ನ್ಯೂಸ್

ಕೋವಿಡ್ ಬಳಿಕ ರಾಜ್ಯದಲ್ಲಿ ಮತ್ತೊಂದು ವೈರಸ್​ ಭೀತಿ: H3N2 ವೈರಸ್​ ಲಕ್ಷಣಗಳೇನು? ಸುರಕ್ಷತೆ ಹೇಗಿರಬೇಕು?

ಬೆಂಗಳೂರು: ಕೋವಿಡ್ ಬಳಿಕ ರಾಜ್ಯದಲ್ಲಿ ಮತ್ತೊಂದು ವೈರಸ್​ ಭೀತಿ ಶುರುವಾಗಿದೆ. ಕರೊನಾ ಕರಿಛಾಯೆ ಮಾಸುತ್ತಿದ್ದಂತೆ H3N2 ವೈರಸ್ ಅಟ್ಟಹಾಸ ಶುರುವಾಗಿದ್ದು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಈ ವೈರಸ್ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಸದ್ಯ ಜನರಲ್ಲಿ ಇನ್ಫ್ಲುಯೆನ್ಜಾ ಎ ವೈರಸ್ ಉಪತಳಿ H3N2 ಭೀತಿ ಹುಟ್ಟಿಸಿದೆ. ಈ ವೈರಸ್​ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸಲಹೆ ನೀಡಿದೆ. ನಿರಂತರ ಕೆಮ್ಮು, ಬಿಡದ ಜ್ವರಕ್ಕೆ‌ H3N2 ಕಾರಣ ಎಂದು ಎಚ್ಚರಿಸಿದೆ.

ಕಳೆದ ಮೂರು ತಿಂಗಳಿನಿಂದ ಭಾರತದಲ್ಲಿ ಕೆಮ್ಮು ಮತ್ತು ಜ್ವರ ಪ್ರಕರಣಗಳು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಇಂದು H3N2 ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಆರೋಗ್ಯ ಇಲಾಖೆ ಜತೆ ಮಹತ್ವದ ಸಭೆ ನಡೆಸಲಿದ್ದು, ಸಭೆಯಲ್ಲಿ ತಜ್ಞರು ಕೂಡ ಭಾಗಿಯಾಗಲಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಭೆಯಲ್ಲಿ ವೈರಸ್ ಕುರಿತಾದ ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚೆಯಾಗಲಿದೆ. ಹಾಗಿದ್ರೆ ಮತ್ತೆ ಜನರಲ್ಲಿ ಮಾಸ್ಕ್ ಕಡ್ಡಾಯಗೊಳಿಸ್ತಾರಾ? ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು? ಯಾವ ಕ್ರಮ ತೆಗೆದು ಕೊಳ್ಳಬೇಕೆಂದು ಇಂದಿನ ಸಭೆಯಲ್ಲಿ ತೀರ್ಮಾನ ಆಗುತ್ತದೆ ಅಂತ ಕಾದು ನೋಡಬೇಕಿದೆ.

H3N2 ವೈರಸ್​ ಲಕ್ಷಣಗಳೇನು?

* ಕೆಮ್ಮು

* ವಾಕರಿಕೆ

* ವಾಂತಿ

* ಗಂಟಲು ನೋವು

* ಸ್ನಾಯು ಸೆಳೆತ

* ಅತಿಸಾರ

ಸುರಕ್ಷತೆ ಹೇಗೆ ಇರಬೇಕು?

* ಸೋಪು, ನೀರು ಬಳಸಿ ಆಗಾಗ ಕೈಗಳನ್ನ ತೊಳೆಯಬೇಕು

* ಮಾಸ್ಕ್ ಧರಿಸಿ, ಜನ ಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಓಡಾಟ ಬೇಡ

* ಪದೇ ಪದೇ ಮೂಗು, ಬಾಯಿ ಮುಟ್ಟಬೇಡಿ.

* ನೀರು ಜಾಸ್ತಿ ಕುಡಿಯಿರಿ. ಅದರಲ್ಲೂ ಬಿಸಿನೀರು ಹೆಚ್ಚಾಗಿ ಬಳಸಿ

* ಜ್ವರ, ಮೈ-ಕೈ ನೋವು ಇದ್ದರೆ ಪ್ಯಾರಸಿಟಮಾಲ್ ಸೇವಿಸಿ