ಕೇರಳ: ಸೌಂದರ್ಯದ ಗಣಿ, ನಟಿ ಹನಿ ರೋಸ್ (Honey Rose) ತಮ್ಮ ಮೊದಲ ಸಿನಿಮಾದಲ್ಲಿ ನಟಿಸಿದಾಗಿನಿಂದ ಉದ್ಘಾಟನಾ ಸಮಾರಂಭಗಳಿಗೆ ಭೇಟಿ ಕೊಡುತ್ತಿದ್ದಾರಂತೆ. ಅದರಲ್ಲೂ ಕೋವಿಡ್ ಸಾಂಕ್ರಾಮಿಕ ರೋಗ ಬಂದು ಹೋದ ನಂತರ ಆನ್‌ಲೈನ್ ಮತ್ತು ಯೂಟ್ಯೂಬ್ ಚಾನೆಲ್‌ಗಳ ಜನಪ್ರಿಯತೆ ಹೆಚ್ಚಾಗಿದ್ದು, ತನ್ನ ಸಿನಿಮಾಗಳ ದೃಶ್ಯಗಳಿಗಿಂತ ಉದ್ಘಾಟನೆ ಕಾರ್ಯಕ್ರಮಗಳ ವಿಡಿಯೋಗಳೇ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ ಎಂದು ನಟಿ ಹೇಳಿದ್ದಾರೆ.
"ಕೇರಳದಲ್ಲಿ ಎಲ್ಲಾ ರೀತಿಯ ಉದ್ಯಮಗಳ ನೂತನ ಮಳಿಗೆ, ಶಾಖೆಗಳ ಉದ್ಘಾಟನೆಗಳಿಗೆ ನನ್ನನ್ನು ಆಹ್ವಾನಿಸುತ್ತಾರೆ. ತೆಲುಗು ನಾಡಿನಲ್ಲಿ ಬಟ್ಟೆ, ಚಿನ್ನದ ಮಳಿಗೆಗೆಳ ಉದ್ಘಾಟನೆಗೆ ಹೋಗ್ತೀನಿ. ಆದರೆ, ಇಲ್ಲಿ (ಕೇರಳ) ಮೆಡಿಕಲ್ ಸ್ಟೋರ್, ಪೆಟ್ರೋಲ್ ಬಂಕ್ ಉದ್ಘಾಟನೆಗೆಲ್ಲ ನನ್ನ ಕರೆಯುತ್ತಾರೆ. ಇದು ಏಕೆ ಅಂತ ನನಗಂತು ಗೊತ್ತಿಲ್ಲ. ಬಹಳ ಆಶ್ಚರ್ಯವಾಗುತ್ತದೆ. 'ಬಾಯ್ಫ್ರೆಂಡ್' ಚಿತ್ರ ಮಾಡಿದ ಬಳಿಕ ಈ ಜನಪ್ರಿಯತೆ ಹೆಚ್ಚಿದೆ. ಅದರಲ್ಲೂ ಕೋವಿಡ್ ನಂತರ ಇಂತಹ ಆಹ್ವಾನಗಳು ಜಾಸ್ತಿಯಾಗಿವೆ" ಎಂದಿದ್ದಾರೆ ಹನಿ.
"ಇದಕ್ಕೆಲ್ಲ ಕಾರಣ ಆನ್‌ಲೈನ್ ಮತ್ತು ಯೂಟ್ಯೂಬ್ ಚಾನೆಲ್‌ಗಳ ಜನಪ್ರಿಯತೆ. ಆರಂಭಿಕ ದಿನಗಳಲ್ಲಿ ಅಷ್ಟೊಂದು ಜಾಲತಾಣದ ಚಾನೆಲ್‌ಗಳು ಇರಲಿಲ್ಲ, ಆದರೆ ಈಗ ಆನ್‌ಲೈನ್ ಮಾಧ್ಯಮಗಳ ಸಂಖ್ಯೆ ಹೆಚ್ಚಾಗಿವೆ. ಎಲ್ಲಾ ಉದ್ಘಾಟನೆಗಳನ್ನು ಇವರು ಸೆರೆಹಿಡಿಯುತ್ತಾರೆ. ಅವುಗಳನ್ನು ನೋಡುವ ಜನರು, ನನ್ನ ನೋಡಲು ಉದ್ಘಾಟನೆ ಸ್ಥಳಕ್ಕೆ ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಪೆಟ್ರೋಲ್ ಬಂಕ್ ಓಪನಿಂಗ್ಗೆ ನನ್ನನ್ನು ಕರೆಸುವ ಮಾತು ಕೇಳಿಬಂದಾಗ ನನಗೆ ಅಚ್ಚರಿ ಉಂಟಾಗುತ್ತದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).