Himanta Biswa Sharma: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಂಗಾಳಿ ವಲಸಿಗರ ಮೇಲೆ ಕಿರುಕುಳ ನಡೆಯುತ್ತಿದೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಸಿಎಎ ಜಾರಿಗೊಳಿಸುವಂತೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: TRF ವಿದೇಶಿ ಭಯೋತ್ವಾದಕ ಸಂಘಟನೆ ಎಂದು ಘೋಷಣೆ: ಅಮೆರಿಕ ನಿರ್ಧಾರ ಸ್ವಾಗತಿಸಿದ ಸಚಿವ ಜೈಶಂಕರ್! S Jaishankar
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಗಾಳಿ ವಲಸಿಗರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದೆ ಎಂಬ ಮಮತಾ ಬ್ಯಾನರ್ಜಿ ಹೇಳಿಕೆಗೆ ತಿರುಗೇಟು ನೀಡಿದ ಶರ್ಮಾ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ 'ಮುಸ್ಲಿಂ ಬಂಗಾಳಿಗಳ' ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಎಂದರು. ಒಂದು ವೇಳೆ ಬಂಗಾಳಿಯರ ಬಗ್ಗೆ ನಿಜವಾಗಲೂ ಕಾಳಜಿ ಇದ್ದರೆ, ತಕ್ಷಣವೇ ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತರುವಂತೆ ಸವಾಲು ಹಾಕಿದರು.
ಅಸ್ಸಾಂ ರಾಜ್ಯದ ಜನ ಮತ್ತು ಬಂಗಾಳಿಯರ ನಡುವೆ ಯಾವುದೇ ವಿಭಜನೆ ಇಲ್ಲ. ಇಲ್ಲಿ ನೆಲೆಸಿರುವ ಪಶ್ಚಿಮ ಬಂಗಾಳ ಜನ ತಮ್ಮ ಭಾಷೆ, ಧರ್ಮವನ್ನು ಪಾಲಿಸುತ್ತಾ, ಅಸ್ಸಾಂನ ಭಾಗವಾಗಿದ್ದಾರೆ ಎಂದ ಹಿಮಂತ್ ಬಿಸ್ವಾ ಶರ್ಮಾ, ಬಂಗಾಳಿಯರ ಬಗ್ಗೆ ಟಿಎಂಸಿ ನಾಯಕರ ನಿಲುವನ್ನು ಪ್ರಶ್ನಿಸಿ, ನಿಮಗೆ ಬಂಗಾಳಿ ಜನರ ಬಗ್ಗೆ ಕಾಳಜಿ ಇದ್ದರೆ, ಪಶ್ಚಿಮ ಬಂಗಾಳದಲ್ಲಿ ಸಿಎಎ ಅನ್ನು ಏಕೆ ಜಾರಿಗೆ ತರಬಾರದು? ಎಂದರು.
ಮಮತಾ ಬ್ಯಾನರ್ಜಿ ಬಂಗಾಳಿಯರನ್ನು ಇಷ್ಟಪಡುತ್ತಾರೋ ಅಥವಾ ಮುಸ್ಲಿಂ ಬಂಗಾಳಿಗ ಮಾತ್ರ ಇಷ್ಟಪಡುತ್ತಾರೋ ಎಂಬ ಪ್ರಶ್ನೆ ಎದುರಾದರೆ. ನನ್ನ ಉತ್ತರ ಮುಸ್ಲಿಂ ಬಂಗಾಳಿಗಳನ್ನು ಮಾತ್ರ ಇಷ್ಟಪಡುತ್ತಾರೆ ಎನ್ನುವುದಾಗಿರುತ್ತದೆ ಎಂದರು.(ಏಜೆನ್ಸೀಸ್)