ನ್ಯೂಸ್

ಕಾಶ್ಮೀರ ಪಂಡಿತರಿಗೆ ಶೃಂಗೇರಿ ಮಠದಿಂದ ಶಾರದಾಂಬೆಯ ವಿಗ್ರಹ ಹಸ್ತಾಂತರ

ಚಿಕ್ಕಮಗಳೂರು: ಶೃಂಗೇರಿ ಮಠದಿಂದ ಕಾಶ್ಮೀರದ ನೀಲಂಕಣಿವೆಯ ತೀತ್ವಾಲ್​ನಲ್ಲಿ ನಿರ್ಮಾಣವಾಗುತ್ತಿರುವ ನೂತನ ಶಾರದಾ ಪೀಠಕ್ಕೆ ಶಾರದೆಯ ವಿಗ್ರಹ ಹಸ್ತಾಂತರಿಸಲಾಗಿದೆ.

ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳಿಂದ ನೂತನ ವಿಗ್ರಹಕ್ಕೆ ವಿಜಯದಶಮಿಯಂದು ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಕಾಶ್ಮೀರಿ ಪಂಡಿತರ ಮೂಲಕ ಶಾರದಾಂಬೆಯ ವಿಗ್ರಹವನ್ನು ಹಸ್ತಾಂತರ ಮಾಡಲಾಯಿತು.

ಶಂಕರಾಚಾರ್ಯರು ಸರ್ವಜ್ಞ ಪೀಠಾರೋಹಣ ಮಾಡಿದ ಸ್ಥಳ ಕಾಶ್ಮೀರ. ಕಾಶ್ಮೀರದ ತೀತ್ವಾಲ್​ನಲ್ಲಿ ಶ್ರೀ ಶಾರದಾ ಪೀಠ ನಿರ್ಮಾಣ ಹಂತದಲ್ಲಿದೆ. ಇದೀಗ ಶೃಂಗೇರಿ ಮಠದಲ್ಲಿ ಮಾಡಲಾದ ಪಂಚಲೋಹದ ಶಾರದಾಂಬೆಯ ವಿಗ್ರಹವನ್ನು ಹಸ್ತಾಂತರ ಮಾಡಲಾಗಿದೆ.

ಮುಂದಿನ ವರ್ಷ ಸಂಕ್ರಾತಿಯ ನಂತರ ಉತ್ತರಾಯಣ ವೇಳೆ ತೀತ್ವಾಲ್​ನಲ್ಲಿ ನಿರ್ಮಾಣವಾಗುತ್ತಿರುವ ನೂತನ ಶ್ರೀ ಶಾರದಾ ಪೀಠದಲ್ಲಿ ಪಂಚಲೋಹದ ಶಾರದಾ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ.