Tej Prathap Yadav: ಮುಂದಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹುವಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು RJD ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಘೋಷಣೆ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ತೇಜ್ ಪ್ರತಾಪ್ ಯಾದವ್ "ಮುಂದಿನ ವಿಧಾನಸಭೆ ಚುನಾವಣೆಗೆ ಮಹುವಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತೇನೆ. ಈ ಸುದ್ದಿ ಕೇಳಿ ನನ್ನ ವಿರುದ್ಧ ಸ್ಪರ್ಧಿಸುವ ವಿರೋಧಿಗಳಿಗೆ ಚಳಿ ಜ್ವರ ಬಂದಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಅನೇಕ ಹಿತೈಷಿಗಳು, ಬೆಂಬಲಿಗರು ಫಾಲೋ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಮುಂದಿನ ಚುನಾವಣೆಯಲ್ಲಿ ನಿತೀಶ್ ಅಂಕಲ್ ಸಿಎಂ ಸ್ಥಾನವನ್ನು ಉಳಿಸಿಕೊಳ್ಳಲಾರರು. ಆ ವಿಶ್ವಾಸ ನನಗಿದೆ. ಯಾರೇ ಸರ್ಕಾರ ರಚನೆ ಮಾಡಿದ್ರೂ, ಯುವಕರು, ಉದ್ಯೋಗ, ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆ ಮಾತನಾಡುವವರ ಜೊತೆ ನಿಲ್ಲುತ್ತೇನೆ" ಎಂದು ತಿಳಿಸಿದ್ದಾರೆ.
ಮೇ 25ರಂದು ಅನುಷ್ಕಾ ಎಂಬ ಮಹಿಳೆಯೊಂದಿಗಿನ ತಮ್ಮ 12 ವರ್ಷಗಳ ಸಂಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಕ್ಕಾಗಿ ಆರ್ಜೆಡಿ ಪಕ್ಷದಿಂದ 6 ವರ್ಷಗಳ ತೇಜ್ ಪ್ರತಾಪ್ ಯಾದವ್ರನ್ನ ತಂದೆ ಲಾಲೂ ಪ್ರಸಾದ್ ಯಾದವ್ ಉಚ್ಛಾಟಿಸಿದ್ದರು. ಸದ್ಯ ಹಸನ್ಪುರೆ ಕ್ಷೇತ್ರದ ಶಾಸಕರಾಗಿದ್ದಾರೆ. (ಏಜೆನ್ಸೀಸ್)