ನವದೆಹಲಿ: ಪತಿ-ಪತ್ನಿ ನಡುವಿನ ಸಂಬಂಧ ಏಳೇಳು ಜನ್ಮಗಳದ್ದು ಎಂದು ನಮ್ಮ ಪೂರ್ವಿಕರು ಹೇಳಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಹೆಂಡತಿ ಟೀ ಮಾಡಲಿಲ್ಲ, ಗಂಡ ಚಿಪ್ಸ್ ತರಲಿಲ್ಲ, ಕೇಳಿದಾಗ ಹಣ ಹಾಕಲಿಲ್ಲ ಎಂಬ ಕ್ಷುಲಕ ಕಾರಣಕ್ಕೆ ದಂಪತಿಗಳ ನಡುವೆ ಜಗಳವಾಗುತ್ತಿದ್ದು, ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ. ಆದರೆ, ಇದೀಗ ಅದೇ ರೀತಿಯ ಘಟನೆಯೊಂದರಲ್ಲಿ ಪತಿಯ ಆ ಒಂದು ಕೆಟ್ಟ ಅಭ್ಯಾಸಕ್ಕೆ ಬೇಸತ್ತ ಪತ್ನಿ ಆತನಿಗೆ ಡಿವೋರ್ಸ್ ನೀಡಲು ಮುಂದಾಗಿದ್ದು, ಈ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ.
ಈ ಕುರಿತು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಬರೆದುಕೊಂಡಿದ್ದು, ತನ್ನ ಪತಿಗೆ ಡಿವೋರ್ಸ್ ನೀಡುತ್ತಿರುವ ಬಗ್ಗೆ ಕಾರಣವನ್ನು ಉಲ್ಲೇಖಿಸಿದ್ದಾರೆ. ಈ ಸುದದ್ದಿ ವೈರಲ್ ಆಗುತ್ತಿದ್ದಂತೆ ಹಲವರು ಕಿಡಿಕಾರಿದ್ದು, ಮಹಿಳೆಯ ನಡೆಗೆ ಆಕ್ರೋಶ ಹೊರಹಾಕಿದ್ದಾರೆ.
ವೈತ್ತಿಯಲ್ಲಿ ನನ್ನ ಪತಿ ಚೆಫ್ ಆಗಿದ್ದು, ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಅವರು ಕೆಲಸ ಮುಗಿಸಿಕೊಂಡು ಬಂದ ಬಳಿಕ ಸೀದಾ ರೂಮಿಗೆ ತೆರಳಿ ಬೆಡ್ ಮೇಲೆ ಮಲಗುತ್ತಾರೆ. ಅವರು ಡ್ರೆಸ್ ಕೂಡ ಚೇಂಜ್ ಮಾಡುವುದಿಲ್ಲ. ಅವರ ಬಟ್ಟೆಯ ಮೇಲೆ ಆಹಾರದ ಕಲೆ, ಗ್ರೀಸ್ ಸೇರಿದಂತೆ ಅನೇಕ ಕಲೆಗಳು ಇರುತ್ತವೆ. ಇದರಿಂದ ಬೆಡ್ಸ್ಪ್ರೆಡ್ ಕೊಳೆಯಾಗುತ್ತಿತ್ತು. ಪ್ರತಿನಿತ್ಯ ನನಗೆ ಬೆಡ್ಸ್ಪ್ರೆಡ್ ಬದಲಿಸಿ ಬೇಜಾರಾಗಿದೆ.
ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ವಿಚಾರವಾಗಿ ಪಂಜಾಬ್ ಕಿಂಗ್ಸ್ಮಾಲೀಕರೊಂದಿಗೆ ಶಾರುಖ್ ಕಿತ್ತಾಟ; ಬಳಿಕ ಹೇಳಿದ್ದಿಷ್ಟು
ಈ ವಿಚಾರವಾಗಿ ನಾನು ಆತನಿಗೆ ಅನೇಕ ಬಾರಿ ಹೇಳಿದರೂ ನನ್ನ ಮಾತನ್ನು ಕೇಳುತ್ತಿಲ್ಲ. ಈ ಒಂದು ದುರಭ್ಯಾಸದ ಹೊರತಾಗಿ ಆತನ ಬೇರೆ ದೂರುಗಳಿಲ್ಲ. ಬೆಡ್ ಮೇಲೆ ಆತ ಮಾಡುವ ಈ ಒಂದು ಕೆಲಸಕ್ಕೆ ಬೇಸತ್ತು ನಾನು ಡಿವೋರ್ಸ್ ಕೊಡಲು ಮುಂದಾಗಿದ್ದೇನೆ ಎಂದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇತ್ತ ಮಹಿಳೆಯ ಪೋಸ್ಟ್ಅನ್ನು ಖಂಡಿಸಿ ಹಲವರು ಕಮೆಂಟ್ ಮಾಡಿದ್ದು, ಈ ರೀತಿಯ ಕಾರಣ ನೀಡಿ ಡಿವೋರ್ಸ್ ನೀಡುವುದು ಸರಿಯಲ್ಲ. ಮನೆಯಲ್ಲಿ ಬೇರೆ ಕೋಣೆಯಿದ್ದರೆ ಆತನಿಗೆ ಅಲ್ಲಿ ಮಲಗಲು ಹೇಳಿ ಎಂದು ಕೆಲವರು ಸಲಹೆ ನೀಡಿದ್ದಾರೆ.