ನ್ಯೂಸ್

ಸುಶಾಂತ್​ ಸಿಂಗ್​ ರಜಪೂತ್​ ಮಾದಕ ದ್ರವ್ಯ ವ್ಯಸನಿಯೇ? ತನಿಖೆಯಲ್ಲಿ ಹೊರಬಿತ್ತು ಭಯಾನಕ ಸತ್ಯ...!

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಮನೆಯಲ್ಲಿ ವಾರಕ್ಕೆ ಒಂದೆರಡು ಬಾರಿಯಾದರೂ ಪಾರ್ಟಿ ನಡೆಯುತ್ತಿತ್ತು. ಆಗೆಲ್ಲ ಸುಶಾಂತ್ ಮದ್ಯ ಅಥವಾ ಮಾದಕ ದ್ರವ್ಯ ಸೇವಿಸುತ್ತಿದ್ದ...!

ಸಾವಿಗೆ ಒಂದೆರಡು ದಿನಗಳ ಮುಂಚೆ ಆತನಿಗಾಗಿ ಗಾಂಜಾವನ್ನು ಸಿಗರೇಟ್​ನಂತೆ ಸುರುಳಿ ಸುತ್ತಿ ಬಾಕ್ಸ್​ನಲ್ಲಿಡಲಾಗಿತ್ತು. ಸಾವಿನ ನಂತರ ನೋಡಿದಾಗ ಅವು ಅಲ್ಲಿರಲಿಲ್ಲ ಎಂದು ಸುಶಾಂತ್​ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ನೀರಜ್​ ಸಿಂಗ್​ ಹೇಳಿಕೆ ನೀಡಿದ್ದಾನೆ.

ಸುಶಾಂತ್​ ಮ್ಯಾನೇಜರ್​ ಆಗಿದ್ದ ಸ್ಯಾಮ್ಯುವೆಲ್​ ಮಿರಾಂಡಾ, ರಜತ್​ ಮೇವಾಠಿ, ಸಿದ್ಧಾರ್ಥ್​ ಪೀಠಾಣಿ, ಆಯುಷ್​, ಆನಂದಿ, ಸ್ಯಾಮ್ಯುವೆಲ್​ ಹಾಕೀಫ್​, ಅಶೋಕ್​​ ಖಾಸು ಹಾಗೂ ಕೇಶವ್​ ಮೊದಲಾದವರೆಲ್ಲ ಸುಶಾಂತ್​ಗಾಗಿ ಕೆಲಸ ಮಾಡುತ್ತಿದ್ದರು ಎಂದು ನೀರಜ್​ ಹೇಳಿದ್ದಾನೆ.

ಸುಶಾಂತ್​, ರಿಯಾ, ಆನಂದಿ ಮತ್ತು ಆಯುಷ್​ ಮನೆಯಲ್ಲಿಯೇ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಸುಶಾಂತ್​ ಮದ್ಯ ಹಾಗೂ ಗಾಂಜಾ ಸೇವಿಸುತ್ತಿದ್ದರು. ಸ್ಯಾಮ್ಯುವೆಲ್​ ಜಾಕೋಬ್​ ಅವರಿಗಾಗಿ ಗಾಂಜಾವನ್ನು ಸುರುಳಿ ಸುತ್ತಿ ಕೊಡುತ್ತಿದ್ದ. ಕೆಲವೊಮ್ಮೆ ನಾನೂ ಕೂಡ ಈ ಕೆಲಸ ಮಾಡುತ್ತಿದ್ದೆ. ಸಾವಿಗೆ ಮುನ್ನ ಮೂರು ದಿನಗಳವರೆಗೆ ಗಾಂಜಾ ಸುರುಳಿಗಳನ್ನು ಸುತ್ತಿ ಬಾಕ್ಸ್​ನಲ್ಲಿಟ್ಟಿದೆ. ಆದರೆ, ಸಾವಿನ ನಂತರ ನೋಡಿದಾಗ ಆ ಬಾಕ್ಸ್​ ಖಾಲಿಯಾಗಿತ್ತು ಎಂದು ನೀರಜ್​ ಮುಂಬೈ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ.

ಸುಶಾಂತ್​ ಕೆಲ ದಿನಗಳ ಕಾಲ ರಿಯಾ ಮನೆಯಲ್ಲಿದ್ದರು. ಆ ಬಳಿಕ ಕೇಳೀದಾಗ ಸುಶಾಂತ್​ ಸರ್​ ಆಆರೋಗ್ಯ ಸರಿಯಿಲ್ಲ ಎಂದು ತನಗೆ ತಿಳಿಸಲಾಗಿತ್ತು ಎನ್ನುವುದು ನೀರಜ್​ ಹೇಳಿಕೆ.