ನ್ಯೂಸ್

ನಾನೇ ಮುಂದಿನ ಸಿಎಂ ಅಂದ್ರು ಬಸನಗೌಡ ಪಾಟೀಲ್​ ಯತ್ನಾಳ್​!

ವಿಜಯಪುರ: ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​ ಮುಂದಿನ ಸಿಎಂ ನಾನೇ ಎಂದು ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಯಾಕೆ ನಾನು ಸಿಎಂ ಆಗಬಾರದಾ ಎಂದು ಪ್ರಶ್ನಿಸಿದ ಅವರು, ಸಿಎಂ ಆಗಲು ನನಗೂ ಅರ್ಹತೆಗಳಿವೆ. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದಿದ್ದಾರೆ.

ನನ್ನ ಮೇಲೆ ಗಣಿ,ಅಕ್ರಮ ಆಸ್ತಿ,ಜಾತಿ, ಭ್ರಷ್ಟಾಚಾರ ಆರೋಪ ಏನೂ ಇಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ಮನಸ್ಸು ಮಾಡಿದ್ರೇ ನಾನೇ ಸಿಎಂ ಆಗಬಹುದು ಎಂದರು.

ಬಿಜೆಪಿಯಲ್ಲಿ 130 ಸೀಟ್​ ಗೆಲ್ಲಿಸುವ ತಾಕತ್ತು ನನಗಿದೆ. ಹೈಕಮಾಂಡ್​ ನೇತೃತ್ವ ನೀಡಿದ್ರೆ ನಾನು ಚುನಾವಣೆ ಹೊರೆ ಹೊರುತ್ತೇನೆ ಎಂದು ಹೇಳಿದ್ದಾರೆ.