ಚೆನ್ನೈ: ಮದ್ರಾಸ್ ಐಐಟಿ ನಿಧಿ ಸಂಗ್ರಹದಲ್ಲಿ ಇತಿಹಾಸ ಸೃಷ್ಟಿಸಿದೆ. 2023-24ರ ಆರ್ಥಿಕ ವರ್ಷದಲ್ಲಿ ಹಿಂದೆಂದೂ ಕಂಡರಿಯದ 513 ಕೋಟಿ ರೂಪಾಯಿ ದೇಣಿಗೆಯಾಗಿ ಸಂಗ್ರಹಿಸಲಾಗಿದೆ ಎಂದು ನಿರ್ದೇಶಕ ಪ್ರೊಫೆಸರ್ ಕಾಮಕೋಟಿ ಬುಧವಾರ ಪ್ರಕಟಿಸಿದರು.
ಮದ್ರಾಸ್ ಐಐಟಿ ಇತಿಹಾಸದಲ್ಲಿ ದಾನಿಗಳಿಂದ ಇಷ್ಟು ದೊಡ್ಡ ಮೊತ್ತದ ಧನಸಹಾಯ ಪಡೆಯುತ್ತಿರುವುದು ಇದೇ ಮೊದಲು. ಇವುಗಳ ಜೊತೆಗೆ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಹಳೆಯ ವಿದ್ಯಾರ್ಥಿಗಳು ಇನ್ನೂ 717ರೂ. ಕೋಟಿ ಹಣವನ್ನು ನೀಡಲು ಮುಂದೆ ಬಂದಿದ್ದಾರೆ ಎಂದು ಕಾಮಕೋಟಿ ಹೇಳಿದರು.
ಈ ಹಣವನ್ನು ಸಂಶೋಧನೆ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಅನುದಾನಕ್ಕಾಗಿ ಬಳಸಲಾಗುವುದು ಎಂದು ತಿಳಿದುಬಂದಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಐಐಟಿಗೆ 976.2 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದರು. ದೇಣಿಗೆ ನೀಡಿದವರಲ್ಲಿ 60,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಅವರು ವಿವರಿಸಿದರು.
ಕಳೆದ ಆರ್ಥಿಕ ವರ್ಷದಲ್ಲಿ ಹಳೆಯ ವಿದ್ಯಾರ್ಥಿಗಳಿಂದ 368 ಕೋಟಿ ರೂ., ಕಾರ್ಪೊರೇಟ್ ಸಂಸ್ಥೆಗಳಿಂದ 95 ಕೋಟಿ ರೂ. ಮತ್ತು ಇತರ ದಾನಿಗಳಿಂದ 50 ಕೋಟಿ ರೂ., 960 ಹಳೆಯ ವಿದ್ಯಾರ್ಥಿಗಳು ಮತ್ತು 112 ಕಾರ್ಪೊರೇಟ್ ಸಂಸ್ಥೆಗಳು ಸೇರಿದಂತೆ 1,072 ದಾನಿಗಳು ಕೊಡುಗೆ ನೀಡಿದ್ದಾರೆ ಎಂದರು.
ಐಐಟಿ ಮದ್ರಾಸ್ ಅಲುಮ್ನಿ ಚಾರಿಟೇಬಲ್ ಟ್ರಸ್ಟ್ (ಐಐಟಿಎಂಸಿಟಿ) ಅಧ್ಯಕ್ಷ ವಿ.ಶಂಕರ್ ಮಾತನಾಡಿ, ನಿಧಿ ನಿರ್ವಹಣೆಯಲ್ಲಿ ಪಾರದರ್ಶಕತೆಯಿಂದಾಗಿ ಹಳೆ ವಿದ್ಯಾರ್ಥಿಗಳ ಸಂಘವು ಸಂಸ್ಥೆಯಲ್ಲಿ ವಿಶ್ವಾಸವಿಟ್ಟು ನಿಧಿಯನ್ನು ನೀಡಿದೆ ಎಂದಿ ಹೇಳಿದರು.
2020-21 ರಿಂದ ಐಐಟಿ ಮದ್ರಾಸ್‌ಗೆ ಹಣವು ಅನೇಕ ಪಟ್ಟು ಹೆಚ್ಚಾಗಿದೆ. 2013-14ನೇ ಹಣಕಾಸು ವರ್ಷದಲ್ಲಿ 14.87 ಕೋಟಿರೂ., 2021-22 ಮತ್ತು 2022-23ರ ಅವಧಿಯಲ್ಲಿ ಇದು 131 ಕೋಟಿ ರೂ. ಮತ್ತು 231 ಕೋಟಿ ರೂ. ಗೆ ಏರಿಕೆಯಾಗಿದೆ.