ನ್ಯೂಸ್

ಪರಿಣಾಮಕಾರಿ ಪರೀಕ್ಷೆಗೆ ಭುವನೇಶ್ವರ ಐಐಟಿ ತಂದಿರುವ ಅತ್ಯಾಧುನಿಕ ವಿಧಾನ ಯಾವುದು?

sspmiracle1982

ಭುವನೇಶ್ವರ: ಅಸ್ತಿತ್ವದಲ್ಲಿರುವ ವ್ಯವಸ್ಥೆಯಲ್ಲಿನ ಲೋಷದೋಷಗಳನ್ನು ಸರಿಪಡಿಸಿ ಅತ್ಯಾಧುನಿಕ ರೀತಿಯ ಆನ್​​ಲೈನ್ ಪರೀಕ್ಷಾ ವಿಧಾನವನ್ನು ರಚಿಸಿರುವುದಾಗಿ ಭುವನೇಶ್ವರ ಐಐಟಿ ತಿಳಿಸಿದೆ.

ಈ ವಿಧಾನದ ಮೂಲಕ ತರಗತಿ ಪರೀಕ್ಷೆಗಳು, ಸೆಮಿಸ್ಟರ್ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಗಳೂ ಸೇರಿದಂತೆ ಎಲ್ಲ ಪ್ರಕಾರದ ಪರೀಕ್ಷೆಗಳನ್ನು ನಡೆಸಬಹುದು ಎಂದು ಸಂಸ್ಥೆ ತಿಳಿಸಿದೆ.

ಕೇವಲ ಒಂದೇ ರೀತಿಯ ಪರೀಕ್ಷಾ ವಿಧಾನ ಅವಲಂಬಿಸುವುದು, ಮೇಲ್ವಿಚಾರಣೆಯಲ್ಲಿ ವಿಶ್ವಾಸಾರ್ಹತೆ ಕೊರತೆ, ಆನ್​​ಲೈನ್ ಪರೀಕ್ಷೆ ವಿಧಾನದಲ್ಲಿ ಸಂಪರ್ಕ ಕೊರತೆಯಂತಹ ಸಮಸ್ಯೆಗಳಿಂದ ಈ ವಿಧಾನ ಮುಕ್ತವಾಗಿರಲಿದೆ ಎಂದು ಐಐಟಿ ತಿಳಿಸಿದೆ.

ಉದ್ದೇಶಿತ ಆನ್‌ಲೈನ್ ಪರೀಕ್ಷಾ ವ್ಯವಸ್ಥೆಯು ವಿಶ್ವಾಸಾರ್ಹವಾಗಿದ್ದು ಸರಳವಾದ ಕಂಪ್ಯೂಟರ್ ಆಧಾರಿತ ಪರೀಕ್ಷೆಯಿಂದ ಹಿಡಿದು ವಿವರವಾದ ಸಾಂಪ್ರದಾಯಿಕ ಪರೀಕ್ಷೆಗಳವರೆಗೆ ವ್ಯಾಪಕ ರೀತಿಯ ಪರೀಕ್ಷೆಗಳನ್ನು ನಡೆಸಲು ಈ ವಿಧಾನವನ್ನು ಬಳಸಬಹುದು ಎಂದು ನಿರ್ದೇಶಕ ಆರ್.ವಿ.ರಾಜ ಕುಮಾರ್ ತಿಳಿಸಿದ್ದಾರೆ.

31 ವಿಷಯಗಳ ಪ್ರಶ್ನೆ ಪತ್ರಿಕೆಗಳು ಮತ್ತು 20 ಮೇಲ್ವಿಚಾರಕರೊಂದಿಗೆ ದೇಶಾದ್ಯಂತ ಸುಮಾರು 240 ವಿದ್ಯಾರ್ಥಿಗಳಿಗೆ ಅಣಕು ಪರೀಕ್ಷೆಯನ್ನು ನಡೆಸುವ ಮೂಲಕ ಸಂಸ್ಥೆ ಸಂಪೂರ್ಣ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.