ನ್ಯೂಸ್

ಇಂದಿರಾ ಗಾಂಧಿ ಓಪನ್ ಯೂನಿವರ್ಸಿಟಿ ದಾಖಲಾತಿ ಆರಂಭ

rashmirhebbur

ನವದೆಹಲಿ : ಸಾರ್ವಜನಿಕರಿಗೆ ಮುಕ್ತ ಶಿಕ್ಷಣ ಅವಕಾಶ ನೀಡುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(IGNOU) ತನ್ನ ಜುಲೈ 2021 ರ ದಾಖಲಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಹಲವು ಡಿಸ್ಟೆನ್ಸ್​ ಲರ್ನಿಂಗ್ ಕೋರ್ಸ್​ಗಳಿಗೆ ಮತ್ತು ಆನ್​ಲೈನ್ ಪ್ರೋಗ್ರಾಂಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದ್ದು, ಜುಲೈ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಮಾಸ್ಟರ್ಸ್​​, ಬ್ಯಾಚಲರ್ಸ್​ ಪ್ರೋಗ್ರಾಂಗಳು, ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್​ ಕೋರ್ಸ್‌ಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ 200 ಕ್ಕೂ ಹೆಚ್ಚು ದೂರಶಿಕ್ಷಣ ಕಾರ್ಯಕ್ರಮಗಳನ್ನು ಇಗ್ನೌ ನಡೆಸುತ್ತದೆ. ದೇಶದ ವಿವಿಧ ಪ್ರಮುಖ ನಗರಗಳಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಗ್ನೌನ ಅಧ್ಯಯನ ಕೇಂದ್ರಗಳಿದ್ದು, ವಿದ್ಯಾರ್ಥಿಗಳಿಗೆ ಸೂಕ್ತ ಬೆಂಬಲ ಕೂಡ ಒದಗಿಸುತ್ತವೆ. ಯೂನಿವರ್ಸಿಟಿಯ ವೆಬ್​ಸೈಟ್ ವಿಳಾಸ ಇಲ್ಲಿದೆ - http://ignou.ac.in/.

ಓಪನ್​ ಡಿಸ್ಟೆನ್ಸ್​ ಲರ್ನಿಂಗ್​ ಕೋರ್ಸ್​ಗಳೊಂದಿಗೆ 16 ಆನ್​ಲೈನ್ ಪ್ರೋಗ್ರಾಂಗಳನ್ನೂ ಇಗ್ನೌ ನಡೆಸುತ್ತದೆ. ಈ ಲಿಂಕ್​ನಲ್ಲಿ ಆನ್​ಲೈನ್​ ಮೋಡ್​ ಕೋರ್ಸ್​ಗಳ ವಿವರಗಳನ್ನು ಪಡೆಯಬಹುದು - https://iop.ignouonline.ac.in/.

ಓಡಿಎಲ್​ ಪ್ರೋಗ್ರಾಂಗಳ ನೋಂದಣಿಗೆ ಈ ಲಿಂಕ್ ಬಳಸಿ - https://ignouadmission.samarth.edu.in/

ಆನ್​ಲೈನ್​ ಮೋಡ್​ ಪ್ರೋಗ್ರಾಂಗಳ ನೋಂದಣಿಗೆ ಈ ಲಿಂಕ್ ಬಳಸಿ - https://ignouiop.samarth.edu.in/ (ಏಜೆನ್ಸೀಸ್)