More

    84,332 ಹೊಸ ಕರೊನಾ ಪ್ರಕರಣ; 10.80 ಲಕ್ಷಕ್ಕೆ ಇಳಿದ ಸಕ್ರಿಯ ಸಂಖ್ಯೆ

    ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 84,332 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಇದು ಕಳೆದ 70 ದಿನಗಳಿಂದ ದಾಖಲಾಗಿರುವ ಅತಿಕಡಿಮೆ ನಿತ್ಯಪ್ರಕರಣಗಳ ಸಂಖ್ಯೆಯಾಗಿದೆ. ದೇಶದಾದ್ಯಂತ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ 10.80 ಲಕ್ಷಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಿಗ್ಗೆ ನೀಡಿರುವ ವರದಿ ತಿಳಿಸಿದೆ.

    ಕಳೆದ 24 ಗಂಟೆಗಳಲ್ಲಿ 4,002 ಜನರು ಕರೊನಾದಿಂದಾಗಿ ಮೃತಪಟ್ಟಿದ್ದು, ದೇಶದ ಈವರೆಗಿನ ಸಾವಿನ ಸಂಖ್ಯೆ 3,67,081 ತಲುಪಿದೆ. ಅತಿಹೆಚ್ಚು ಸಾವುಗಳು, ಅಂದರೆ 2,619 ಸಾವುಗಳು, ಮಹಾರಾಷ್ಟ್ರದಲ್ಲಿ ಸಂಭವಿಸಿವೆ. ಒಟ್ಟು 1,21,311 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗಿನ ಗುಣಮುಖರ ಸಂಖ್ಯೆ 2,79,11,384 ಕ್ಕೆ ತಲುಪಿದೆ.

    ಇದನ್ನೂ ಓದಿ: ಸಿಂಧೂರಿ ಪರ ಮೈಸೂರಲ್ಲಿ ಸಹಿ ಸಂಗ್ರಹ ಅಭಿಯಾನ: ಮತ್ತೆ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲು ಒತ್ತಾಯ

    ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಐದು ರಾಜ್ಯಗಳೆಂದರೆ ತಮಿಳುನಾಡು – 15,759 ಪ್ರಕರಣಗಳು, ಕೇರಳ – 14,233, ಮಹಾರಾಷ್ಟ್ರ – 11,766, ಕರ್ನಾಟಕ – 8,249 ಮತ್ತು ಆಂಧ್ರಪ್ರದೇಶ – 8,239 ಪ್ರಕರಣಗಳು. ದಾಖಲಾದ ಹೊಸ ಪ್ರಕರಣಗಳಲ್ಲಿ ಶೇ. 69.07 ರಷ್ಟು ಈ ರಾಜ್ಯಗಳಲ್ಲೇ ಇದ್ದರೆ, ತಮಿಳುನಾಡಿನಲ್ಲೇ ಶೇ.18.69 ರಷ್ಟು ಪ್ರಕರಣಗಳು ಕಂಡುಬಂದಿವೆ. (ಏಜೆನ್ಸೀಸ್)

    ಸಂಬಳ ಹೆಚ್ಚಿಸುತ್ತಿಲ್ಲ, ಮನೆ ಸಂಭಾಳಿಸಲು ಆಗುತ್ತಿಲ್ಲ ಎಂದು ಕಾರ್ಮಿಕ ಆತ್ಮಹತ್ಯೆ

    ಡೇಟಿಂಗ್​ ಆ್ಯಪ್​ ಮೂಲಕ ಪುಸಲಾಯಿಸಿ ಕರೆದರು, ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್​ ಮಾಡಿದರು!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts