನಡುವಿನ ವಾಟ್ಸಾಪ್ ಸಂದೇಶಗಳು ಲೀಕ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ತನ್ನ ವಿರುದ್ಧ ಸರಣಿ ಆರೋಪಗಳು ಕೇಳಿಬಂದಿದ್ದರು ಇದ್ಯಾವುದಕ್ಕೂ ಸ್ಪಷ್ಟನೆ ನೀಡದೆ ಮೌನ ತಾಳಿರುವ ರಾಜ್ ತರುಣ್​, ಮುಂದಿನ ವಿಚಾರಣೆಗೆ ಪೊಲೀಸರು ನೋಟಿಸ್​ ನೀಡುವ ಮುನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಏನಾದರೂ ಪ್ರತಿಕ್ರಿಯೆ ನೀಡಲಿದ್ದಾರೆಯೇ ಎಂಬುದನ್ನು ಅನೇಕರು ನಿರೀಕ್ಷಿಸುತ್ತಿದ್ದಾರೆ. ಆದ್ರೆ, ಮಾಧ್ಯಮದವರ ಕೈಗೆ ಸಿಗದ ನಟ ರಾಜ್​ ನಟಿಸಿರುವ ಎರಡು ಸಿನಿಮಾಗಳು ಮಾತ್ರ ಬಿಡುಗಡೆಗೆ ಸಜ್ಜಾಗಿದೆ. ನಟನ ವಿವಾದವನ್ನೇ ಪ್ರಮೋಷನ್​ ಅಸ್ತ್ರವಾಗಿಸಿಕೊಂಡಿರುವ ನಿರ್ಮಾಪಕರು, ರಾಜ್ ಅಭಿನಯದ ಎರಡು ಸಿನಿಮಾಗಳನ್ನು ಒಂದು ವಾರದ ಅಂತರದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ತನ್ನದೇ ಸುದ್ದಿ ಹರಿದಾಡುತ್ತಿರುವ ಕಾರಣ ಹೊರಬರಲಾಗದೆ, ಒಳಗಿರಲಾಗದೆ ಪರದಾಡುತ್ತಿರುವ ಯುವ ನಟ ರಾಜ್ ತರುಣ್, ಈ ವಿವಾದಗಳಿಂದ ಭಾರೀ ಮುಖಭಂಗ ಅನುಭವಿಸುತ್ತಿದ್ದಾರೆ. ರಾಜ್ ಅಭಿನಯದ 'ಪುರಷೋತ್ತಮುಡು' ಮತ್ತು 'ತಿರಂಗಭದ್ರಾ ಸಾಮಿ' ಚಿತ್ರಗಳು ತೆರೆಗೆ ಬರಲು ಎದುರುನೋಡುತ್ತಿವೆ. ಚಿತ್ರತಂಡ ಪ್ರಚಾರಗಳಲ್ಲಿ ತೊಡಗಿದ್ದೇ ಆದರೂ ಹೀರೋ ಇಲ್ಲದೆ ಬಿಕೋ ಎನ್ನುತ್ತಿದೆ. ತನ್ನ ಮಾರ್ಕೆಟ್​ ಮತ್ತು ಕರಿಯರ್​ ಭವಿಷ್ಯ ಎರಡು ಕೂಡ ಈ ಎರಡು ಸಿನಿಮಾಗಳಲ್ಲೇ ಅಡಗಿದ್ದು, ವಿಧಿಯಿಲ್ಲದೇ ಹೊರಬಂದು ಚಿತ್ರ ಪ್ರಚಾರಕ್ಕೆ ಆಗಮಿಸುವಂತ ಪರಿಸ್ಥಿತಿ ರಾಜ್ ತರುಣ್​ಗೆ ಎದುರಾಗಿದೆ. ಈ ಕುರಿತು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ರಾಜ್ ಎಂಬುದೇ ಸದ್ಯ ಕುತೂಹಲದ ಪ್ರಶ್ನೆ.