ನ್ಯೂಸ್

ವೃತ್ತಿ ಜೀವನಕ್ಕಾಗಿ ಬಹಳಷ್ಟನ್ನು ಕಳೆದುಕೊಡಿದ್ದೇನೆ: ಬಾಲಿವುಡ್ ನಟಿ ಅಮೀಷ ಪಟೇಲ್​!| Bollywood

Bollywood: ಬಾಲಿವುಡ್​ ನಟಿ ಅಮೀಷ ಪಟೇಲ್​ 50 ವರ್ಷವಾಗಿದ್ದರೂ, ಇಲ್ಲಿಯವರೆಗೂ ಮದುವೆಯಾಗಿಲ್ಲ ಎಂಬುದು ಅಚ್ಚರಿ ವಿಷಯವಾಗಿದೆ. ಈ ಹಿಂದೆ ಅವರು ಕೆಲವು ಹುಡುಗರೊಂದಿಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವದಂತಿಗಳಿದ್ದವು. ಆದರೆ, ಈ ಎಲ್ಲಾ ವದಂತಿಗಳು ಸುಳ್ಳು ಎಂದು ನಟಿ ಹೆಳಿದ್ದಾರೆ. ಇತ್ತೀಚೆಗೆ, ರಣವೀರ್​ ಅಲ್ಲಾಬಾಡಿಯಾ ಅವರೊಂದಿಗಿನ ಸಂಭಾಷಣೆಯ ಕಾರ್ಯಕ್ರಮವೊಂದರಲ್ಲಿ ತಮ್ಮ ಮದುವೆ ಯೋಜನೆಗಳ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ನಿನ್ನನ್ನು ಪ್ರೀತಿಸುವ ಜನರು ನಿನ್ನ ವೃತ್ತಿ ಜೀವನವನ್ನು ಇಷ್ಟಪಡುತ್ತಾರೆ. ಆದರೆ, ನಾನು ವೃತ್ತಿ ಜೀವನಕ್ಕಾಗಿ ಬಹಳಷ್ಟನ್ನು ಕಳೆದುಕೊಡಿದ್ದೇನೆ. ಅದರ ಜೊತೆಯಲ್ಲಿ ಪ್ರೀತಿ ಸಹ ಕಳೆದುಕೊಂಡಿದ್ದೇನೆ. ನಾನು ಇನ್ನೊಂದಕ್ಕಾಗಿ ಎರಡನ್ನೂ ತ್ಯಜಿಸಿದ್ದೇನೆ ಹಾಗೂ ಎರಡರಿಂದಲೂ ಕಲಿತಿದ್ದೇನೆ ಎಂದು ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಉದಾಹರಣೆಗೆ ಸಿನಿಮಾಗೂ ಸೇರುವಕ್ಕಿಂತ ಮುಂಚೆ ನಾನು ಒಂದು ಸಂಬಂಧದಲ್ಲಿದ್ದೆ, ಅವರು ಕೂಡ ನನ್ನ ರೀತಿಯಲ್ಲಿಯೇ, ದಕ್ಷಿಣ ಬಾಂಬೆಯ ದೊಡ್ಡ ಕೈಗಾರಿಕಾ ಕುಟುಂಬಕ್ಕೆ ಸೇರಿದವರು. ನಮ್ಮಿಬ್ಬರ ಶಿಕ್ಷಣ, ಕುಟುಂಬ ಎರಡೂ ಹೊಂದಾಣಿಕೆಯಾಗುತ್ತಿತ್ತು. ಆದರೆ, ನಾನು ಸಿನಿಮಾಕ್ಕೆ ಹೋಗಲು ನಿರ್ಧರಿಸಿದಾಗ ನನ್ನ ಸಂಗಾತಿಗೆ ಇಷ್ಟವಿರಲಿಲ್ಲ. ಹಾಗಾಗಿ ನಾನು ಪ್ರೀತಿಯ ಬದಲು ವೃತ್ತಿಧರ್ಮವನ್ನು ಆಯ್ಕೆಮಾಡಿಕೊಂಡೆ ಎಂದು ತಿಳಿಸಿದರು.

ಇಚ್ಛೆ ಇರುವಲ್ಲಿ ಒಂದು ಮಾರ್ಗವಿದೆ ಎಂದು ಹೆಳಿದ ನಟಿ, ಎಲ್ಲದರ ಮೂಲಕ ನನ್ನನ್ನು ಹುಡುಕುವ ಮತ್ತು ಪರಿಸ್ಥಿತಿಯ ಲಾಭವನ್ನು ಪಡೆಯುವ ವ್ಯಕ್ತಿ ನನ್ನ ವ್ಯಕ್ತಿಯಾಗಿರುತ್ತಾರೆ. ನನಗೆ ಹಲವಾರು ಶ್ರೀಮಂತ ವ್ಯಕ್ತಿಗಳ ಪ್ರಸ್ತಾಪಗಳು ಬಂದಿದ್ದಾವೆ. ನನ್ನ ಅರ್ಧದಷ್ಟು ವಯಸ್ಸಿನ ಜನ ನನ್ನನ್ನು ಡೇಟ್​ಗೆ ಕರೆದೊಯ್ಯಲು ಬಯಸುತ್ತಾರೆ. ನಾನು ಅದಕ್ಕೆ ಮುಕ್ತನಾಗಿದ್ದೇನೆ ಏಕೆಂದರೆ, ಒಬ್ಬ ಪುರುಷ ಮಾನಸಿಕವಾಗಿ ಪ್ರಬುದ್ಧನಾಗಿರಬೇಕು. ಇದೇ ರೀತಿ ನನಗಿಂದ ಹಿರಿಯರಾದ ವ್ಯಕ್ತಿಗಳನ್ನು ಭೇಟಿ ಮಾಡಿದ್ದೇನೆ ಎಂದು ಅಮೀಷಾ ತಿಳಿಸಿದ್ದಾರೆ.

ಅಮೇಷ ಪಟೇಲ್​ ಚಲನಚಿತ್ರಗಳು

ಅಮೇಷ ಪಟೇಲ್​ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದು, ಕಹೊ ನಾ... ಪ್ಯಾರ್ ಹೈ, ಬದ್ರಿ, ಗದರ್: ಎಕ್ ಪ್ರೇಮ್ ಕಥಾ, ಫ್ರೆಂಡ್‌ಷಿಪ್, ತ್ರಿವಿಕ್ರಮ್ ಗದರ್ 3 ನಂತಹ ಹಲವಅರು ಸಿನಿಮಾಗಳಲ್ಲಿ ನಟಿಸಿ ನಟನೆಗೆ ಸೈ ಎನಿಸಿಕೊಂಡಿದ್ದಾರೆ. (ಏಜೆನ್ಸೀಸ್​)