IAS: ಭಾರತೀಯ ಆಡಳಿತ ಸೇವೆಯಲ್ಲಿ (IAAS) ವರ್ಗಾವಣೆಗಳು ಸಾಮಾನ್ಯ ಘಟನೆ.ಈ ವೇಳೆ ವಿದಾಯ ಸಮಾರಂಭಗಳು ಸ್ಮರಣೀಯವಾಗಿರುತ್ತದೆ. ಆದರೆ, ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ನಾಗರಿಕರು ಐಎಎಸ್ ಅಧಿಕಾರಿ ಸಂಸ್ಕೃತಿ ಜೈನ್ ಅವರಿಗೆ ನೀಡಿದ ಭಾವನಾತ್ಮಕ ಬೀಳ್ಕೊಡುಗೆಯು ಬಹಳ ವಿಶೇಷವಾಗಿ ಕಂಡುಬಂದಿದೆ.
2015 ರ ಬ್ಯಾಚ್ನ ಐಎಎಸ್ ಅಧಿಕಾರಿ ಸಂಸ್ಕೃತ ಜೈನ್ ಅವರು ಸುಮಾರು 1 ವರ್ಷ ಸಿಯೋನಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದರು. ಮಧ್ಯಪ್ರದೇಶದ ಸರ್ಕಾರ ಇತ್ತೀಚೆಗೆ ನಡೆಸಿದ ಆಡಳಿತ ಪುನಃರಚನೆಯಲ್ಲಿ ಸಂಸ್ಕೃತಿ ಜೈನ್ ಸೇರಿದಂತೆ 12 ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಯಿತು. ಇವರನ್ನು ಈಗ ಭೋಪಾಲ್ ಮುನ್ಸಿಪಲ್ ಕಮಿಷನರ್ ಆಗಿ ನೇಮಿಸಲಾಗಿದೆ.
ಈ ಹಿಂದೆ ಇವರು ಸಿಯೋನಿಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ ಉತ್ತಮವಾಗಿ ಕೆಲಸ ನಿರ್ವಹಿಸಿದ್ದರು ಹಾಗೂ ಆಡಳಿತಾತ್ಮಕ ದಕ್ಷತೆ ಮತ್ತು ಸಾರ್ವಜನಿಕ ಸಂಪರ್ಕಕ್ಕೆ ಹೆಸರುವಾಸಿಯಾಗಿದ್ದರು. ಈ ಎಲ್ಲಾ ಕಾರಣದಿಂದ ಅವರ ಸಹದ್ಯೋಗಿಗಳು ಅವರಿಗೆ ಅವರಿಗೆ ಹೆಚ್ಚಿನ ಗೌರವವನ್ನು ನೀಡಿ ವಿದಾಯವನ್ನು ನೀಡಿದರು.
ಬೀಳ್ಕೊಡುಗೆ ಸಮಾರಂಭದ ನಂತರ ಅವರ ಸಹೋದ್ಯೋಗಿಗಳು ಸುಂದರವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಸಂಸ್ಕೃತಿಯನ್ನು ಕರೆದೊಯ್ದರು. ಈ ವೇಳೆ ಅವರ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಇದ್ದರು. ಈ ವೇಳೆ ಭಾವನಾತ್ಮಕ ಹಾಡನ್ನು ಹೇಳಿ ಮೆರವಣಿಗೆ ಮಾಡಿದರು.
ಐಎಎಸ್ ಅಧಿಕಾರಿ ಸಂಸ್ಕೃತ ಜೈನ್ ಒಬ್ಬ ದಕ್ಷ ಅಧಿಕಾರಿ ಎಂದು ಹೆಸರುವಾಸಿಯಾಗಿದ್ದಾರೆ. ಇವರು ಫೆಬ್ರವರಿ 14, 1989 ರಂದು ಶ್ರೀನಗರದಲ್ಲಿ ಜನಿಸಿದ ಅವರ ಬಾಲ್ಯವು ಭಾರತದ ವಿವಿಧ ಭಾಗಗಳಲ್ಲಿ ಕಳೆದಿದ್ದಾರೆ. ಏಕೆಂದರೆ ಆಕೆಯ ಪಾಲಕರು ಇಬ್ಬರೂ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ತಂದೆ ಯುದ್ಧ ಪೈಲಟ್ ಮತ್ತು ತಾಯಿ ವೈದ್ಯಕೀಯ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಅವರು ಗೋವಾದಲ್ಲಿ ಪದವಿ ಪೂರ್ಣಗೊಳಿಸಿ, ನಂತರ ಪ್ರತಿಷ್ಠಿತ LAMP ಫೆಲೋಶಿಪ್ ಪಡೆದರು. ಕುತೂಹಲಕಾರಿಯಾಗಿ, ಸರ್ಕಾರಿ ಅಧಿಕಾರಿಯಾಗುವುದು ಅವರ ಆರಂಭಿಕ ಗುರಿಯಾಗಿರಲಿಲ್ಲ; ಅವರು ಪಿಎಚ್‌ಡಿ ಮಾಡಲು ಯೋಜಿಸಿದ್ದರು. ಆದಾಗ್ಯೂ, ಸ್ನೇಹಿತರ ಸಲಹೆಯ ಮೇರೆಗೆ, ಅವರು ಯುಪಿಎಸ್‌ಸಿ ಪರೀಕ್ಷೆಯನ್ನು ತೆಗೆದುಕೊಂಡು ತಮ್ಮ ಮೊದಲ ಪ್ರಯತ್ನದಲ್ಲೇ ಅದನ್ನು ಪಾಸ್ ಮಾಡಿದ್ದಾರೆ. (ಏಜೆನ್ಸೀಸ್)