ಮುಂಬೈ: ಒಂದು ಕಾಲದಲ್ಲಿ ಸಹಜೀವನದ ಗೆಳತಿಯಾಗಿದ್ದರೂ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಂತಿಮ ದರ್ಶನ ಪಡೆದು, ಅಂತ್ಯಕ್ರಿಯೆಯಲ್ಲಿ ಭಾಗಿಯಾಗದಿದ್ದದ್ದು ಏಕೆ ಎಂಬುದನ್ನು ನಟಿ ಅಂಕಿತಾ ಲೋಖಂಡೆ ಇದೀಗ ಸ್ಪಷ್ಟಪಡಿಸಿದ್ದಾರೆ.
ನೇಣಿನ ಕುಣಿಕೆಯಲ್ಲಿ ತೂಗಾಡುತ್ತಿದ್ದ ಸುಶಾಂತ್ ದೇಹ ಅಲ್ಲದೆ, ಕುಣಿಕೆಯಿಂದ ಇಳಿಸಿದ ನಂತರದ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಆತನ ಅಂಥ ಚಿತ್ರಗಳನ್ನು ನೋಡಲು ಅವರಿಗೆ ತುಂಬಾ ಆಪ್ತರಾಗಿದ್ದವರಿಗೆ ಮತ್ತು ಕುಟುಂಬಸ್ಥರಿಗೆ ತುಂಬಾ ಕಷ್ಟವಾಗುವಂತಿದ್ದವು ಎಂದು ಮಣಿಕರ್ಣಿಕ ಚಿತ್ರದ ನಟಿ ಹೇಳಿದ್ದಾರೆ.
ಸುಶಾಂತ್ ಮತ್ತು ನಾನು ಸಹಜೀವನದಲ್ಲಿ (ಲಿವ್ಇನ್) ಇದ್ದೆವು. ಆದರೆ, ಪ್ರತ್ಯೇಕಗೊಳ್ಳಲು ನಿರ್ಧರಿಸಿದ್ದೆವು. ಹಾಗೆಂದು ನಮ್ಮಿಬ್ಬರ ನಡುವಿನ ಗೆಳತನವಾಗಲಿ, ಬಾಂಧವ್ಯವಾಗಲಿ ದೂರಾಗಿರಲಿಲ್ಲ. ಈಗಲೂ ನಾನು ಅವರ ಕುಟುಂಬದವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಹಾಗಾಗಿ ಅವರ ಅಂತಿಮ ದರ್ಶನ ಪಡೆದು, ಅಂತ್ಯಸಂಸ್ಥಾರಲ್ಲಿ ಪಾಲ್ಗೊಳ್ಳುವುದು ನನ್ನ ವೈಯಕ್ತಿಕ ವಿಷಯ ಎಂದು ತಿಳಿಸಿದ್ದಾರೆ.
ಇದೆಲ್ಲದ್ದಕ್ಕಿಂತ ಮುಖ್ಯವಾಗಿ ನನಗೆ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಆ ಸ್ಥಿತಿಯಲ್ಲಿ ನೋಡಲು ಸ್ವಲ್ಪವೂ ಇಷ್ಟವಿರಲಿಲ್ಲ. ಆದ್ದರಿಂದ, ನಾನು ಅವರ ಅಂತಿಮ ದರ್ಶನ ಪಡೆಯಲಾಗಲಿ, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.