ಐಎಎಸ್​ ಅಧಿಕಾರಿ 
ನ್ಯೂಸ್

ಊಟ ಮಾಡುತ್ತಿರುವಾಗಲೇ ಕುಸಿದುಬಿದ್ದು ನಿಧನರಾದ ಐಎಎಸ್​ ಅಧಿಕಾರಿ!

ಮಹಾರಾಷ್ಟ್ರ: ಮಹಾರಾಷ್ಟ್ರ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ 57 ವರ್ಷದ ಐಎಎಸ್ ಅಧಿಕಾರಿ ದಕ್ಷಿಣ ಮುಂಬೈನ ಹೋಟೆಲ್‌ನಲ್ಲಿ ಊಟ ಮಾಡುವಾಗ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಧಿಕಾರಿಯೊಬ್ಬರ ಪ್ರಕಾರ, ಬುಧವಾರ ರಾತ್ರಿ ಪಿಡಬ್ಲ್ಯೂಡಿ ಕಾರ್ಯದರ್ಶಿ ಪ್ರಶಾಂತ್ ದತ್ತಾತ್ರೇಯ ನವಘರೆ ಕಾಲಾ ಘೋಡಾ ನೆರೆಹೊರೆಯ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ರಾತ್ರಿ ಊಟ ಮಾಡುವಾಗ ಅಧಿಕಾರಿ ನವಘರೆ ಅವರಿಗೆ ಅಲರ್ಜಿಯ ಲಕ್ಷಣಗಳು ಕಂಡುಬಂದಿವೆ.

ಊಟ ಮಾಡುವಾಗ, ತಿಂದ ಆಹಾರದಿಂದಾಗಿ ಅಲರ್ಜಿಯ ಲಕ್ಷಣಗಳನ್ನು ಅನುಭವಿಸಿದ ನವಘರೆ ತಕ್ಷಣವೇ ಪ್ರಜ್ಞೆ ತಪ್ಪಿದ್ದಾರೆ. ಇದಾದ ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಅಲ್ಲಿ ಅವರು ಮೃತಪಟ್ಟಿರುವ ಬಗ್ಗೆ ಘೋಷಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

"ಮಾತಾ ರಮಾಬಾಯಿ ಅಂಬೇಡ್ಕರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಅಪಘಾತ ಸಾವಿನ ವರದಿ (ಎಡಿಆರ್) ದಾಖಲಿಸಲಾಗಿದ್ದು ವ್ಯಕ್ತಿಯ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ" ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದರು. (ಏಜೆನ್ಸೀಸ್​)