ನ್ಯೂಸ್

ಹೋಳಿ ಹಬ್ಬದಂದು ನಮಾಜ್​ ಮಾಡಲು ಬಯಸಿದರೆ ಮನೆಯಲ್ಲಿಯೇ ಪ್ರಾರ್ಥಿಸಿ; ಸಿಎಂ ಯೋಗಿ ಆದಿತ್ಯನಾಥ್​ ಹೀಗೆಳಿದ್ದೇಕೆ? | Holi

Holi: ಮಾ.14ರಂದು ಶುಕ್ರವಾರ ಹೋಳಿ ಹಬ್ಬ ಇರುವುದರಿಂದ ಯಾರಾದರೂ ನಮಾಜ್​(ಪಾರ್ಥನೆ) ಮಾಡಲು ಬಯಸಿದರೆ, ಅಂದು ಅವರು ತಮ್ಮ ಮನೆಯಲ್ಲಿಯೇ ಮಾಡಬಹುದು. ಮಸೀದಿಗೆ ಹೋಗುವ ಅವಶ್ಯಕತೆ ಇಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.

ಈ ಕುರಿತು ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಮಾತನಾಡಿರುವ ಸಿಎಂ, '' ಹೋಳಿ ಹಬ್ಬದಂದು(ಶುಕ್ರವಾರ) ಮಸೀದಿಗೆ ಹೋಗಲು ಬಯಸಿದ್ದರೆ ಅಂದು ಬಣ್ಣ ಎರಚುವ ಅನಿರ್ವಾಯತೆ ಇರುತ್ತದೆ'' ಎಂಬ ಅಲ್ಲಿನ ಪೊಲೀಸ್​ ಅಧಿಕಾರಿಯೊಬ್ಬರು ಹೇಳಿದ ಹೇಳಿಕೆಯನ್ನು ಸಿಎಂ ಯೋಗಿ ಸಮರ್ಥಿಸಿಕೊಂಡಿದ್ದಾರೆ.

ಅಧಿಕಾರಿ ಹೇಳಿದ ಮಾತನ್ನು ಬೆಂಬಲಿಸಿ ಸಿಎಂ, ಅಧಿಕಾರಿ ಹೇಳಿರುವುದು ಸರಿಯಿದೆ. ಹೀಗಾಗಿ, ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದು ಯೋಗಿ ಹೇಳಿದ್ದಾರೆ.

ಅಧಿಕಾರಿ ಹೇಳಿದ್ದೇನು..?

''ಹೋಳಿ ವರ್ಷಕ್ಕೊಮ್ಮೆ ಬರುವ ಹಬ್ಬ, ಆದರೆ, ಶುಕ್ರವಾರ ಬರುವ ಪಾರ್ಥನೆ ವರ್ಷಕ್ಕೆ 52 ಸಾರಿ ಬರುತ್ತೆ. ಹೋಳಿಯ ಬಣ್ಣಗಳಿಂದ ಯಾರಾದರೂ ಅನಾನುಕೂಲತೆಯನ್ನು ಅನುಭವಿಸಿದರೆ, ಅವರು ಆ ದಿನ ಮನೆಯೊಳಗೆ ಇರಬೇಕು. ಹಬ್ಬಗಳನ್ನು ಒಟ್ಟಿಗೆ ಆಚರಿಸಬೇಕಾದ್ದರಿಂದ ಹೊರಗೆ ಹೋಗುವವರು ವಿಶಾಲ ಮನೋಭಾವವನ್ನು ಹೊಂದಿರಬೇಕು" ಪೊಲೀಸ್​ ಅಧಿಕಾರಿ ಗುರುವಾರ(ಮಾ.06) ಸುದ್ದಿಗಾರರಿಗೆ ತಿಳಿಸಿದ್ದರು.(ಏಜೆನ್ಸೀಸ್​)