ನ್ಯೂಸ್

ಅಕ್ರಮವಾಗಿ ವಿದೇಶದಿಂದ ಸಾಗಿಸುತ್ತಿದ್ದ ಇ-ಸಿಗರೇಟ್​ ವಶ!

ಮೋಹನ್​ ಶೆಟ್ಟಿ

ದೇವನಹಳ್ಳಿ: ವಿದೇಶದಿಂದ ಅಕ್ರಮವಾಗಿ ಇ-ಸಿಗರೇಟ್​ಗಳ ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್​ ಅಧಿಕಾರಿಗಳು, ಪ್ರಯಾಣಿಕರಿಂದ ಇ-ಸಿಗರೇಟ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಏರ್​ಪೋರ್ಟ್​ನ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳು ಸೆರೆಯಾಗಿದ್ದು, ಮಲೇಶಿಯಾದ ಕೋಲಲಾಂಪುರದಿಂದ ಬಂದ ಪ್ರಯಾಣಿಕರು ಅಕ್ರಮವಾಗಿ ವಿದೇಶದಿಂದ ಸಾಗಿಸುತ್ತಿದ್ದ ಇ ಸಿಗರೇಟ್​ಗಳನ್ನು ಇದೀಗ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ತಡರಾತ್ರಿ ಎಂಎಚ್ 192ನ ಮಲೇಶಿಯಾ ಏರ್​ಲೈನ್ಸ್​ನಲ್ಲಿ ಆಗಮಿಸಿದ್ದ ಇಬ್ಬರು ಪ್ರಯಾಣಿಕರಿಂದ ಬರೋಬ್ಬರಿ 15.9 ಲಕ್ಷ ರೂ. ಮೌಲ್ಯದ 1,590 ಸಿಗರೇಟ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿರುವ ಅಧಿಕಾರಿಗಳು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.