ಬ್ಯಾಂಕ್ಗಳಲ್ಲಿ ಹಣವನ್ನು ಖಾತೆಗೆ ಜಮಾ ಮಾಡಲು ಮತ್ತು ಹಿಂಪಡೆಯವ ಮುನ್ನ ಠೇವಣಿ ಚೀಟಿಯಲ್ಲಿ ನಗದು ದಾಖಲಿಸುಲು ಹಲವರು ಪರದಾಡುತ್ತಿರುವುದನ್ನು ನಾವು ಕಂಡಿದ್ದೇವೆ. ಸಾಮಾನ್ಯರು ಅಲ್ಪಸಲ್ಪ ಅರ್ಥವಾದಷ್ಟು ಬರೆದುಕೊಂಡು ಬ್ಯಾಂಕ್ಗೆ ನೀಡುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ಠೇವಣಿ ರಸೀದಿಯಲ್ಲಿ ಅಸಂಬದ್ಧ ಪದಗಳನ್ನು ತುಂಬಿದ ಹಿನ್ನೆಲೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ:ಸೈಫ್ಗೆ ಚಾಕು ಇರಿದ ವ್ಯಕ್ತಿ ಬಾಂಗ್ಲಾದೇಶಿ! ಇದಕ್ಕೆ ಈ ಎರಡು ದಾಖಲೆಯೇ ಬಲವಾದ ಸಾಕ್ಷಿ | Saif Attacker
ಈ ವೈರಲ್ ಆಗಿರುವ ಠೇವಣಿ ರಸೀದಿ SBI ಬ್ಯಾಂಕ್ಗೆ ಸಂಬಂಧಪಟ್ಟಿದೆ. ರಸೀದಿಯಲ್ಲಿ ಸಾಮಾನ್ಯವಾಗಿ ದಿನಾಂಕ, ಖಾತೆ ಸಂಖ್ಯೆ, ಖಾತೆದಾರರ ಹೆಸರು ಮತ್ತು ಮೊತ್ತವನ್ನು ಹೆಸರಿಸುವಂತೆ ತಿಳಿಸಲಾಗಿರುತ್ತದೆ. ಆದರೆ ಈ ಮಹಿಳೆ ಅಸಂಬದ್ಧ ಪದಗಳನ್ನು ತುಂಬಿದ ಹಿನ್ನೆಲೆ ನೆಟ್ಟಿಜನ್ಸ್(ಸಾಮಾಜಿಕ ಜಾಲತಾಣ ಬಳಕೆದಾರರು) ತರೆಹವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
ರಸೀದಿಯೂ ಎಸ್ಬಿಐ ಬ್ಯಾಂಕ್ಗೆ ಸಂಬಂಧಸಿದೆ ಎನ್ನಲಾಗಿದ್ದು, ದಿನಾಂಕ ಸ್ಥಳದಲ್ಲಿ 29.01.2025 ಎಂದು ನಮೂದಿಸಲಾಗಿದೆ. ಮೇಲ್ನೋಟಕ್ಕೆ ನೋಡುವುದಾರೆ 29 ದಿನಾಂಕ ಇನ್ನು ಬಂದಿಲ್ಲ. ಆದರೆ, ರಸೀದಿಯಲ್ಲಿ ದಾಖಲಿಸಲಾಗಿದೆ. ಆದ್ದರಿಂದ ಈ ರಸೀದಿ ನಕಲಿ ಎಂದು ಹೇಳಲಾಗುತ್ತಿದೆ.
ಮುಂದುವರೆದು, ರಸೀದಿಯಲ್ಲಿ ಹೆಸರು ರಾಧಿಕ ಶರ್ಮಾ ಮತ್ತು ಖಾತೆ ಸಂಖ್ಯೆ ಬರೆಯಲಾಗಿದೆ. ಆದರೆ, ಮೊತ್ತ ಸ್ಥಳದಲ್ಲಿ ''ನಾನು ಪತಿಯೊಂದಿಗೆ ಕುಂಭಮೇಳಕ್ಕೆ ಹೋಗಬೇಕು'' ಎಂದು ಬರೆದಿದ್ದಾರೆ.
@SmartPhone19 ಎಂಬ ಇನ್ಟಾಗ್ರಾಮ್ ಖಾತೆಯಲ್ಲಿ ಈ ರಸೀದಿಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಬಾರಿ ವೈರಲ್ ಆಗಿದ್ದು, 1.5 ಮೀಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ತರೇಹವಾರಿ ಕಾಮೆಂಟ್ಗಳನ್ನು ಬಳಕೆದಾರು ಮಾಡಿದ್ದಾರೆ. ಇದನ್ನು ಓದಿದ ಬ್ಯಾಂಕ್ ಮ್ಯಾನೇಜರ್ ಕೋಮದಲ್ಲಿರುತ್ತಾರೆ ಎಂದು ನೆಟ್ಟಿಗರು ಗೇಲಿ ಮಾಡಿದ್ದಾರೆ.(ಏಜೆನ್ಸೀಸ್)