ನ್ಯೂಸ್

VIDEO| ಮಹಾಮಾರಿ ಕರೊನಾ ವಿರುದ್ಧ ಹೋರಾಡಲು ಸ್ಯಾನಿಟೈಸರ್​ ಸುರಂಗ ನಿರ್ಮಾಣ!

ಅಹಮದಾಬಾದ್​: ಇಡೀ ಜಗತ್ತಿನಲ್ಲಿ ಮಹಾಮಾರಿ ಕರೊನಾ ವೈರಸ್​ ಆರೋಗ್ಯ ಬಿಕ್ಕಟ್ಟು ಸೃಷ್ಟಿಸಿದೆ. ಇಂತಹ ಸಂದಿಗ್ಧತೆಯಲ್ಲಿ ವೈದ್ಯರೆಲ್ಲರೂ ನೀಡುವ ಪ್ರಮುಖ ಸಲಹೆ ನಿಮ್ಮ ಕೈಗಳನ್ನು ಆಗಾಗ ಶುಚಿಗೊಳಿಸಿ. ಅದಕ್ಕಾಗಿ ಸ್ಯಾನಿಟೈಸರ್​ ಬಳಸಿ ಎನ್ನುವುದು.

ಸ್ಯಾನಿಟೈಜರ್​ ಸಂಕಷ್ಟ ಸಮಯದಲ್ಲಿ ಜೀವನಾಡಿಯಾಗಿದೆ. ಹೀಗಾಗಿ ಗುಜರಾತಿನ ಅಹಮದಬಾದ್​ನಲ್ಲಿರುವ ಪ್ರೀಮಿಯರ್​ ಇನ್ಸ್ಟಿಟ್ಯೂಟ್​ ಸ್ಯಾನಿಟೈಸರ್​ ವಿಷಯದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಕರೊನಾ ವಿರುದ್ಧ ಹೋರಾಡಲು ಸ್ಯಾನಿಟೈಸರ್​ ಸುರಂಗವನ್ನೇ ನಿರ್ಮಾಣ ಮಾಡಿದೆ.

ಅಸರ್ವಾದ ಕಿಡ್ನಿ ರೋಗ ಮತ್ತು ಸಂಶೋಧನಾ ಕೇಂದ್ರವನ್ನು ಸ್ಯಾನಿಟೈಸರ್​ ಸುರಂಗವಾಗಿ ಮಾರ್ಪಾಡು ಮಾಡಲಾಗಿದೆ. ಸುರಂಗದ ಒಳ ಹೋದಾಗಲೆಲ್ಲಾ ಸ್ಯಾನಿಟೈಸರ್​ ಮಳೆಯಾಗುತ್ತದೆ. ಇದಕ್ಕೆ ಸಂಬಂಧಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?: ಸುರಂಗದಲ್ಲಿ ಹೊರಭಾಗದಲ್ಲಿ ನಿಂತಿರುವ ಸೆಕ್ಯುರಿಟಿ ಗಾರ್ಡ್​ ಒಳಹೋಗುವ ವ್ಯಕ್ತಿಗೆ ಪ್ರವೇಶ ದ್ವಾರದಲ್ಲೇ ಹ್ಯಾಂಡ್​ ಸ್ಯಾನಿಟೈಸರ್​ ನೀಡುತ್ತಾರೆ. ಬಳಿಕ ಸುರಂಗ ಪ್ರವೇಶಿಸುವ ವ್ಯಕ್ತಿಯ ಮೇಲೆ ಸ್ವಯಂಚಾಲಿತವಾಗಿ ಸ್ಯಾನಿಟೈಸರ್​ ಮಳೆಯಾಗುತ್ತದೆ. (ಏಜೆನ್ಸೀಸ್​)