ನ್ಯೂಸ್

ಮೇಡ್ ಇನ್ ಚೀನಾಕ್ಕೆ ಮಣೆ: ವಿಜಯವಾಣಿ ಮಾಹಿತಿ..

Webdesk - Ravikanth
  • 125 ಬಿಲಿಯನ್ ಡಾಲರ್ (9.2 ಲಕ್ಷ ಕೋಟಿ ರೂ.) ದಾಟಿದ ಭಾರತ - ಚೀನಾ ವ್ಯವಹಾರ
  • 100 ಬಿಲಿಯನ್ ಡಾಲರ್​ಗೂ (7.4 ಲಕ್ಷ ಕೋಟಿ ರೂ. ) ಅಧಿಕ ಮೌಲ್ಯದ ಚೀನಾ ವಸ್ತುಗಳು ಭಾರತಕ್ಕೆ ಆಮದು
  • ಕಳೆದ ಒಂದು ವರ್ಷದಲ್ಲಿ ಚೀನಾ ವಸ್ತುಗಳ ಆಮದಲ್ಲಿ ದಿಢೀರ್ ಏರಿಕೆ
  • ಚೀನಾದ ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್್ಸ ವರದಿ ಪ್ರಕಟ
  • ಭಾರತ - ಚೀನಾ ವಾರ್ಷಿಕ ದ್ವಿಪಕ್ಷೀಯ ವಹಿವಾಟಿನಲ್ಲಿ ಶೇ. 43 ಏರಿಕೆ
  • ಆಸಿಯಾನ್, ಐರೋಪ್ಯ ಒಕ್ಕೂಟ, ಅಮೆರಿಕ ಜತೆಗಿನ ವಹಿವಾಟಿನಲ್ಲೂ ಕಳೆದ ವರ್ಷ ಏರಿಕೆ ದಾಖಲಿಸಿರುವ ಚೀನಾ
  • ವೈದ್ಯಕೀಯ ಉತ್ಪನ್ನಗಳ ರಫ್ತಿನಲ್ಲಿ ದುಪ್ಪಟ್ಟು ಏರಿಕೆ ದಾಖಲು

ಆಮದಾಗುವ ಪ್ರಮುಖ ಚೀನಾ ವಸ್ತುಗಳು

  • ಎಲೆಕ್ಟ್ರಾನಿಕ್ ಉತ್ಪನ್ನಗಳು
  • ದೊಡ್ಡ ಪ್ರಮಾಣದ ಯಂತ್ರೋಪಕರಣ
  • ವಾಹನೋದ್ಯಮಕ್ಕೆ ಸಂಬಂಧಿಸಿದ ಬಿಡಿಭಾಗಗಳು
  • ವೈದ್ಯಕೀಯ ಉಪಕರಣಗಳು, ಆಕ್ಸಿಜನ್ ಕಾನ್ಸನ್​ಟ್ರೇಟರ್ ಇತ್ಯಾದಿ

ಮೂರು ವರ್ಷಗಳ ವಹಿವಾಟು ವಿವರ

  • 2019 - 92.8 ಬಿಲಿಯನ್ ಡಾಲರ್ (6.9 ಲಕ್ಷ ಕೋಟಿ ರೂ.)
  • 2020 - 87.6 ಬಿಲಿಯನ್ ಡಾಲರ್ (6.5 ಲಕ್ಷ ಕೋಟಿ ರೂ.)
  • 2012 - 125 ಬಿಲಿಯನ್ ಡಾಲರ್ (9.2 ಲಕ್ಷ ಕೋಟಿ ರೂ.)

ಚೀನಾಕ್ಕೆ ರಫ್ತಾಗುವ ಪ್ರಮುಖ ವಸ್ತುಗಳು

  • ಕಬ್ಬಿಣದ ಅದಿರು
  • ಹತ್ತಿ, ಮಸಾಲೆ ಪದಾರ್ಥ
  • ಕಚ್ಚಾ ವಸ್ತುಗಳು
  1. ಕರೊನಾ ಕಾರಣ ಇಳಿಕೆ ಕಂಡಿದ್ದ ಆಮದು ಪ್ರಮಾಣ, ಆರ್ಥಿಕ ಚೇತರಿಕೆ ಹಿನ್ನೆಲೆಯಲ್ಲಿ ದಿಢೀರ್ ಏರಿಕೆ
  2. 2019ಕ್ಕೆ ಹೋಲಿಸಿದರೆ 2020ರಲ್ಲಿ ಆಮದು ಪ್ರಮಾಣ ಶೇ. 30 ಏರಿಕೆ
  3. ರಫ್ತು ಪ್ರಮಾಣದಲ್ಲಿ ಶೇ. 58 ಏರಿಕೆ ಕಂಡಿದೆ. ಆದರೆ ಒಟ್ಟಾರೆ ಮೊತ್ತ 28 ಬಿಲಿಯನ್ ಡಾಲರ್ ಮಾತ್ರ