Private Video: ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಯುವತಿಯೊಬ್ಬಳು ತಮ್ಮ ಮನೆಗೆ ಊಟಕ್ಕೆ ಬಂದಿದ್ದ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅದರ ವಿಡಿಯೋ ಲೀಕ್ ಮಾಡುವುದಾಗಿ ಯುವಕ ಬೆದರಿಸಿದ ಘಟನೆ ಹೈದರಾಬಾದ್ನ ಬಂಜಾರ ಹಿಲ್ಸ್ನಲ್ಲಿ ನಡೆದಿದೆ.
ಇದನ್ನೂ ಓದಿ:ವಿಜಿಲೆನ್ಸ್ ದಾಳಿಗೆ ಹೆದರಿ 500 ರೂ. ಬಂಡಲ್ಗಳನ್ನು ಕಿಟಕಿಯಿಂದ ಹೊರ ಎಸೆದ ಸರ್ಕಾರಿ ನೌಕರ!| Vigilance Raid
ಆಕೆಯ ಫೋಟೋಗಳನ್ನು ಬಹಿರಂಗಪಡಿಸುವದಾಗಿ ಬ್ಲಾಕ್ಮೇಲ್ ಮಾಡಿ 1 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಬಂಜಾರ ಹಿಲ್ಸ್‌ನ ನಿವಾಸಿ ಮಹೇಂದ್ರ ವರ್ಧನ್ ಎಂಬ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಏನು..?
ಬಂಜಾರಾ ಹಿಲ್ಸ್‌ನ ಮಹೇಂದ್ರವರ್ಧನ್ ಎಂಬ ಯುವಕ ಫೇಸ್‌ಬುಕ್‌ನಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಮಹೇಂದ್ರ ತನ್ನನ್ನು ತಾನು ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ಪರಿಚಯಿಸಿಕೊಂಡಿದ್ದಾನೆ. ನಿರಂತರ ಪರಿಚಯಯದ ಬಳಿಕ 2023ರ ಆಗಸ್ಟ್.15 ರಂದು ಆಕೆ ಜತೆ ಗೆ ಸ್ನೇಹಿತೆ ಇಬ್ಬರೂ ಮಹೇಂದ್ರನ ಮನೆಗೆ ಊಟಕ್ಕೆ ಹೋಗಿದ್ದಾರೆ. ಆ ಸಮಯದಲ್ಲಿ, ಆಕೆಗೆ ನಿದ್ರಾಜನಕವನ್ನು(ನಿದ್ರೆ ಮಾತ್ರೆ) ನೀಡಿ. ಯುವತಿಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಇದನ್ನು ಚಿತ್ರೀಕರಣ ಮಾಡಿಕೊಂಡ ಇತ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ನಿರಂತರ ಬ್ಲಾಕ್ಮೇಲ್ ಮಾಡಿದ್ದಾನೆ. ಇದಕ್ಕೆ ಹೆದರಿದ ಯುವತಿ 20 ಲಕ್ಷ ರೂ. ಕೊಟ್ಟಿದ್ದಾಳೆ.
ಯುವತಿಯ ಬೆನ್ನು ಬೀಡದ ಇತ ನಿರಂತರ ಬೆದರಿಕೆ ಹಾಕಿದ್ದಾನೆ. ಆರೋಪಿಯ ಕಿರುಕುಳ ತಾಳಲಾರದೇ ಪದೇಪದೆ ಬೇಸತ್ತ ಆಕೆ ಪೊಲೀಸ್ ದೂರು ನೀಡಿದ್ದಾಳೆ. ಇನ್ನು ಇತನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 64(1), 308(2), ಮತ್ತು 351(2) ಅಡಿಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)