ನಟಿ ಕತ್ರಿನಾ ಕೈಫ್​ ಹೆಣ್ಣು ಮಗುವಿಗೆ ಜನ್ಮ ನೀಡಲಿದ್ದಾರೆ! ಭವಿಷ್ಯ ನುಡಿದ ಜ್ಯೋತಿಷಿ...Predicts Astrologer

Katrina Kaif
Published on

Predicts Astrologer: ನಟಿ ಕತ್ರಿನಾ ಕೈಫ್​ ಹಾಗೂ ವಿಕಿ ಕೌಶಲ್​ ದಂಪತಿ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ತಿಂಗಳು ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಶುಭ ಸುದ್ಧಿಯನ್ನು ಹಂಚಿಕೊಂಡಿದ್ದು, ನಮ್ಮ ಜೀವನದ ಅತ್ಯುತ್ತಮ ಅಧ್ಯಾಯವನ್ನು ಸಂತೋಷ ಮತ್ತು ಕೃತಜ್ಞತೆ ತುಂಬಿದ ಹೃದಯಗಳೊಂದಿಗೆ ಪ್ರಾರಂಭಿಸುವ ಹಾದಿಯಲ್ಲಿದ್ದೇವೆ ಎಂದು ಬರೆದು ಪೋಸ್ಟ್​ ಮಾಡಿದ್ದರು.

ಇದರ ಬೆನ್ನಲ್ಲೇ, ಅನಿರುದ್ಧ್​ ಮಿಶ್ರಾ ಎಂಬ ಜ್ಯೋತಿಷಿ ವಿಕಿ ಹಾಗೂ ಕತ್ರಿನಾ ಕೈಫ್​ಗೆ ಹೆಣ್ಣು ಮಗು ಜನಿಸುತ್ತದೆ ಎಂದು ಭವಿಷ್ಯ ನುಡಿದು ಟ್ವೀಟ್​ ಮಾಡಿದ್ದು, ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದಿಗೆ ಗ್ರಾಸವಾಗಿದೆ.

ಅನಿರುದ್ಧ್ ಮಿಶ್ರಾ ತಮ್ಮ ಎಕ್ಸ್​ ಖಾತೆಯಲ್ಲಿ ಈ ಹಿಂದೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಹೆಣ್ಣು ಮಗುವಾಗುವುದು ಹಾಗೆಯೇ ಕರೀನಾ ದಂಪತಿಗೆ ಗಂಡು ಮಗು ಆಗುವುದು ಎಂದು ಭವಿಷ್ಯವಾಣಿ ನುಡಿದಿರುವ ಸ್ಕ್ರೀನ್​ ಶಾಟ್​ಗಳನ್ನು ಹಂಚಿಕೊಂಡಿದ್ದಾರೆ.

ಮಿಶ್ರಾ ಅವರ ಭವಿಷ್ಯವಾಣಿಗೆ ನೆಟ್ಟಿಗರ ಪ್ರತಿಕ್ರಿಯೆ

ಭವಿಷ್ಯವಾಣಿ ಗಮನಿಸಿದ ನೆಟ್ಟಿಗರಲ್ಲಿ ಒಬ್ಬ ಎಕ್ಸ್ ಬಳಕೆದಾರ ಈ ಭವಿಷ್ಯವಾಣಿ ಸರಿಯಾಗಿರಲು ಶೇ.50 ರಷ್ಟು ಅವಕಾಶ ಇರಬಹುದು ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಮತ್ತೊಬ್ಬ ಬಳಕೆದಾರ ಮೊದಲ ಮಗು ಅಂದರೆ ಮತ್ತೊಂದು ಮಗುವಾಗುವ ಸಾಧ್ಯತೆ ಇದಿಯಾ ಎಂದು ಟ್ವೀಟ್​ ಮಾಡಿದ್ದಾರೆ.

ಸನ್ನಿ ಕೌಶಲ್ ಪ್ರತಿಕ್ರಿಯೆ

ಸಂದರ್ಶನವೊಂದರಲ್ಲಿ ಸನ್ನಿ ಕೌಶಲ್ ಮಾತನಾಡಿದ್ದು, ಮಗುವಿನ ಆಗಮನಕ್ಕಾಗಿ ತುಂಬಾ ಉತ್ಸಾಹಕನಾಗಿದ್ದೇನೆ. ನಾವೆಲ್ಲರೂ ಈ ರೀತಿಯ ಸಂತೋಷವನ್ನು ಪಡೆಯುತ್ತಿರುವುದು ಇದೇ ಮೊದಲು. ಮಗು ಬರುವ ದಿನಕ್ಕಾಗಿ ನಾವೆಲ್ಲರೂ ಕಾತುರದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net