More

    ಕೊನೆಗೂ ಹುಟ್ಟಿದ ‘ಲಾಕ್​ಡೌನ್​ ಯಾದವ್​’….!

    ಭೋಪಾಲ್: ಈ ಕೋವಿಡ್-19, ಕರೊನಾವೈರಸ್, ಲಾಕ್​​ಡೌನ್​​ನ್ನಿಂದಾಗಿ ಎಷ್ಟೋ ಮಂದಿ ಮನೆ ಮಠ, ಆಸ್ತಿ ಪಾಸ್ತಿ, ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಲಾಕ್​​ಡೌನ್ ಮಧ್ಯೆಯೇ ಹೊಸ ಬಾಳಿಗೆ ಪಯಣ ಶುರು ಮಾಡಲು ಸಪ್ತಪದಿ ತುಳಿದವರೂ ಇದ್ದಾರೆ. ಮನೆ ತಲುಪಲು ಎಲ್ಲಿಂದೆಲ್ಲಿಗೋ ಪಯಣ ಶುರು ಮಾಡಿದ ಗರ್ಭಿಣಿಯರು ಮಾರ್ಗ ಮಧ್ಯೆ ಪ್ರಸವ ವೇದನೆ ಶುರುವಾಗಿ ಮಗುವಿಗೆ ಜನ್ಮ ನೀಡಿದ್ದೂ ಆಗಿದೆ. ಇದೆಲ್ಲದರ ಮಧ್ಯೆಯೂ ಮತ್ತಷ್ಟು ಸ್ವಾರಸ್ಯಕರ ಸಂಗತಿಗಳು ನಡೆದಿವೆ. ಇಂಥದ್ದೇ ಇನ್ನೊಂದು ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆದಿದೆ.
    ಲಾಕ್​​ಡೌನ್​ ನ ಈ ಸಮಯದಲ್ಲಿ ಶುಕ್ರವಾರ ಮಧ್ಯರಾತ್ರಿ ರೈಲು ಪ್ರಯಾಣದಲ್ಲಿರುವಾಗ ಮಧ್ಯಪ್ರದೇಶದ ಬುರ್ಹಾನ್​ಪುರದಲ್ಲಿ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದೇನಾ ಸ್ವಾರಸ್ಯಕರ ಸಂಗತಿ? ಎಂದು ಮೂಗೆಳೆಯಬೇಡಿ. ಇನ್ನೂ ಇದೆ ಕಥೆ ಕೇಳಿ.

    ಇದನ್ನೂ ಓದಿ: VIDEO ] ಹಾವಿನ ರಕ್ಷಣೆಗೂ ಹರಸಾಹಸಪಡಬೇಕು ನೋಡಿ…!

    ಲಾಕ್​ಡೌನ್ ಅವಧಿಯಲ್ಲಿ ಹುಟ್ಟಿದ ಈ ಮಗುವಿಗೆ ಲಾಕ್​​ಡೌನ್ ಎಂದೇ ನಾಮಕರಣ ಮಾಡುವುದಾಗಿ ಆ ಮಗುವಿನ ಪಾಲಕರು ತಿಳಿಸಿದ್ದಾರೆ. ಇದು ಇಂಟರೆಸ್ಟಿಂಗ್ ಮ್ಯಾಟರ್ ಅಂದ್ರೆ.
    ರೀನಾ ಮತ್ತು ಆಕೆಯ ಗಂಡ ಉದಯಭಾನ್​ ಸಿಂಗ್ ಯಾದವ್ ಮುಂಬೈದಿಂದ ಉತ್ತರಪ್ರದೇಶದ ಅಂಬೇಡ್ಕರ್ ನಗರಕ್ಕೆ ಹೋಗಲು ಶ್ರಮಿಕ್ ರೈಲಿನಲ್ಲಿ ಪ್ರಯಾಣದಲ್ಲಿದ್ದಾಗ ಗರ್ಭಿಣಿ ರೀನಾಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದನ್ನು ರೈಲ್ವೆ ಅಧಿಕಾರಿಗಳಿಗೆ ಪತಿ ತಿಳಿಸಿದ್ದಾರೆ. ಮಾರ್ಗ ಮಧ್ಯದ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರೀನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
    ಲಾಕ್​​ಡೌನ್​​​ನ ಈ ಸಂದರ್ಭದಲ್ಲಿ ಹುಟ್ಟಿದ ಮಗುವಿಗೆ ಅದರ ನೆನಪಿಗಾಗಿ ಲಾಕ್​ಡೌನ್ ಯಾದವ್ ಎಂದು ಹೆಸರಿಡುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಇದನ್ನೂ ಓದಿ: ಉದ್ಯಮಶೀಲತೆ ಅಭಿವೃದ್ಧಿಯತ್ತ ಸಾಗುತ್ತಿದೆ ಉತ್ತರ ಪ್ರದೇಶ

    ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡ ನಂತರ ರೈಲ್ವೆ ಸಹಾಯವಾಣಿಯನ್ನು ಸಂಪರ್ಕಿಸಿದೆ ಮತ್ತು ಅಧಿಕಾರಿಗಳು ಬುರ್ಹಾನ್​​ಪುರದಲ್ಲಿ ಇಳಿಯಲು ನಮಗೆ ಸಹಾಯ ಮಾಡಿದರಷ್ಟೇ ಅಲ್ಲದೆ ಆಸ್ಪತ್ರೆಗೆ ಕರೆದೊಯ್ದರು ಎಂದು ಆಕೆಯ ಪತಿ ತಿಳಿಸಿದ್ದಾರೆ.
    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರವೀಣ್ ಸಿಂಗ್ ಮಾತನಾಡಿ, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಅವರಿಗೆ ಬಟ್ಟೆ, ಔಷಧ ಮತ್ತು ಆಹಾರದ ಜತೆಗೆ ಹೆಚ್ಚುವರಿಯಾಗಿ 5,000 ರೂ.ಧನಸಹಾಯ ನೀಡಿ, ಖಾಸಗಿ ವಾಹನದ ಮೂಲಕ ಅವರನ್ನು ಉತ್ತರಪ್ರದೇಶದಲ್ಲಿರುವ ಅವರ ಊರಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. 

    36 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಸಾಗಿಸಲು ಸಜ್ಜಾಗಿದೆ ರೈಲ್ವೆ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts