Tejashwi Yadav: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಮೈತ್ರಿಕೂಟ ಗೆದ್ದರೆ, ರಾಜ್ಯದ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ ಸಿಗುತ್ತದೆ ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅಶ್ವಾಸನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಯಾದವ್, ಇಂದು ನಾವು ಒಂದು ಐತಿಹಾಸಿಕ ಘೋಷಣೆ ಮಾಡಲಿದ್ದೇವೆ. ಬಿಹಾರವನ್ನು ನಾವು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕೆಂದು ಅನೇಕ ಜನರು ತಿಳಿದುಕೊಳ್ಳಲು ಬಯಸಿದ್ದರು. ಆದರೆ 20 ವರ್ಷಗಳಲ್ಲಿ ಈ ಶಿಥಿಲಗೊಂಡ ಸರ್ಕಾರದಿಂದ ರಾಜ್ಯದಲ್ಲಿ ನಿರುದ್ಯೋಗ ಅತಿದೊಡ್ಡ ಸಮಸ್ಯೆಯಾಗಿದೆ ಎಂದು ಯಾರು ಅರಿತುಕೊಂಡಿಲ್ಲ ಎಂದು ಅಡಳಿತ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಹಿರಿಯ ‘ಐಪಿಎಸ್’ ಅಧಿಕಾರಿ ಆ*ತ್ಮಹತ್ಯೆ; ಪ್ರಭಾವಿಗಳ ಕಿರುಕುಳವೇ ಕಾರಣ ಎಂದು ಪತ್ನಿಯಿಂದ ‘ಸಿಎಂಗೆ’ ಪತ್ರ| Chandigarh
ಎನ್‌ಡಿಎಯೊಂದಿಗೆ ಜೆಡಿಯು ಮತ್ತು ಬಿಜೆಪಿಯು ಭರವಸೆ ನೀಡುತ್ತಿಲ್ಲ. ಬದಲಾಗಿ, ನಿರುದ್ಯೋಗ ಭತ್ಯೆಯನ್ನು ನೀಡುತ್ತಿವೆ. ಅಲ್ಲದೆ, ಸರ್ಕಾರಿ ಉದ್ಯೋಗವಿಲ್ಲದ ಬಿಹಾರ ಯಾವುದೇ ಕುಟುಂಬವು ನಾವು ಅಧಿಕಾರಕ್ಕೆ ಬಂದ ನಂತರ ಉದ್ಯೋಗ ಪಡೆಯುತ್ತದೆ. ನಾವು ಸರ್ಕಾರ ರಚಿಸಿದ 20 ದಿನಗಳಲ್ಲಿ, ನಾವು ಈ ಶಾಸನವನ್ನು ತರುತ್ತೇವೆ. ಮತ್ತು 20 ತಿಂಗಳೊಳಗೆ, ಸರ್ಕಾರಿ ಉದ್ಯೋಗವಿಲ್ಲದ ಯಾವುದೇ ಬಿಹಾರ ಮನೆ ಇರುವುದಿಲ್ಲ ಎಂದು ನಾವು ಖಚಿತಪಡಿಸುತ್ತೇವೆ ಎಂದು ಯಾದವ್ ಭರವಸೆ ನೀಡಿದ್ದಾರೆ.
ಮುಂದುವರೆದು ಮಾತನಾಡಿದ ತೇಜಸ್ವಿ, ಬಿಹಾರದ ಜನರು ಈ ಬಾರಿ ಬದಲಾವಣೆಯನ್ನು ಬಯಸುತ್ತಾರೆ. ಅಲ್ಲದೆ, ಸಾಮಾಜಿಕ ನ್ಯಾಯದ ಜತೆಗೆ, ಜನರಿಗೆ ಆರ್ಥಿಕ ನ್ಯಾಯವನ್ನು ಸಹ ನಾವು ಕೊಡುತ್ತೇವೆ. ಇದನ್ನೂ ಮಾಡುವುದಕ್ಕೆ ಇಚ್ಛಾಶಕ್ತಿ ಬೇಕು ಮತ್ತು ಅಡಳಿತ ಪಕ್ಷ ನಮ್ಮ ಘೋಷಣೆಗಳನ್ನು ನಕಲು ಮಾಡುತ್ತಿದೆ ಎಂದು ಗುಡುಗಿದ್ದಾರೆ.
ಮುಂಬರುವ ಬಿಹಾರ ಚುನಾವಣೆಯು 243 ವಿಧಾನಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮುಂದಿನ ನವೆಂಬರ್ 6 ಮತ್ತು ನವೆಂಬರ್ 11ರಂದು ಮತದಾನ ನಡೆಯಲಿದೆ. ಅಲ್ಲದೆ, ನವೆಂಬರ್ 14ರಂದು ಚುನಾವಣೆ ಫಲಿತಾಂಶ ಬರಲಿದೆ. (ಏಜೆನ್ಸೀಸ್)