| ಸುಧೇಂದ್ರ ಲಕ್ಷ್ಮಣ ರಾವ್, ಸಂಸ್ಥಾಪಕ ಮತ್ತು ಸಿಇಒ, ಇಂಪ್ರಿಸಂ(INPRISM) ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 
ನ್ಯೂಸ್

ICICI FOF: ಹೂಡಿಕೆಗೆ ಐಸಿಐಸಿಐ ಅಸೆಟ್ ಅಲೋಕೇಟರ್ ಫಂಡ್​ ಅತ್ಯುತ್ತಮ

| ಸುಧೇಂದ್ರ ಲಕ್ಷ್ಮಣ ರಾವ್, ಸಂಸ್ಥಾಪಕ ಮತ್ತು ಸಿಇಒ, ಇಂಪ್ರಿಸಂ(INPRISM) ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

ಬೆಂಗಳೂರು: ಸಾಮಾನ್ಯವಾಗಿ ಜನರು ಚಿನ್ನ, ಷೇರು ಮಾರುಕಟ್ಟೆ ಮತ್ತು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಇವೆಲ್ಲ ಕ್ಷೇತ್ರಗಳೂ ಹಲವು ಬಾರಿ ಅಪಾಯ ತಂದೊಡ್ಡುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಹೂಡಿಕೆದಾರರು ಸ್ಥಿರ, ಭದ್ರತೆಯಿಂದ ಕೂಡಿದ ಹೂಡಿಕೆಗಳಲ್ಲಿ ಹಣ ವಿನಿಯೋಗಿಸುವುದು  ದೀರ್ಘಾವಧಿ ಆದಾಯ ತಂದುಕೊಡಲು ಸಹಾಯ ಮಾಡುತ್ತವೆ. ಇಂತಹವುಗಳಲ್ಲಿ ಮಾರುಕಟ್ಟೆ ಏರಿಳಿತ ಮತ್ತು ಅಪಾಯಗಳಿಂದ ಹೊರತಾದ ಐಸಿಐಸಿಐ ಅಸೆಟ್ ಅಲೋಕೇಟರ್ ಫಂಡ್(ICICI FOF) ಹಣ ಹೂಡಿಕೆಗೆ ಅತ್ಯುತ್ತಮ ಮಾರ್ಗವಾಗಿದೆ.

ಅಪಾಯವಿಲ್ಲದ ಕಡೆ ಹೂಡಿಕೆ ಮಾಡುವುದರಿಂದ ಒತ್ತಡಮುಕ್ತರಾಗಿ ನಿಶ್ಚಿಂತೆಯಿಂದ ಇರಬಹುದು. ಆದರೆ ಮಾರುಕಟ್ಟೆಯ ಅನಿಶ್ಚಿತತೆಯಿಂದಾಗಿ ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳುವುದು ಹೆಚ್ಚಿನ ಹೂಡಿಕೆದಾರರಿಗೆ ಸಾಧ್ಯವಾಗದಿರಬಹುದು. ಅಂತಹವರಿಗೆ ಐಸಿಐಸಿಐ ಪ್ರುಡೆನ್ಶಿಯಲ್​ ಅಸೆಟ್ ಅಲೋಕೇಟರ್ ಮ್ಯೂಚುಯಲ್ ಫಂಡ್ ಸ್ಕೀಮ್‌ಗಳು ಅತ್ಯುತ್ತಮವಾಗಿದ್ದು ನೆರವಿಗೆ ಬರುತ್ತವೆ.

ಐಸಿಐಸಿಐ ಪ್ರುಡೆನ್ಶಿಯಲ್ ಅಸೆಟ್ ಅಲೋಕೇಟರ್ ಫಂಡ್ (ಪಿಒಎಫ್​)ನಲ್ಲಿ ಹೂಡಿಕೆ ಮಾಡಿದ್ದವರು 2024ರ ಜುಲೈ 31 ಕ್ಕೆ ಅನುಗುಣವಾಗಿ,  10ಸಾವಿರ ರೂ.ಗೆ ಒಂದು ವರ್ಷದಲ್ಲಿ 12,084ರೂ., ಮೂರು ವರ್ಷಗಳಲ್ಲಿ 14,819 ರೂ. ಮತ್ತು ಐದು ವರ್ಷಗಳಲ್ಲಿ 19,971 ರೂ. ಏರಿಕೆ ಕಂಡಿದ್ದಾರೆ.

2003ರ ಡಿಸೆಂಬರ್ 18ರಂದು ಪಿಒಎಫ್ ಪ್ರಾರಂಭವಾಗಿದ್ದು, ಅಂದಿನಿಂದ 1 ಲಕ್ಷದ ಹೂಡಿಕೆಯು 11.13 ಲಕ್ಷಕ್ಕೆ ಬೆಳೆದು ಶೇ.12.39 ಲಾಭವನ್ನು ತಂದುಕೊಟ್ಟಿದೆ. 2024 ರ ಕೇಂದ್ರ ಬಜೆಟ್‌ನಲ್ಲಿ ಒದಗಿಸಲಾದ ಹೊಸ ತೆರಿಗೆ ನಿಯಮಗಳ ಅಡಿಯಲ್ಲಿ, ದೀರ್ಘಾವಧಿಯ ಬಂಡವಾಳ ಲಾಭಗಳಿಗೆ ಈಗ ಶೇ.12.5 ತೆರಿಗೆ ವಿಧಿಸಲಾಗುತ್ತದೆ. ಆದರೆ ಹೂಡಿಕೆದಾರರು ಕನಿಷ್ಟ 24 ತಿಂಗಳುಗಳವರೆಗೆ ಪಿಒಎಫ್​ ಮಾಡುವ ಮೂಲಕ ಈ ತೆರಿಗೆಯಿಂದ ಪ್ರಯೋಜನ ಪಡೆಯಬಹುದು.