ನ್ಯೂಸ್

9 ವರ್ಷದ ಅವಳಿ ಹೆಣ್ಣುಮಕ್ಕಳಿಂದ ಬಾಡಿಗೆ ವಸೂಲಿ ಮಾಡುವ ತಾಯಿ! ಕಾರಣವೇನು ಗೊತ್ತಾ? Daughter

Daughter : ಅಮೆರಿಕದ ಅಟ್ಲಾಂಟಾದಲ್ಲಿ ಮಹಿಳೆಯೊಬ್ಬಳು ತನ್ನ ಅವಳಿ ಹೆಣ್ಣುಮಕ್ಕಳಿಂದ ಮನೆಯಲ್ಲಿ ವಾಸಿಸಲು ಬಾಡಿಗೆ ವಸೂಲಿ ಮಾಡುತ್ತಾಳೆ. ತಾಯಿ ಸಣ್ಣ ಮಕ್ಕಳಿಂದ ಬಾಡಿಗೆ ಎಂದು ಹಣ ಪಡೆಯುತ್ತಿರುವುದರ ಹಿಂದೆ ಒಂದು ಉದ್ದೇಶ ಕೂಡಾ ಇದೆ. ಈ ಕುರಿತಾಗಿ ನಾವು ಇಂದು ತಿಳಿದುಕೊಳ್ಳೋಣ...

38 ವರ್ಷದ ಲಾಟೋಯಾ ವಿಟ್‌ಫೀಲ್ಡ್ ತಮ್ಮ 9 ವರ್ಷದ ಅವಳಿ ಹೆಣ್ಣುಮಕ್ಕಳಾದ ಗ್ರೇಸ್ ಮತ್ತು ಆಟಮ್‌ಗೆ ಜತೆಗೆ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಒಂದು ದಿನ ಟೋಯಾ ಅವರ ಹೆಣ್ಣುಮಕ್ಕಳು ರೆಸ್ಟೋರೆಂಟ್‌ಗೆ ಹೋಗಬೇಕೆಂದು ಹೇಳಿದಾಗ. ಟೋಯಾ ತನ್ನ ಬಳಿ ಅಷ್ಟು ಹಣವಿಲ್ಲ ಎಂದು ವಿವರಿಸಿದಾಗ, ಹುಡುಗಿಯರು ತಕ್ಷಣ, ನಿಮ್ಮ ಸಂಬಳ ಈಗಷ್ಟೇ ಬಂದಿದೆ ಎಂದು ಹೇಳಿದರು. ಇದನ್ನು ಕೇಳಿದ ಟೋಯಾ ತಮ್ಮ ಹೆಣ್ಣುಮಕ್ಕಳಿಗೆ ಜೀವನದ ಪಾಠದ ಜೊತೆಗೆ ಹಣದ ಬೆಲೆಯನ್ನು ಕಲಿಸಲು ನಿರ್ಧರಿಸಿದರು.

ಟೋಯಾ ತನ್ನ ಹೆಣ್ಣುಮಕ್ಕಳಿಗೆ ನಕಲಿ ಬಾಡಿಗೆ ಒಪ್ಪಂದ ಮತ್ತು 'ಪ್ಲೇ ಮನಿ' ವ್ಯವಸ್ಥೆಯನ್ನು ಸೃಷ್ಟಿಸಿದಳು, ಪ್ರತಿ ವಾರ ತನ್ನ ಹೆಣ್ಣುಮಕ್ಕಳಿಗೆ ಸಂಬಳವಾಗಿ ಸ್ವಲ್ಪ ಹಣವನ್ನು ನೀಡುತ್ತಾರೆ. ಉತ್ತಮ ಅಂಕಗಳನ್ನು ಪಡೆದರೆ, ಜಗಳಗಳನ್ನು ಸ್ವತಃ ಪರಿಹರಿಸಿಕೊಂಡರೆ ಅವರಿಗೆ ಬೋನಸ್‌ಗಳನ್ನು ಸಹ ನೀಡುತ್ತಾರೆ. ಈ ಹಣದಿಂದ ಈ ಪುಟ್ಟ ಮಕ್ಕಳು ಮನೆ ಬಾಡಿಗೆ ಮತ್ತು ವಿದ್ಯುತ್, ವೈ-ಫೈ ಮತ್ತು ಗ್ಯಾಸ್‌ನಂತಹ ವೆಚ್ಚಗಳನ್ನು ಪಾವತಿಸಬೇಕಾಗುತ್ತದೆ ಎನ್ನುವ ನಿಯಮವನ್ನು ಹಾಕಿದ್ದಾಳೆ. ಮನೆಯನ್ನು ಕೊಳಕು ಮಾಡಿದರೆ ಅಥವಾ ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿಸದಿದ್ದರೆ ಅವರಿಗೆ ದಂಡ ವಿಧಿಸಲಾಗುವುದು ಎನ್ನುವ ನಿಯಮವನ್ನು ಸ್ವಂತ ಮಕ್ಕಳಿಗೆ ವಿಧಿಸಿದ್ದಾರೆ.

ಈ ವಿಧಾನವು ತನ್ನ ಹೆಣ್ಣುಮಕ್ಕಳಿಗೆ ( Daughter ) ಹಣದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಕಲಿಸುತ್ತದೆ, ಜೀವನ ಪಾಠ ಕಲಿಯುತ್ತಾರೆ ಎಂದು ಮಹಿಳೆ ನಂಬುತ್ತಾರೆ. ಹೀಗಾಗಿ ಮಕ್ಕಳಿಂದ ಬಾಡಿಗೆ ಪಡೆಯುತ್ತಿದ್ದಾಳೆ.