Face pack: ಪ್ರತಿಯೊಬ್ಬರು ಕನ್ನಡಿಯ ಮುಂದೆ ನಿಂತಾಗ ಚರ್ಮವು ಆರೋಗ್ಯಕರ ಕಾಂತಿಯುತವಾಗಿ ಕಾಣಬೇಕೆಂದು ಬಯಸುತ್ತಾರೆ. ಮುಖದಲ್ಲಿ ಯಾವುದೇ ಕಲೆಗಳು, ಮೊಡವೆಗಳು ಇಲ್ಲದೆ, ಯಾವಾಗಲು ಯೌವನದಂತೆ ಕಾಣಲು ಬಯಸುತ್ತಾರೆ. ಹಾಗಾಗಿ ಜನರು ನಾವು ದುಬಾರಿ ಕ್ರೀಮ್ಗಳ ಮೊರೆಹೋಗುತ್ತೇವೆ. ಇಲ್ಲವೇ ಪಾರ್ಲರತ್ತ ಮುಖ ಮಾಡುತ್ತವೆ. ಹಾಗಾಗಿ ನೀವು ಮನೆಯಲ್ಲಿಯೇ ಈ ರೀತಿಯ ಮನೆಮದ್ದುಗಳನ್ನು ಬಳಸಿ ಇವು ನಿಮ್ಮ ಚರ್ಮವನ್ನು ಆಳವಾಗಿ ಪೋಷಿಸಲು ಸಹಾಯ ಮಾಡುತ್ತವೆ.
* 2 ಚಮಚ ಅಕ್ಕಿಹಿಟ್ಟು
* 1 ಚಮಚ ಅಲೊವೆರಾ ಜೆಲ್
* 1 ಚಮಚ ರೋಸ್ ವಾಟರ್
ನಿಮ್ಮ ಮುಖಕ್ಕೆ ಅಕ್ಕಿಹಿಟ್ಟನ್ನು ಹಚ್ಚುವುದರಿಂದ ಇದು ನಿಮ್ಮ ಮುಖದಲ್ಲಿರುವ ಕೊಳಕನ್ನು ತೆಗೆಯಲು ಸಹಾಯ ಮಾಡುತ್ತದೆ. ಅಲೊವೆರಾ ಚರ್ಮವನ್ನು ತಂಪಾಗಿಸುತ್ತದೆ ಹಾಗೇ ರೋಸ್ ವಾಟರ್ ಚರ್ಮಕ್ಕೆ ಸೌಮ್ಯವಾದ ಪರಿಮಳ ನೀಡುತ್ತದೆ.
ಇದನ್ನೂ ಓದಿ: ಕೃತಿ ಶೆಟ್ಟಿ ಭರ್ಜರಿ ಕಮ್ಬ್ಯಾಕ್! ಅಭಿನಯದ 3 ಬಹುನಿರೀಕ್ಷಿತ ಸಿನಿಮಾ ಒಂದೇ ತಿಂಗಳಲ್ಲಿ ರಿಲೀಸ್? | Krithi Shetty
ಮುಖವನ್ನು ಸೌಂದರ್ಯದಿಂದ ಕಾಣುವಂತೆ ಮಡಲು ಮೊದಲು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಒಂದು ಚಮಚ ಅಕ್ಕಿ ಹಿಟ್ಟು ಮತ್ತು ಅಲೊವೆರಾ ಜೆಲ್ ಸೇರಿಸಿ ಮುಖಕ್ಕೆ ಹಚ್ಚಿ. 3 ನಿಮಿಷಗಳ ಕಾಲ ಮಸಾಜ್ ಮಾಡಿ. ಇದು ಚರ್ಮದ ಕೋಶವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ರಂಧ್ರದಲ್ಲಿ ಸಂಗ್ರಹವಾಗಿರುವ ಎಣ್ಣೆ ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ.
ಸ್ಕ್ರಬ್ ಮಾಡಿದ ನಂತರ, ಈ ಮಿಶ್ರಣಕ್ಕೆ ರೋಸ್ ವಾಟರ್ ಸೇರಿಸಿ ಮಿಶ್ರಣ ತಯಾರಿಸಿ. ನಂತರ ಈ ಪೇಸ್ಟ್ನ್ನು ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಈ ಫೇಸ್ ಪ್ಯಾಕ್ ಚರ್ಮವನ್ನು ಪೋಷಿಸುತ್ತದೆ. ಎಣ್ಣೆಯುಕ್ತ ಚರ್ಮವನ್ನು ಕಡಿಮೆ ಮಾಡುತ್ತದೆ. ಮುಖಕ್ಕೆ ಹೊಳಪನ್ನು ನೀಡುತ್ತದೆ.
ಫೇಸ್ ಪ್ಯಾಕ್ ತೆಗೆದ ನಂತರ ಚರ್ಮ ಒಣಗಿದಂತೆ ಗೋಚರಿಸಬಹುದು. ಆದರಿಂದ ಮುಖವನ್ನು ಮಾಯಿಶ್ಚರೈಸಿಂಗ್ ಮಾಡಲು ಮುಖಕ್ಕೆ ಅಲೊವೆರಾ ಜೆಲ್ ಹಚ್ಚಿ. ಇದು ಚರ್ಮದಲ್ಲಿರುವ ತೇವಾಂಶವನ್ನು ಉಳಿಸಿ, ಮುಖ ಒಣಗದಂತೆ ಮಾಡಲು ಸಹಾಯ ಮಾಡುತ್ತದೆ. ಈ ವಿಧಾನವನ್ನು ಅನುಸರಿಸದೆ ಇದ್ದರೆ, ಚರ್ಮ ಬೇಗನೆ ಒಣಗುತ್ತದೆ.
ನೀವು ವಾರಕ್ಕೆ ಎರಡು ಬಾರಿ ಮನೆಯಲ್ಲಿ ತಯಾರಿಸಿದ ಫೇಶಿಯಲ್ನ್ನು ಬಳಸಿದಾಗ ಕೆಲವೇ ದಿನಗಳಲ್ಲಿ ವ್ಯತ್ಯಾಸವನ್ನು ಪಡೆಯಬಹುದು. ಈ ಮೂರು ಪದಾರ್ಥಗಳಿಂದ ನಿಮ್ಮ ಚರ್ಮವು ಹೊಳಪನ್ನು ನೀಡಲು ಸಹಾಯ ಮಾಡುತ್ತದೆ. ಅಕ್ಕಿ ಹಿಟ್ಟು ಚರ್ಮದ ಮೇಲಿರುವ ಟ್ಯಾನಿಂಗ್ಹಾಗೂ ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ. ರೋಸ್ ವಾಟರ್ ಮುಖಕ್ಕೆ ನೈಸರ್ಗಿಕವಾಗಿ ತಾಜಾತನವನ್ನು ನೀಡುತ್ತದೆ. ಇದು ಕಡಿಮೆ ಹಣದಲ್ಲಿ ದುಬಾರಿ ಚಿಕಿತ್ಸೆಗಳಿಗಿಂತ ಉತ್ತಮವಾಗಿ ಮುಖವನ್ನು ಹೊಳೆಯುವಂತೆ ಮಾಡುತ್ತದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ