ನ್ಯೂಸ್

ಮೂರ್ಖರಿಗೆ ನುಡಿಗಟ್ಟುಗಳು ಅರ್ಥವಾಗಲ್ಲ: ಬಿಜೆಪಿ ನಾಯಕರಿಗೆ ಮಹುವಾ ಮೊಯಿತ್ರಾ ಟಾಂಗ್​!| Mahua Moitra

Mahua Moitra : ಗೃಹ ಸಚಿವ ಅಮಿತ್​ ಶಾ ಅವರ ತಲೆಯನ್ನು ಕತ್ತರಿಸಿ ಮೇಜಿನ ಮೇಲೆ ಇಡಬೇಕು ಎಂದು ಹೇಳಿಕೆ ನೀಡಿದ್ದ ತೃಣಮೂಲ ಕಾಂಗ್ರೆಸ್​ ಸಂಸದೆ ಮೋಹುವ ಮೊಯಿತ್ರಾ ವಿರುದ್ಧ ಛತ್ತಿಸ್​ಗಢದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾದ ಹಿನ್ನಲೆ ಅವರು ಆಡಳಿತಾರೂಢ ಬಿಜೆಪಿ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

ತಾವು ನೀಡಿರುವ ಹೇಳಿಕೆಗೆ ನುಡಿಗಟ್ಟು ಎಂದು ಸ್ಪಷ್ಟನೆ ನೀಡಿದ್ದು ,ಮೂರ್ಖರಿಗೆ ಇದು ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.

ವಿವಾದಕ್ಕೆ ಕಾರಣವೇನು?

ಭಾರತಕ್ಕೆ ಅಕ್ರಮ ಬಾಂಗ್ಲಾದೇಶಿ ನುಸುಳುವಿಕೆಯನ್ನು ತಡೆಯುವಲ್ಲಿ ವಿಫಲವಾದ ಕೇಂದ್ರ ಸಚಿವ ಅಮಿತ್​ ಶಾ ಅವರ ತಲೆಯನ್ನು ಕತ್ತರಿಸಿ, ಆ ತಲೆಯನ್ನು ಮೇಜಿನ ಮೇಲೆ ಇಡಬೇಕು ಎಂದು ಮೋಹುವ ಮೊಯಿತ್ರಾ ಹೇಳಿಕೆ ನೀಡಿದ್ದು, ಇದು ವಿವಾದಕ್ಕೆ ಕಾರಣವಾಗಿತ್ತು.

2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಹೊರಹೊಮ್ಮಿದಾಗ ಅಬ್ಕಿ ಬಾರ್, 400 ಪಾರ್ ' ಎಂಬ ಘೋಷಣೆ ಕೇಳಿಬಂದಿದ್ದವು. ಇದರರ್ಥ ಈ ಫಲಿತಾಂಶ ಮೋದಿಯವರಿಗೆ ಕಪಾಳಮೋಕ್ಷ ಮಾಡಿದಂತೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿದ್ದವು. ಹಾಗಾದರೆ ಯಾರಾದರೂ ನರೇಂದ್ರ ಮೋದಿಯವರಿಗೆ ಮುಖಕ್ಕೆ ಹೊಡೆದಿದ್ದಾರೆಯೇ? ತಲೆಗಳು ಉರುಳುತ್ತವೆ ಎಂದಿದ್ದರು, ತಲೆಗಳು ಉರುಳಿದ್ದಾವೆಯೇ? ಆದರೆ ಅವರು ಉರುಳಿದರು ಎಂದು ಮೊಯಿತ್ರಾ ಟೀಕೆ ಮಾಡಿದ್ದಾರೆ ಎಂದು ಇಂಡಿಯಾ ಟುಡೇ ವರದಿಮಾಡಿದೆ.

ಇಂಗ್ಲಿಷ್​ ಭಾಷೆಗಳಲ್ಲಿ ಇವುಗಳನ್ನು ನುಡಿಗಟ್ಟು ಎಂದು ಕರೆಯುತ್ತಾರೆ. ತಲೆ ಉರುಳುವುದು ಎಂದರೆ ಹೊಣೆಗಾರಿಕೆ ಎಂದರ್ಥ. ಅದೇ ರೀತಿ ಬಂಗಾಳಿಯಲ್ಲಿ ಲೊಜ್ಜಯ್ ಮತಾ ಕಟಾ ಜಾವಾ' ಎಂದರೆ ನಿಮ್ಮ ತಲೆಯನ್ನು ಕತ್ತರಿವಷ್ಟು ನಾಚಿಕೆ ಪಡುತ್ತೀರಿ ಎಂದರ್ಥ. ಮತಾ ಕಟಾ ಜಾವಾ' ಎಂದರೆ, ಜವಬ್ದಾರಿಯನ್ನು ತೆಗೆದುಕೊಳ್ಳುವುದು. ಇದು ಒಂದು ಭಾಷಾವೈವಿಧ್ಯತೆ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ವಿಡಿಯೋ ಮೂಲಕ ತಿಳಿಸಿದ್ದಾರೆ.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೊಯಿತ್ರಾ

ಮೊಯಿತ್ರಾ ನೀಡಿದ ಹೇಳಿಕೆಗಳು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಅವಮಾನಿಸಿ, ದ್ವೇಷವನ್ನು ಸಾರಿವೆ ಹಾಗೂ ರಾಷ್ಟ್ರೀಯ ಏಕತೆಗೆ ದಕ್ಕೆ ಉಂಟು ಮಾಡಿವೆ ಎಂದು ಆರೋಪಿಸಿ ಸ್ಥಳಿಯ ನಿವಾಸಿ ಗೋಪಾಲ್​ ಸಮಂತೋ ಅವರ ವಿರುದ್ಧ ದೂರು ಸಲ್ಲಿಸಿದ್ದು, ರಾಮ್​ಪುರದಲ್ಲಿ ಲೋಕಸಭಾ ಸದಸ್ಯರ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿದೆ.

ತಮ್ಮ ವಿರುದ್ಧ ಎಫ್​​ಐಆರ್​ ದಾಖಲಿಸಿದಕ್ಕಾಗಿ ಛತ್ತೀಸ್​ಗಢ ಪೊಲೀಸರನ್ನು ಮೊಹಿತ್ರಾ ತರಾಟೆಗೆ ತೆಗೆದುಕೊಂಡಿದ್ದು, ಜಿಲ್ಲೆಯಲ್ಲಿ ವಲಸೆ ಬಂದ ಬಂಗಾಳಿ ಕಾರ್ಮಿಕರ ವಿರುದ್ಧ ಕೊಂಡಗಾಂವ್​ ತೆಗೆದುಕೊಂಡ ಕ್ರಮವನ್ನು ಪ್ರಶ್ನೆ ಮಾಡಿದರು. ಇನ್ನು ಅವರ ವಿರುದ್ಧ ಸುಳ್ಳು ಎಫ್​ಐಆರ್​ ದಾಖಲಸಿ, ಅವರನ್ನು ಥಳಿಸಿದ್ದಾರೆ. ಆದರೆ, ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ. ಜುಲೈ 14 ರಂದು ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮೊಯಿತ್ರಾ, ಭಾರತದ ಗಡಿಗಳನ್ನು ರಕ್ಷಿಸಲು ಯಾರೂ ಇಲ್ಲದಿದ್ದರೆ, ಪ್ರತಿದಿನ ಬೇರೆ ದೇಶದ ಲಕ್ಷಾಂತರ ಜನರು ಪ್ರವೇಶಿಸಿ, ನಮ್ಮ ತಾಯಂದಿರು, ನಮ್ಮ ಅಕ್ಕ-ತಂಗಿಯರನ್ನು ನೋಡುತ್ತಿದ್ದರೆ, ನಮ್ಮ ಭೂಮಿಯನ್ನು ಕಸಿದುಕೊಳ್ಳುತ್ತಿದ್ದರೆ, ಮೊದಲು ಶಾ ಅವರ ತಲೆಯನ್ನು ಕತ್ತರಿಸಿ ಮೇಜಿನ ಮೇಲೆ ಇಡಬೇಕು ಎಂದು ಮೊಯಿತ್ರಾ ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು. (ಏಜೆನ್ಸೀಸ್​)