ನ್ಯೂಸ್

ಪ್ರಾರ್ಥನೆ ಮತ್ತದರ ಮಹತ್ವ

ಮೋಹನ್​ ಶೆಟ್ಟಿ

ಪ್ರಾರ್ಥನೆ ಎಂಬುದು ಭಕ್ತ ಮತ್ತು ದೇವರ ನಡುವಿನ ಅನುಸಂಧಾನ ವೆಂದು ನಂಬಿಕೆ. ಯೇಸುವಿನ ಕಾಲದ ಇಸ್ರಯೇಲಿನ ಯಹೂದಿಗಳಿಗೆ ಪ್ರಾರ್ಥನೆ, ಜಪತಪಗಳ ಬಗ್ಗೆ ಅಪಾರವಾದ ನಂಬಿಕೆಯಿತ್ತು. ಅವರ ದೈನಂದಿನ ಕೆಲಸಕಾರ್ಯಗಳೆಲ್ಲ ಪ್ರಾರ್ಥನೆಯಿಂದಲೇ ಪ್ರಾರಂಭವಾಗá-ತ್ತಿದ್ದವು. ಪ್ರಾರ್ಥನೆ ಹಾಗೂ ಜಪತಪಗಳು ನೆಲೆಸಿರುವ ಮನೆಯಲ್ಲಿ ದೇವರ ಆಶೀರ್ವಾದ ಮತ್ತು ಕೃಪೆ ಹೇರಳವಾಗಿರುತ್ತವೆ ಎಂಬುದು ಅವರ ಅಚಲ ನಂಬಿಕೆಯಾಗಿತ್ತು.

ದುರಾದೃಷ್ಟವಶಾತ್, ಕ್ರಮೇಣ ಈ ಜಪತಪಗಳೆಲ್ಲ ಯಾಂತ್ರಿಕತೆಯ ರೂಪ ಪಡೆಯತೊಡಗಿದವು. ಭಕ್ತಿ ಎಂಬುದು ಕೇವಲ ಆಚರಣೆಯ ವಿಧಿವಿಧಾನಗಳಾದವು. ಅಂತರಂಗದ ಅನನ್ಯ ಭಕ್ತಿ ಸಡಿಲ ಗೊಂಡು, ಬಹಿರಂಗದ ಕೃತಕ ಭಕ್ತಿಗೆ ಜನ ಮರುಳಾಗತೊಡಗಿದರು. ಪ್ರಾರ್ಥನೆ, ಭಕ್ತಿ ದೇವರು ಮತ್ತು ಭಕ್ತರ ನಡುವಿನ ಅಂತರಂಗದ ವ್ಯಾಪಾರವೆಂಬುದನ್ನು ಅಲ್ಲಿಯ ಪುರೋಹಿತವರ್ಗ ಪರಿಗಣಿಸದೆ, ಅದನ್ನು ಬಹಿ ರಂಗ ಆಚರಣೆಯನ್ನಾಗಿಸಿದರು. ಬಹಿರಂಗವಾದಂತೆ ಅವು ಮಾರಾಟದ ಸರಕುಗಳಾಗಿ ಭಕ್ತಿಯ ವಾಣಿಜ್ಯೀಕರಣ ಪ್ರಾರಂಭವಾಯಿತು.

ಇಂತಹ ಅನುಚಿತ ಬೆಳವಣಿಗೆಗಳನ್ನು ಕಣ್ಣಾರೆ ಕಂಡಿದ್ದ ಯೇಸು ಕ್ರಿಸ್ತ ತನ್ನ ಪ್ರಸಿಧ್ಧವೆನಿಸಿರುವ ಪರ್ವತ ಪ್ರಸಂಗದ ವೇಳೆ, ‘ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ; ಕೆಲವು ಜನ ಪ್ರಾರ್ಥನಾ ಮಂದಿರಗಳಲ್ಲೂ, ಬೀದಿಯ ಚೌಕಗಳಲ್ಲೂ ಆಡಂಬರದ ವಸ್ತ್ರಗಳನ್ನು ತೊಟ್ಟು ಜನರು ತಮ್ಮನ್ನು ನೋಡಲೆಂದು ಬಹಿರಂಗವಾಗಿ ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ಇಂತಹ ಪ್ರದರ್ಶನದಿಂದ ಅವರಿಗೆ ಬರಬೇಕಾದದ್ದು ಆಗಲೇ ಬಂದಾಯಿತೆಂದು ಚೆನ್ನಾಗಿ ತಿಳಿದಿರಿ. ಆದರೆ, ಪ್ರಾರ್ಥನೆ ಮಾಡ ಬಯಸಿದಾಗ, ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚಿ, ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಸಲ್ಲಿಸು; ಅಂತರಂಗದಲ್ಲಿ ಜರಗುವುದನ್ನು ಕಾಣುವ ನಿನ್ನ ತಂದೆ ಪ್ರತಿಫಲವನ್ನು ಖಂಡಿತ ಕೊಡá-ತ್ತಾರೆ’ ಎಂದು ಹೇಳಿದ್ದಾನೆ. ಪ್ರಾರ್ಥನೆ ಅಂತರಂಗದ ಧ್ವನಿ. ಇದು ನಂಬಿಕೆ ನಿರೀಕ್ಷೆಗಳ ಅಹವಾಲೂ ಹೌದು; ಸತತವಾಗಿ ಪ್ರಾರ್ಥನೆ ಮಾಡಿದಾಗ ದೇವರು ಖಂಡಿತ ಉತ್ತರಿಸುತ್ತಾನೆಂಬ ಭರವಸೆಯನ್ನು ಕ್ರಿಸ್ತ ನೀಡುತ್ತಾನೆ. ಇದು ಜಗತ್ತಿನ ಅನೇಕರ ಅನುಭವವೂ ಆಗಿದೆ. ಆದá-ದರಿಂದ, ಪ್ರಾರ್ಥನೆಯಲ್ಲಿ ನಿರ್ಮಲವಾದ ಅನನ್ಯತೆ, ಶಾಂತಿ, ಪ್ರೀತಿ ತುಂಬಿರಬೇಕು.