ನ್ಯೂಸ್

20 ವರ್ಷಗಳ ಕಾಲ ದೆವ್ವದ ಜತೆ ಲೈಂಗಿಕ ಕ್ರಿಯೆ! ರಾತ್ರಿಯ ಕರಾಳ ಅನುಭವ ಬಿಚ್ಚಿಟ್ಟ ಮಹಿಳೆ

ಬೊಗೋಟಾ: ದೆವ್ವದ ಜತೆ ಲೈಂಗಿಕ ಕ್ರಿಯೆ. ಕೇಳಲು ಇದು ವಿಚಿತ್ರ ಎನಿಸಿದರೂ ಕೊಲಂಬಿಯಾ ಮೂಲದ ಮಹಿಳೆಯೊಬ್ಬರು ಈ ವಿಚಿತ್ರ ಅನುಭವ ಪಡೆದಿದ್ದಾಗಿ ವಾದಿಸಿದ್ದಾಳೆ. ಅಚ್ಚರಿಯ ಸಂಗತಿ ಏನೆಂದರೆ, ಕಳೆದ 20 ವರ್ಷಗಳಿಗೂ ಅಧಿಕ ಕಾಲ ಇಂಥದ್ದೊಂದು ಕ್ಷಣವನ್ನು ಮಹಿಳೆ ಅನುಭವಿಸಿದ್ದಾಳಂತೆ.

ಮಹಿಳೆಯ ಹೆಸರು ಪಾವೊಲಾ ಫ್ಲೋರೆಜ್. ಈಕೆ ಕೊಲಂಬಿಯಾ ಮೂಲದವಳು. ಚಿಕ್ಕವಳಿದ್ದಾಗಲೇ ಆತ್ಮದೊಂದಿಗಿನ ತನ್ನ ಸಂಬಂಧ ಪ್ರಾರಂಭವಾಯಿತು. ರಾತ್ರಿ ಮಲಗುವ ಸಮಯದಲ್ಲಿ ವಿಕಾರವಾದ ದೆವ್ವ ಮನೆಗೆ ಭೇಟಿ ನೀಡುತ್ತಿತ್ತು ಎಂದು ಕೊಲಂಬಿಯಾದ ಕ್ಯಾನಲ್​ 1 ಚಾನೆಲ್​ನಲ್ಲಿ ಪ್ರಸಾರವಾಗುವ ಟಿವಿ ಶೋ ಸಿನ್​ ಕ್ಯಾರೆಟಾದಲ್ಲಿ ಹೇಳಿಕೊಂಡಿದ್ದಾಳೆ. ಎರಡ್ಮೂರು ತಿಂಗಳ ಹಿಂದೆಯೇ ವಾದ ಮಂಡಿಸಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಮತ್ತೆ ಮುನ್ನೆಲೆಗೆ ಬಂದಿದೆ.

ದೆವ್ವದ ಜತೆಗಿನ ಸಂಬಂಧವನ್ನು ವಿರೋಧಿಸಿದೆ ಅದನ್ನು ಸುಮಾರು 20 ವರ್ಷಗಳಿಗೂ ಅಧಿಕ ಸಮಯ ಅನುಭವಿಸಿದ್ದಾಗಿ ಪಾವೊಲಾ ಹೇಳಿದ್ದಾರೆ. ಒಂದು ದಿನ ನಾನು ಮಲಗಿದ್ದಾಗ ನನ್ನ ಕಾಲುಗಳಿಂದ ಎದೆಗೆ ಕೈ ನಿಧಾನವಾಗಿ ಚಲಿಸಿದ ಅನುಭವವಾಯಿತು. ಇದೊಂದು ರೀತಿಯಲ್ಲಿ ವಿಚಿತ್ರವಾಗಿತ್ತು ಮತ್ತು ನಾನು ಹೆದರಿದೆ. ಪದೇಪದೆ ಇದೇ ಅನುಭವವಾಯಿತು. ಆ ಕ್ಷಣದಿಂದ ಅವನು ನನ್ನೊಂದಿಗೆ ಸಂಭೋಗಿಸಲು ಆತ್ಮದಂತೆ ನನ್ನ ಬಳಿಗೆ ಬರಲು ಪ್ರಾರಂಭಿಸಿದನು. ಅಂತಿಮವಾಗಿ ದೆವ್ವದ ಮುಖ ನೋಡುವವರೆಗೂ ಅದನ್ನು 20 ವರ್ಷಗಳ ಕಾಲ ತನ್ನ ಪ್ರೀತಿಯ ಸಂಗಾತಿ ಎಂದು ಪರಿಗಣಿಸಿದ್ದಾಗಿ ಪಾವೊಲೊ ಹೇಳಿಕೊಂಡಿದ್ದಾರೆ.

ಆತ ದೊಡ್ಡ ವ್ಯಕ್ತಿ. ಆದರೆ, ಆ ಒಂದು ದಿನ ಆತನ ಮುಖದ ಒಂದು ನೋಟ ನನಗೆ ಕಾಣಿಸಿತು. ಆತನಿಗೆ ಕೋರೆಹಲ್ಲುಗಳು ಇದ್ದವು ಮತ್ತು ಗಾರ್ಗೋಯ್ಲ್ ಮಾದರಿಯಲ್ಲಿ ಮುಖ ವಿಚಿತ್ರವಾಗಿತ್ತು. ಭಯಾನಕ ಮುಖವನ್ನು ನೋಡಿದ ಬಳಿಕ ಆತನೊಂದಿಗೆ ಯಾವುದೇ ಸಂಪರ್ಕವನ್ನು ಬಯಸಲಿಲ್ಲ ಎಂದು ಪಾವೊಲೊ ಮಾಹಿತಿ ನೀಡಿದ್ದಾರೆ.

ಮನಶಾಸ್ತ್ರಜ್ಞ ಮಾರ್ಟಿಜಾ ಮಾಂಟೆಲೆಗ್ರೆ ಪ್ರಕಾರ, ಪೌಲಾ ಪ್ರಕರಣವು ಸಾಮಾನ್ಯವಲ್ಲ ಮತ್ತು ವಾಸ್ತವವಾಗಿ ಇದೊಂದು ಅಸಮಾನ್ಯ ಪ್ರಕರಣ ಎಂದಿದ್ದಾರೆ. ಈ ರೀತಿಯ ಪ್ರಕರಣ ಕೇಳಿಯೇ ಇಲ್ಲ ಎಂದು ತಿಳಿಸಿದ್ದಾರೆ. ಆದಾಗ್ಯೂ ಪ್ಯಾರಸೈಕಾಲಜಿಸ್ಟ್​ ಜೈರೊ ಉರ್ಬೆಕ್ಸ್, ಇದು ನಂಬಲರ್ಹವಾಗಿದೆ ಎಂದಿದ್ದಾರೆ. ನಡೆದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇನ್‌ಕ್ಯುಬಸ್ ಎಂಬುದು ರಾಕ್ಷಸ ಅಸ್ತಿತ್ವವಾಗಿದೆ. ಇದು ಕಡಿಮೆ-ಆಸ್ಟ್ರಲ್ ಘಟಕವಾಗಿದ್ದು, ಜನರನ್ನು ಸೆಳೆದು ಅವರ ಶಕ್ತಿಯನ್ನು ತೆಗೆದುಕೊಳ್ಳುವಲ್ಲಿ ಅವರು ಪರಿಣತಿ ಹೊಂದಿದೆ ಎಂದಿದ್ದಾರೆ. (ಏಜೆನ್ಸೀಸ್​)