ಪಂಜಾಬ್: ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ, ವಾರಿಸ್ ಪಂಜಾಬ್ ದೇ ಸಂಘಟನೆಯ ಮುಖ್ಯಸ್ಥ ಅಮೃತ್ಪಾಲ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ಪೊಲೀಸರು ಹಾಗೂ ಸರ್ಕಾರದ ವಿರುದ್ದ ಸರಣಿ ಆರೋಪಗಳನ್ನು ಮಾಡಲಾಗಿದೆ.
ವಿಡಿಯೋದಲ್ಲಿ ಕಂಡು ಬರುವ ಹಾಗೆ ಕಪ್ಪು ಪೇಟ-ಶಾಲನ್ನು ಧರಿಸಿರುವ ಅಮೃತ್ಪಾಲ್ ಪಂಜಾಬ್ ಸರ್ಕಾರಕ್ಕೆ ತನ್ನನ್ನು ಬಂಧಿಸುವ ಉದ್ಧೇಶ ಇದ್ದಿದ್ದರೆ ಪೊಲೀಸರು ನನ್ನ ಮನೆಗೆ ಬರಬಹುದಿತ್ತು. ನಾನು ಶರಣಾಗಲು ಸಿದ್ದನಾಗಿದ್ದೆ ಎಂದು ಹೇಳಿಕೆ ನೀಡಿದ್ದಾರೆ.
ತನ್ನನ್ನು ಬಂಧಿಸಲು ಇಲ್ಲಿಯವರೆಗೂ ಸಾವಿರಾರು ಪೊಲೀಸರು ಬಂದಿದ್ಧಾರೆ. ಆದರೆ, ಅವರೆಲ್ಲರಿಂದಲ್ಲೂ ಆ ಭಗವಂತ ನನ್ನನ್ನು ಕಾಪಾಡಿದ ಮತ್ತು ತಮ್ಮ ಸಿಖ್ ಸಮುದಾಯದವರನ್ನು ಬಂಧಿಸಿ ಹಿಂಸೆ ನೀಡಿರುವ ಪಂಜಾಬ್ ಸರ್ಕಾರ ಹಾಗೂ ಪೊಲೀಸರ ಕ್ರಮವನ್ನ ಖಂಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಹಿನ್ನಲೆ ಖಲಿಸ್ತಾನಿ ಪ್ರತ್ಯೇಕವಾದಿ ಅಮೃತ್ಪಾಲ್ ಸಿಂಗ್ ಪೊಲೀಸರಿಗೆ ಶರಣಾಗಬಹುದು ಎಂದು ಹೇಳಲಾಗಿದೆ.
ಅಮೃತ್ಪಾಲ್ ವಿಡಿಯೋ ಬಿಡುಗಡೆ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಅಮೃತಸರ್ ಪೊಲೀಸ್ ಕಮಿಷನರ್ ನೌನಿಹಾಲ್ ಸಿಂಗ್ ಅಮೃತ್ಪಾಲ್ ಸಿಂಗ್ ಗೋಲ್ಡನ್ ಟೆಂಪಲ್ನಲ್ಲಿ ಶರಣಾಗುವ ಸಾದ್ಯತೆ ಇದೆ. ಕಾನೂನು-ಸುವ್ಯವಸ್ಥೆ ಹದಗೆಡದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗುವುದು ಎಂದು ತಿಳಿಸಿದ್ಧಾರೆ.